ಬೆಂಗಳೂರು:
ಕರ್ನಾಟಕದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಹಿನ್ನಡೆಯಾಗಿದ್ದು, ಅದರ ಪ್ರಮುಖ ಮುಖ ಮತ್ತು ಮಾಜಿ ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರು ಬುಧವಾರ ಪಕ್ಷವನ್ನು ತೊರೆದು ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ರಾವ್ ಅವರು ಕೇವಲ 11 ತಿಂಗಳ ಹಿಂದೆ ನವದೆಹಲಿಯಲ್ಲಿ ಎಎಪಿ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಮ್ಮುಖದಲ್ಲಿ ಆಪ್ ಸೇರಿದ್ದರು.
ಇಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡ ನಿವೃತ್ತ ಐಪಿಎಸ್ ಅಧಿಕಾರಿ, ಬಿಜೆಪಿಯಿಂದ ಮಾತ್ರ ಭಾರತವನ್ನು ಬಲಪಡಿಸಲು ಮತ್ತು ಕಳೆದುಹೋದ ವೈಭವವನ್ನು ಮರಳಿ ತರಲು ಸಾಧ್ಯ ಎಂದು ಹೇಳಿದರು.
Joined BJP today in presence of Sh Kateelji, State President and blessed by @BSBommai to be part of honable PM @narendramodi global leadership initiative. Very grateful to @JoshiPralhad , @blsanthosh pic.twitter.com/hnNDLAJL0m
— Bhaskar Rao (@Nimmabhaskar22) March 1, 2023
‘ಏಕ್ ಭಾರತ್, ಸಮೃದ್ಧ ಭಾರತ’ (ಏಕ ಭಾರತ, ಸಮೃದ್ಧ ಭಾರತ) ಮಾಡಲು ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಲಪಡಿಸಲು ನಾವೆಲ್ಲರೂ ಕೈಜೋಡಿಸಬೇಕು. ಬಿಜೆಪಿಯಲ್ಲಿ ಯುವಕರು ಮತ್ತು ಮಹಿಳೆಯರಿಗೆ ನೀಡಿದ ಪ್ರಾಧಾನ್ಯತೆಯಿಂದ ನಾನು ಪ್ರಭಾವಿತನಾಗಿದ್ದೇನೆ ಎಂದು ರಾವ್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಕಟೀಲು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಬಿಜೆಪಿಯ ಇತರ ಹಿರಿಯ ನಾಯಕರ ಮಾರ್ಗದರ್ಶನ ಪಡೆಯುವುದಾಗಿಯೂ ಅವರು ಹೇಳಿದರು.