ಸಚಿವ ಮುರುಗೇಶ್ ನಿರಾಣಿ ನೇತೃತ್ವದ ಎಂಆರ್ ಎನ್ ಸಮೂಹ ಸಂಸ್ಥೆಯಿಂದ ಕರ್ನಾಟಕದಲ್ಲಿ ಸಿಎನ್‍ಜಿ ಟ್ರಾಕ್ಟರುಗಳ ಉತ್ಪಾದನೆ
ನವದೆಹಲಿ:
ಇಂಧನ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಡೀಸೆಲ್ ಟ್ರಾಕ್ಟರ್ ಅನ್ನು ಎಂಅರ್ ಎನ್ ಸಮೂಹ ಸಂಸ್ಥೆಯು ಸಂಕುಚಿತ ನೈಸರ್ಗಿಕ ಅನಿಲ (ಸಿಎನ್‌ಜಿ) ವಾಹನವಾಗಿ ಪರಿವರ್ತಿಸುವತ್ತ ದೃಡ ಹೆಜ್ಜೆ ಇಟ್ಟಿದೆ.
ಶುಕ್ರವಾರ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಭಾರತದ ಮೊದಲ “ಸಿಎನ್‍ಜಿ ಟ್ರ್ಯಾಕ್ಟರ್” ಅನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಭೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹಾಗೂ ಎಂಅರ್ ಎನ್ ಸಮೂಹ ಸಂಸ್ಥೆಯ ವ್ಯವಸ್ಥಾಪಕರ ನಿದೇರ್ಶಕರಾದ ವಿಜಯ್ ನಿರಾಣಿ ಅವರು,ಲೋಕರ್ಪಾಣೆ ಮಾಡಿದರು.
ಈಗಾಗಲೇ ಸಕ್ಕರೆ ಉತ್ಪಾದನೆ ಸೇರಿದಂತೆ ಹಲವು ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವುದರ ಜೊತೆಗೆ ಇತರೆ ಕೃಷಿ ಆಧಾರಿತ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿರುವ ಕರ್ನಾಟಕದ ಮೂಲದ ಹಾಗೂ ಸಚಿವ ಮುರುಗೇಶ್ ನಿರಾಣಿ ನೇತೃತ್ವದ ಎಂಆರ್ ಎನ್ ಸಮುಹಾ ಸಂಸ್ಥೆಯೂ ಡೀಸೆಲ್ ಟ್ರಾಕ್ಟರುಗಳನ್ನು ಸಿಎನ್ಜಿ ಟ್ರಾಕ್ಟರುಗಳಾಗಿ ಪರಿವರ್ತಿಸಲು ರಾಮ್ಯಾಟ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್‍ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.
ಎಂಆರ್ ಎನ್ ಸಮೂಹದ ಭಾಗವಾಗಿರುವ ಲೀಫಿನಿಟಿ ಬಯೋ ಎನರ್ಜಿ ಪ್ರೈವೇಟ್ ಲಿಮಿಟೆಡ್ ಮೊದಲ ಹಂತದಲ್ಲಿ 500 ಡೀಸೆಲ್ ಟ್ರಾಕ್ಟರುಗಳನ್ನು ಸಿಎನ್‍ಜಿ ಎಂಜಿನ್ ಟ್ರಾಕ್ಟರುಗಳಾಗಿ ಪರಿವರ್ತಿಸುವ ಯೋಜನೆಯನ್ನು ಹಾಕಿಕೊಂಡಿದೆ. 2023 ರ ವೇಳೆಗೆ 1,500 ಟ್ರಾಕ್ಟರುಗಳನ್ನು ಸಿಎನ್ಜಿ ಟ್ರಾಕ್ಟರುಗಳಾಗಿ ಪರಿವರ್ತಿಸುವ ಗುರಿಯನ್ನು ಇಟ್ಟುಕೊಂಡಿದೆ.

ಸಿಎನ್‍ಜಿ ಟ್ರ್ಯಾಕ್ಟರ್ ನ ಎಂಜಿನ್ 10 ರಿಂದ 15 ವರ್ಷಗಳಷ್ಟು ಬಾಳಿಕೆ ಬರಲಿದೆ. ಎಂಆರ್ ಎನ್ ಸಮೂಹವು ಶೀಘ್ರದಲ್ಲೇ ಸಿಎನ್‍ಜಿ ವಿತರಣಾ ಕೇಂದ್ರಗಳನ್ನು ಸ್ಥಾಪಿಸಲಿದ್ದು, ಇದರಲ್ಲಿ ಎಂಜಿನ್ ಪರಿವರ್ತನೆ ಮತ್ತು ಸಿಎನ್‍ಜಿ ಅನಿಲ ಕೇಂದ್ರವನ್ನು ಬಾಗಲಕೋಟೆ ಜಿಲ್ಲೆಯಲ್ಲಿ ಶೀಘ್ರದಲ್ಲೇ ಸ್ಥಾಪಿಸಲು ತೀರ್ಮಾನಿಸಿದೆ.
“ಆತ್ಮನಿರ್ಭಾರ ಭಾರತ್ ‘ ಅಭಿಯಾನದ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿಯಂತೆ ದೇಶವನ್ನು ಎಲ್ಲಾ ಕ್ಷೇತ್ರಗಳಲ್ಲೂ ಸ್ವಾವಲಂಬಿಗಳನ್ನಾಗಿ ಮಾಡುವ ಕನಸನ್ನು ಸಾಕಾರಗೊಳಿಸುವ ಮಹತ್ವದ ಹೆಜ್ಜೆಯಾಗಿ ದೇಶದಲ್ಲಿ ಮೊದಲ ಸಿಎನ್‍ಜಿ ಟ್ರಾಕ್ಟರ್ ಅನ್ನು ಬಿಡುಗಡೆ ಮಾಡಲಾಗಿದೆ.
ಇತ್ತೀಚಿನ ತಂತ್ರಜ್ಞಾನವನ್ನು ಬಳಸಿಕೊಂಡು ನೈಸರ್ಗಿಕ ಅನಿಲ (ಸಿಎನ್ಜಿ) ಟ್ರಾಕ್ಟರ್ ಆಗಿ ಪರಿವರ್ತಿಸಲಾಗಿದೆ. ಇದು ರೈತರಿಗೆ ಮತ್ತು ಕೃಷಿ ಕ್ಷೇತ್ರಕ್ಕೆ ಬಹಳ ಸಹಾಯ ಮಾಡಲಿದ್ದು, ಇಂಧನ ಕ್ಷೇತ್ರದಲ್ಲಿ ಸ್ವಾವಲಂಬನೆಯ ಗುರಿಯನ್ನು ಸಾಧಿಸಲು ಪ್ರಮುಖ ಪಾತ್ರ ವಹಿಸಲಿದೆ.
ರಾಮ್ಯಾಟ್ ಟೆಕ್ನೋ ಸೊಲ್ಯೂಷನ್ಸ್ ಮತ್ತು ತೋಮಸೆಟ್ಟೊ ಅಚಿಲ್ಲೆ ಇಂಡಿಯಾ ಜಂಟಿಯಾಗಿ ಮಾಡಿದ ಈ ಪರಿವರ್ತನೆಯು ರೈತರು ತಮ್ಮ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಾಗೆಯೇ ವೆಚ್ಚವನ್ನು ಕಡಿಮೆ ಮಾಡಿ ಗ್ರಾಮೀಣ ಭಾರತದಲ್ಲಿ ಉದ್ಯೋಗವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.
ರೈತರಿಗೆ ಹೆಚ್ಚಿನ ಅನುಕೂಲ
ಇದರಿಂದ ರೈತನಿಗೆ ಪ್ರಮುಖ ಲಾಭವೆಂದರೆ ಇಂಧನ ವೆಚ್ಚದಲ್ಲಿ ವಾರ್ಷಿಕವಾಗಿ 1.5 ಲಕ್ಷ ರೂ.ಗಿಂತ ಹೆಚ್ಚಿನ ಹಣ ಉಳಿತಾಯ ಅಗಲಿದೆ. ಈ ತಂತ್ರಜ್ಞಾನದ ಮೂಲಕ ರೈತರು ತಮ್ಮ ಡೀಸೆಲ್ ಟ್ರಾಕ್ಟರುಗಳನ್ನು ಸಿಎನ್ಜಿ ಟ್ರಾಕ್ಟರುಗಳಾಗಿ ಪರಿವರ್ತಿಸಿ ಆ ಮೂಲಕ ಇಂಧನ ವೆಚ್ಚವನ್ನು ಕಡಿಮೆ ಮಾಡುವುದು ಮತ್ತು ದಕ್ಷತೆಯನ್ನು ಹೆಚ್ಚಿಸಲು ಇದು ಅನುಕೂಲವಾಗಲಿದೆ. ಡೀಸೆಲ್ ಟ್ರಾಕ್ಟರುಗಳನ್ನು ಸಿಎನ್ಜಿ ಟ್ರಾಕ್ಟರ್ ಆಗಿ ಪರಿವರ್ತಿಸುವುದರಿಂದ ಮಾಲಿನ್ಯವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
- ನವದೆಹಲಿಯಲ್ಲಿ ಭಾರತದ ಮೊದಲ ಸಿಎನ್‍ಜಿ ಟ್ರಾಕ್ಟರ್ ಬಿಡುಗಡೆ.
- ಕೇಂದ್ರ ಸಚಿವ ನಿತೀನ್ ಗಡ್ಕರಿ ಅವರಿಂದ ಲೋಕಾರ್ಪಣೆ
- ಇದು ಸಂಪೂರ್ಣ ಮಾಲಿನ್ಯ ಮುಕ್ತ ಹಾಗೂ ಪರಿಸರ ಸ್ನೇಹಿ
- ಪ್ರಧಾನಮಂತ್ರಿಯವರ ಆತ್ಮನಿರ್ಭಾರ
- ಯೋಜನೆಯನ್ನು ಸಕಾರಗೊಳಿಸುವಲ್ಲಿ ದಿಟ್ಟ ಹೆಜ್ಜೆ
- ಸಿಎನ್‍ಜಿ ಟ್ರಾಕ್ಟರುಗಳು ಆರ್ಥಿಕವಾಗಿ ಲಾಭದಾಯಕ ಮತ್ತು ಅತ್ಯಂತ ಪರಿಣಾಮಕಾರಿ
ಡೀಸೆಲ್ ಚಾಲನೆಯಲ್ಲಿರುವ ಎಂಜಿನ್‌ಗೆ ಹೋಲಿಸಿದರೆ ಈ ವಾಹನ ಹೆಚ್ಚಿನ ಶಕ್ತಿ ಉತ್ಪಾದಿಸುತ್ತದೆ. ಡೀಸೆಲ್‌ಗೆ ಹೋಲಿಸಿದರೆ ಒಟ್ಟಾರೆ ಹೊರಸೂಸುವಿಕೆಯು ಶೇಕಡಾ 70 ರಷ್ಟು ಕಡಿಮೆಯಾಗುತ್ತದೆ. ಮೂರನೆಯದಾಗಿ, ಪ್ರಸ್ತುತ ಡೀಸೆಲ್ ಬೆಲೆ ಲೀಟರ್‌ಗೆ 77.43 ರೂ ಆಗಿದ್ದು, ಸಿಎನ್‌ಜಿ ಕೇವಲ ಕೆಜಿಗೆ 42 ರೂ. ಇದೆ. ಇದರಿಂದ ದರ ವೆಚ್ಚದಲ್ಲಿ ಶೇಕಡಾ 50 ರಷ್ಟು ಉಳಿತಾಯ ಮಾಡಲು ಇದು ರೈತರಿಗೆ ಸಹಾಯಕವಾಗಿದೆ.
ಸಿಎನ್‌ಜಿ ಶುದ್ಧ ಇಂಧನವಾಗಿದ್ದು, ಇಂಗಾಲ ಮತ್ತು ಇತರ ಮಾಲಿನ್ಯಕಾರಕಗಳ ಕಡಿಮೆ ಅಂಶವನ್ನು ಹೊಂದಿದೆ. ಇದು ಶೂನ್ಯ ಸೀಸವನ್ನು ಹೊಂದಿರುವುದರಿಂದ ನಾಶಕಾರಿಯಲ್ಲ. ಹೀಗಾಗಿ ಎಂಜಿನ್‌ನ ಜೀವಿತಾವಧಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಾಗೆ ಕಡಿಮೆ ನಿರ್ವಹಣೆ ಇರುತ್ತದೆ.
ಸಿಎನ್‍ಜಿ ಟ್ರಾಕ್ಟರುಗಳ ಎಂಜಿನ್ ಸಾಮಾಥ್ರ್ಯವು ಹೆಚ್ಚಾಗಿದ್ದು, ಮಾಲಿನ್ಯ ರಹಿತವಾಗಿದೆ.ಡೀಸೆಲ್ ಟ್ರಾಕ್ಟರುಗಳಿಗಿಂತ ಸಾಮಥ್ರ್ಯ ಹೊಂದಿರುವುದು ಮತ್ತೊಂದು ವಿಶೇಷವಾಗಿರುವುದರಿಂದ ಇದು ರೈತರಿಗೆ ಎಲ್ಲಾ ರೀತಿಯಲ್ಲೂ ಹೆಚ್ಚಿನ ಲಾಭ ಉಂಟು ಮಾಡಲಿದೆ.
₹1 ಟ್ರಿಲಿಯನ್ ಉಳಿತಾಯ
ಡೀಸೆಲ್ ಟ್ರಾಕ್ಟರ್ ಅನ್ನು ಇತ್ತೀಚಿನ ತಂತ್ರಜ್ಞಾನವನ್ನು ಬಳಸಿಕೊಂಡು ಸಂಕುಚಿತ ನೈಸರ್ಗಿಕ ಅನಿಲ (ಸಿಎನ್ಜಿ) ಟ್ರಾಕ್ಟರ್ ಆಗಿ ಪರಿವರ್ತಿಸಲಾಗಿದೆ, ಇದು ₹ 1 ಟ್ರಿಲಿಯನ್( 1 ಲಕ್ಷ ಕೋಟಿ) ಯಷ್ಟು ಇಂಧನವನ್ನು ಉಳಿಸಲಿದೆ. ಆ ಮೂಲಕ ರೈತರಿಗೆ ಮತ್ತು ಕೃಷಿ ಕ್ಷೇತ್ರಕ್ಕೆ ಹೆಚ್ಚು ಸಹಾಯ ಮಾಡುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ತಂತ್ರಜ್ಞಾನದ ಮೂಲಕ ರೈತರು ತಮ್ಮ ಡೀಸೆಲ್ ಟ್ರಾಕ್ಟರುಗಳನ್ನು ಸಿಎನ್ಜಿ ಟ್ರಾಕ್ಟರುಗಳಾಗಿ ಪರಿವರ್ತಿಸಿ ಆ ಮೂಲಕ ಇಂಧನ ವೆಚ್ಚವನ್ನು ಕಡಿಮೆ ಮಾಡುಬಹುದು ಎಂದು ಹೇಳಿದರು.
ಜೊತೆಗೆ ಇದರ ದಕ್ಷತೆಯನ್ನು ಹೆಚ್ಚಿಸಬಹುದು. ಡೀಸೆಲ್ ಟ್ರಾಕ್ಟರುಗಳನ್ನು ಸಿಎನ್ಜಿ ಟ್ರಾಕ್ಟರ್ ಆಗಿ ಪರಿವರ್ತಿಸುವುದರಿಂದ ಮಾಲಿನ್ಯವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಪ್ರಸ್ತುತ ಪ್ರತಿ ಲೀಟರ್ ಡೀಸೆಲ್‌ಗೆ 77 ರೂ.ಗಿಂತ ಹೆಚ್ಚು ಖರ್ಚು ಮಾಡುವ ರೈತರು ಪ್ರತಿ ಲೀಟರ್ ಸಿಎನ್‌ಜಿಗೆ 42 ರೂ.ಗಿಂತ ಕಡಿಮೆ ಖರ್ಚು ಮಾಡಬಹುದು. ಇದರಿಂದಾಗಿ ಗಮನಾರ್ಹ ಗಣನೀಯವಾಗಿ ಹಣವನ್ನು ಉಳಿಸಬಹುದು.
ಸಿಎನ್‌ಜಿ ಟ್ರಾಕ್ಟರುಗಳ ಎಂಜಿನ್ ಸಾಮಾಥ್ಯ ೯ ವು ತುಂಬಾ ಉತ್ತಮವಾಗಿದ್ದು, ಮಾಲಿನ್ಯ ರಹಿತವಾಗಿದೆ. ಸಿಎನ್ ಜಿ ಟ್ರಾಕ್ಟರ್ ಕುರಿತು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅವರು,ಕೃಷಿ ಮತ್ತು ಕೈಗಾರಿಕಾ ತ್ಯಾಜ್ಯವನ್ನು ಸಿಎನ್‌ಜಿ ಮೂಲಕ ಸಂಪತ್ತನ್ನು ರೈತರು ಪರಿವರ್ತಿಸಬಹುದು. ಇದು ಪರಿಸರ ಆರ್ಥಿಕತೆಯನ್ನು ಸೃಷ್ಟಿಸುತ್ತದೆ ಎಂದು
ಹೇಳಿದರು.
ಡೀಸೆಲ್ ಟ್ರಾಕ್ಟರುಗಳಿಗಿಂತ ಸಾಮರ್ಥ್ಯ. “ಇದು ಶೂನ್ಯ ಸೀಸ ಮತ್ತು ನಾಶಕಾರಿ ಅಲ್ಲ. ದುರ್ಬಲಗೊಳಿಸದ ಮತ್ತು ಮಾಲಿನ್ಯಕಾರಕವಲ್ಲದ ಎಂಜಿನ್‌ನ ಜೀವನದಲ್ಲಿ ಸಹಾಯ ಮಾಡುತ್ತದೆ. ಮತ್ತು ಇದಕ್ಕೆ ಕಡಿಮೆ ನಿಯಮಿತ ನಿರ್ವಹಣೆ ಅಗತ್ಯವಿರುತ್ತದೆ.” ಸಿಎನ್‌ಜಿ ಟ್ಯಾಂಕ್‌ಗಳು ಬಿಗಿಯಾದ ಮುದ್ರೆಯೊಂದಿಗೆ ಬರುವುದರಿಂದ ತಜ್ಞರು ತಂತ್ರಜ್ಞಾನವನ್ನು ಸುರಕ್ಷಿತವಾಗಿಸುತ್ತಾರೆ, ಇದು ಇಂಧನ ತುಂಬುವಾಗ ಅಥವಾ ಸೋರಿಕೆಯಾದಾಗ ಸ್ಫೋಟದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. “ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಇದರಿಂದಾಗಿ ರೈತರ ಜೀವನ ಮಟ್ಟ ಗಣನೀಯ ಪ್ರಮಾಣದಲ್ಲಿ ಬದಲಾವಣೆ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಡೀಸೆಲ್ ಟ್ರಾಕ್ಟರುಗಳನ್ನು ಸಿಎನ್ಜಿ ಟ್ರಾಕ್ಟರುಗಳಾಗಿ ಪರಿವರ್ತಿಸುವ ಮೂಲಕ ದೇಶದ ಪ್ರತಿಯೊಬ್ಬ ರೈತರ ಜೀವನ ಮಟ್ಟ ಮತ್ತು ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದು ಹಾಗೂ ಆದಾಯವನ್ನು ದ್ವಿಗುಣಗೊಳಿಸಿ ಅವರ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗುವಂತೆ ಪ್ರಧಾನಿ ನರೇಂದ್ರ ಮೋದಿ ಅವರು, ಹಲವಾರು ಕ್ರಮಗಳನ್ನು ಕೈಗೊಂಡಿರುವುದು ನಮ್ಮ ರೈತರ ಸಬಲೀಕರಣದ ಪ್ರಮುಖ ಹೆಜ್ಜೆಯಾಗಿದೆ.
ಕೇಂದ್ರ ಭೂ ಸಾರಿಗೆ ಹೆದ್ದಾರಿ ಸಚಿವ ಶ್ರೀ ನಿತಿನ್ ಗಡ್ಕರಿ, ಕೇಂದ್ರ ಕೃಷಿ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್, ಕೇಂದ್ರ ಕೃಷಿ ರಾಜ್ಯ ಸಚಿವ ಶ್ರೀ ಪರ್ಶೋತ್ತಮ್ ರೂಪಾಲ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ರಾಜ್ಯ ಸಚಿವ ಶ್ರೀ ಜನರಲ್ ವಿ.ಕೆ.ಸಿಂಗ್, ಕರ್ನಾಟಕದ ಗಣಿ ಮತ್ತು ಭೂವಿಜ್ಞಾನ ಸಚಿವ ಶ್ರೀ ಮುರುಗೇಶ್ ಆರ್ ನಿರಣಿ ಮತ್ತು ಎಂಆರ್‌ಎನ್ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿಜಯ್ ನಿರಾಣಿ ಸೇರಿದಂತೆ ಮತ್ತಿತರರ ಸಮ್ಮುಖದಲ್ಲಿ ಸಿಎನ್‍ಜಿ ಟ್ರಾಕ್ಟರ್ ಗೆ ಒಪ್ಪಂದ ಮಾಡಿಕೊಳ್ಳಲಾಯಿತು.