Home ಮಂಗಳೂರು Kukke Subramanya Temple | Lunar Eclipse: ಅಕ್ಟೋಬರ್​ 28ರ ಸಂಜೆ ಶನಿವಾರ ಸಂಜೆ 6.30ರ...

Kukke Subramanya Temple | Lunar Eclipse: ಅಕ್ಟೋಬರ್​ 28ರ ಸಂಜೆ ಶನಿವಾರ ಸಂಜೆ 6.30ರ ಬಳಿಕ ದೇವರ ದರ್ಶನ ಬಂದ್

43
0
Kukke Subramanya Temple | this Saturday after 6.30 p.m., God's darshan will be closed
Kukke Subramanya Temple | this Saturday after 6.30 p.m., God's darshan will be closed

ಮಂಗಳೂರು:

ಶನಿವಾರ ಅಕ್ಟೋಬರ್​ 28 ರಂದು ಈ ವರ್ಷದ ಕೊನೆಯ ಚಂದ್ರಗ್ರಹಣ ಹಾಗಾಗಿ ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನಲ್ಲಿರುವ ಪ್ರಸಿದ್ಧ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಸಮಯದಲ್ಲಿ ವ್ಯತ್ಯಾಸವಿರುತ್ತದೆ.

ಶನಿವಾರದಂದು ಸುಬ್ರಮಣ್ಯ ದೇವರ ದರ್ಶನ ಸಮಯದಲ್ಲಿ ಬದಲಾವಣೆ ಮಾಡಲಾಗಿದ್ದು, ರಾತ್ರಿಯ ಮಹಾಪೂಜೆ ಸಂಜೆ 6.30 ಕ್ಕೇ ಮುಕ್ತಾಯವಾಗಲಿದೆ. ಅಕ್ಟೋಬರ್​ 28ರ ಸಂಜೆ ಶನಿವಾರ ಸಂಜೆ 6.30ರ ಬಳಿಕ ದೇವರ ದರ್ಶನ ಬಂದ್ ಮಾಡಲಾಗಿದೆ.

ಶನಿವಾರ ಸಂಜೆಯ ಆಶ್ಲೇಷಾ ಬಲಿ ಹಾಗೂ ರಾತ್ರಿಯ ಅನ್ನದಾನ ಸೇವೆಯೂ ಬಂದ್ ಆಗಿರುತ್ತದೆ ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ಶನಿವಾರ ರಾತ್ರಿ 01.04 ಗಂಟೆಗೆ ಗ್ರಹಣ ಸ್ಪರ್ಶವಾಗಿ ರಾತ್ರಿ 02.24 ಗಂಟೆಗೆ ಗ್ರಹಣ ಮೋಕ್ಷ ಪ್ರಾಪ್ತಿಯಾಗಲಿದೆ.

LEAVE A REPLY

Please enter your comment!
Please enter your name here