Home ರಾಜಕೀಯ ಮಾಜಿ ಗಣಿ ಉದ್ಯಮಿ ಜನಾರ್ದನ ರೆಡ್ಡಿ ಗೆಲುವು; ಅವರ ಪತ್ನಿ, ಇಬ್ಬರು ಸಹೋದರರಿಗೆ ಸೋಲು

ಮಾಜಿ ಗಣಿ ಉದ್ಯಮಿ ಜನಾರ್ದನ ರೆಡ್ಡಿ ಗೆಲುವು; ಅವರ ಪತ್ನಿ, ಇಬ್ಬರು ಸಹೋದರರಿಗೆ ಸೋಲು

57
0
Former mining tycoon Janardhan Reddy wins
Former mining tycoon Janardhan Reddy wins

ಬೆಂಗಳೂರು:

ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಶನಿವಾರ ಪ್ರಕಟವಾಗಿದ್ದು, ಕೆಲವು ತಿಂಗಳ ಹಿಂದಷ್ಟೇ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ(ಕೆಆರ್‌ಪಿಪಿ) ಸ್ಥಾಪಿಸಿದ್ದ ಮಾಜಿ ಗಣಿ ಉದ್ಯಮಿ ಮತ್ತು ಮಾಜಿ ಸಚಿವ ಜಿ ಜನಾರ್ದನ ರೆಡ್ಡಿ ಅವರು ಗಂಗಾವತಿ ಕ್ಷೇತ್ರದಲ್ಲಿ ಗೆದ್ದು ಬೀಗಿದ್ದಾರೆ.

ಆದರೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಸ್ಪರ್ಧಿಸಿದ್ದ ಅವರ ಪತ್ನಿ ಮತ್ತು ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಅವರ ಇಬ್ಬರು ಸಹೋದರರು ಸೋತಿದ್ದಾರೆ.

ಬಳ್ಳಾರಿ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾರಾ ಭರತ್ ರೆಡ್ಡಿ ಗೆಲುವು ಸಾಧಿಸಿದರೆ, ಜನಾರ್ದನ ರೆಡ್ಡಿ ಅವರ ಪತ್ನಿ ಅರುಣಾ ಲಕ್ಷ್ಮಿ(ಕೆಆರ್‌ಪಿಪಿ) ಮತ್ತು ಅವರ ಸಹೋದರ ಜಿ ಸೋಮಶೇಖರ ರೆಡ್ಡಿ ಇಬ್ಬರೂ ಸೋತಿದ್ದಾರೆ.

ಭರತ್ ರೆಡ್ಡಿ 80,744 ಮತಗಳನ್ನು ಪಡೆದರೆ, ಲಕ್ಷ್ಮಿ ಅರುಣಾ 46,171 ಮತ ಮತ್ತು ಸೋಮಶೇಖರ ರೆಡ್ಡಿ 35,491 ಮತಗಳನ್ನು ಪಡೆದಿದ್ದಾರೆ.

ಇನ್ನು ಹರಪನಹಳ್ಳಿಯಲ್ಲಿ ಪಕ್ಷೇತರ ಅಭ್ಯರ್ಥಿ ಎಂಪಿ ಲತಾ ಮಲ್ಲಿಕಾರ್ಜುನ್ ಅವರು ಜನಾರ್ದನ ರೆಡ್ಡಿ ಅವರ ಇನ್ನೊಬ್ಬ ಸಹೋದರ ಜಿ ಕರುಣಾಕರ ರೆಡ್ಡಿ(ಬಿಜೆಪಿ) ಅವರ ವಿರುದ್ಧ 13,845 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಮಾಜಿ ಉಪಮುಖ್ಯಮಂತ್ರಿ ದಿವಂಗತ ಎಂಪಿ ಪ್ರಕಾಶ್ ಅವರ ಪುತ್ರಿ ಲತಾ ಮಲ್ಲಿಕಾರ್ಜುನ್ ಅವರಿಗೆ ಕೆಆರ್‌ಪಿಪಿ ಬೆಂಬಲ ನೀಡಿತ್ತು ಎಂದು ಆರೋಪಿಸಲಾಗಿದೆ.

ಒಂದು ಕಾಲದಲ್ಲಿ ಜನಾರ್ದನ ರೆಡ್ಡಿ ಅವರ ಆಪ್ತರಾಗಿದ್ದ ಸಾರಿಗೆ ಸಚಿವ ಬಿ ಶ್ರೀರಾಮುಲು ಮತ್ತು ಅವರ ಸೋದರಳಿಯ ಟಿ ಹೆಚ್ ಸುರೇಶ್ ಬಾಬು ಕೂಡ ಚುನಾವಣೆಯಲ್ಲಿ ಸೋತಿದ್ದಾರೆ.

ಶ್ರೀರಾಮುಲು ಅವರು ಬಳ್ಳಾರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ ನಾಗೇಂದ್ರ ಅವರ ವಿರುದ್ಧ ಸೋಲು ಕಂಡಿದ್ದರೆ, ಕಂಪ್ಲಿಯಲ್ಲಿ ಜೆಎನ್ ಗಣೇಶ್ ಅವರ ವಿರುದ್ಧ ಸುರೇಶ್ ಬಾಬು ಸೋತಿದ್ದಾರೆ.

LEAVE A REPLY

Please enter your comment!
Please enter your name here