ಬೆಂಗಳೂರು:
ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಅವರಿಗೆ ಕೇಂದ್ರ ಗೃಹ ಇಲಾಖೆ Z ಕೆಟಗರಿ ಭದ್ರತೆಯನ್ನು ನೀಡಿದೆ
ರಾಜ್ಯದ ಒಳಗೆ ಯಡಿಯೂರಪ್ಪನವರಿಗೆ Z ವರ್ಗದ ಭದ್ರತೆ ಒದಗಿಸಿದ್ದು, ಸದ್ಯದಲ್ಲೇ ಸಿಆರ್‌ಪಿಎಫ್ ಸಿಬ್ಬಂದಿಯಿಂದ ಭದ್ರತೆ ಕ್ರಮ ಒದಗಿಸಲಾಗುತ್ತದೆ. ಎಲ್ಲಾ ಮಾಜಿ ಸಿಎಂಗಳ ಭದ್ರತೆಯನ್ನು ಕೇಂದ್ರ ಗೃಹ ಇಲಾಖೆ ವಾಪಸ್ ಪಡೆದಿತ್ತು. ಇದರಿಂದ ಸರ್ಕಾರಕ್ಕೆ ಭದ್ರತೆ ವಾಪಸ್ ಕೊಡುವಂತೆ ಯಡಿಯೂರಪ್ಪ, ಡಿವಿ ಸದಾನಂದ ಗೌಡ ಮತ್ತು ಜಗದೀಶ್ ಶೆಟ್ಟರ್ ಪತ್ರ ಬರೆದಿದ್ದರು. ಇದೀಗ ಯಡಿಯೂರಪ್ಪನವರಿಗೆ Z ಕೆಟಗರಿಯ ಭದ್ರತೆ ಕೊಡಲಾಗಿದೆ.
ಗೃಹ ಸಚಿವಾಲಯದ ನಿರ್ದೇಶನದಂತೆ ಯಡಿಯೂರಪ್ಪ ಅವರ ಉನ್ನತೀಕರಿಸಿದ ಭದ್ರತಾ ವಿವರಗಳನ್ನು ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಕಮಾಂಡೋಗಳು ಒದಗಿಸುತ್ತಾರೆ. ಈ ಸಮಗ್ರ ಭದ್ರತಾ ಕ್ರಮಗಳನ್ನು ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ ಮತ್ತು ಸಿಬ್ಬಂದಿಗಳ ಗಣನೀಯ ನಿಯೋಜನೆಯನ್ನು ಒಳಗೊಂಡಿರುತ್ತದೆ