Home Uncategorized Gold Bonds: ಸವರಿನ್ ಗೋಲ್ಡ್ ಬಾಂಡ್, ಚಿನ್ನದ ಇಟಿಎಫ್; ಹೂಡಿಕೆಗೆ ಯಾವುದು ಉತ್ತಮ?

Gold Bonds: ಸವರಿನ್ ಗೋಲ್ಡ್ ಬಾಂಡ್, ಚಿನ್ನದ ಇಟಿಎಫ್; ಹೂಡಿಕೆಗೆ ಯಾವುದು ಉತ್ತಮ?

12
0

ಚಿನ್ನ ಖರೀದಿ ಭಾರತದಲ್ಲಿ ಬಹಳ ಹಿಂದಿನಿಂದಲೂ ಜನರ ನೆಚ್ಚಿನ ಹೂಡಿಕೆಯ (Investment) ತಾಣವಾಗಿದೆ. ತಂತ್ರಜ್ಞಾನದ ಅಭಿವೃದ್ಧಿಯೊಂದಿಗೆ ಚಿನ್ನ (Gold) ಮೇಲಿನ ಹೂಡಿಕೆ ವಿಧಾನಗಳು ಬದಲಾಗಿವೆ. ಚಿನ್ನ ಖರೀದಿಯ ಟ್ರೆಂಡ್ ಮುಂದುವರಿದಿರುವುದರ ಜತೆಗೆ ಡಿಜಿಟಲ್ ಚಿನ್ನದ (Digital Gold) ಮೇಲಿನ ಹೂಡಿಕೆಯ ಆಕರ್ಷಣೆ ಹೆಚ್ಚಾಗುತ್ತಿದೆ. ಸಮಯ ಮತ್ತು ಪ್ರಯೋಜನಗಳನ್ನು ಗಮನಿಸಿದರೆ ಡಿಜಿಟಲ್ ಚಿನ್ನದ ಮೇಲಿನ ಹೂಡಿಕೆಯೇ ಸೂಕ್ತವಾಗಿದೆ. ಆರ್​ಬಿಐ ಬಿಡುಗಡೆ ಮಾಡುವ ಸವರಿನ್ ಗೋಲ್ಡ್ ಬಾಂಡ್​​ಗಳು (SGBs) ಮತ್ತು ಮ್ಯೂಚುವಲ್ ಫಂಡ್​ ಹೌಸ್​ಗಳು ಬಿಡುಗಡೆ ಮಾಡುವ ಎಕ್ಸ್​ಚೇಂಜ್ ಟ್ರೇಡೆಡ್ ಫಂಡ್ಸ್ (ETFs) ಗಳಲ್ಲಿಯೂ ಹೂಡಿಕೆ ಮಾಡಲು ಅವಕಾಶವಿದೆ. ಈ ಪೈಕಿ ಯಾವುದರಲ್ಲಿ ಹೂಡಿಕೆ ಮಾಡುವುದು ಹೆಚ್ಚು ಸೂಕ್ತ ಎಂಬ ಮಾಹಿತಿ ಇಲ್ಲಿದೆ.

ದೀರ್ಘಾವಧಿಯ ತೆರಿಗೆ ಪ್ರಯೋಜನಗಳನ್ನು ಎದುರುನೋಡುವ ವ್ಯಕ್ತಿಗಳು ಸವರಿನ್ ಗೋಲ್ಡ್ ಬಾಂಡ್​ಗಳಲ್ಲಿ ಹೂಡಿಕೆ ಮಾಡಬಹುದಾಗಿದೆ. ಈ ಬಾಂಡ್​ಗಳು ಭಾರತ ಸರ್ಕಾರ ಬೆಂಬಲಿತ ಬಾಂಡ್​ಗಳಾಗಿವೆ. ಭೌತಿಕ ಚಿನ್ನಕ್ಕೆ ಪರ್ಯಾಯವಾಗಿ ದೊರೆಯುವ ಸವರಿನ್ ಗೋಲ್ಡ್ ಬಾಂಡ್ ಇಶ್ಯೂ ದರಕ್ಕಿಂತ ವಾರ್ಷಿಕ ಶೇಕಡಾ 2.5ರಷ್ಟು ರಿಟರ್ನ್ಸ್ ತಂದುಕೊಡುತ್ತದೆ. ಖರೀದಿಯ ದಿನ ಯಾವ ಮೊತ್ತ ಇತ್ತೋ ಅದಕ್ಕೆ ಅನುಗುಣವಾಗಿ ರಿಟರ್ನ್ಸ್ ದೊರೆಯುತ್ತದೆ. ಈ ಬಾಂಡ್​ಗಳನ್ನು 8 ವರ್ಷಗಳ ಅವಧಿಗೆ ಬಿಡುಗಡೆ ಮಾಡಲಾಗುತ್ತದೆ. 5ನೇ ವರ್ಷದ ನಂತರ ಮರಳಿಸಲು ಅವಕಾಶವಿದೆ. ಇದಕ್ಕಾಗಿ ಆರ್​ಬಿಐ ಬೈಬ್ಯಾಕ್ ವಿಂಡೋ ತೆರೆಯುತ್ತದೆ. ನಿಶ್ಚಿತ ಬಡ್ಡಿ ದರ ಬಯಸುವವರಿಗೆ ಈ ಬಾಂಡ್​ಗಳಲ್ಲಿನ ಹೂಡಿಕೆ ಉತ್ತಮವಾಗಿದೆ ಎಂದಿದ್ದಾರೆ ವೈಯಕ್ತಿಕ ಹಣಕಾಸು ತಜ್ಞರು.

ಇದನ್ನೂ ಓದಿ: CIBIL Score: ಸಿಬಿಲ್ ಸ್ಕೋರ್ ಬಗ್ಗೆ ನಿಮ್ಮಲ್ಲಿ ಈ ತಪ್ಪು ಕಲ್ಪನೆ ಇದೆಯೇ? ಚಿಂತಿಸಬೇಕಾದ ಅಗತ್ಯವಿಲ್ಲ

ಸವರಿನ್ ಗೋಲ್ಡ್ ಬಾಂಡ್ ಹೆಚ್ಚು ಸುರಕ್ಷಿತ

ಸರ್ಕಾರವೇ ಬಿಡುಗಡೆ ಮಾಡುವುದರಿಂದ ಸವರಿನ್ ಗೋಲ್ಡ್ ಬಾಂಡ್ ಹೆಚ್ಚು ಸುರಕ್ಷಿತವಾಗಿದೆ. ಇಂಥ ಬಾಂಡ್​ಗಳಿಗೆ ದೊರೆಯುವ ಬಡ್ಡಿಯನ್ನು ಇತರ ಮೂಲಗಳಿಂದ ದೊರೆಯುವ ಆದಾಯ ಎಂದು ಪರಿಗಣಿಸಲಾಗುತ್ತಿದ್ದು, ಇದಕ್ಕೆ ತೆರಿಗೆ ಪಾವತಿಸಬೇಕಾಗುತ್ತದೆ. ಆದರೆ, ಮೆಚ್ಯೂರಿಟಿ ಅವಧಿಯ ನಂತರ ವಾಪಸ್ ಪಡೆಯುವುದಾದರೆ ತೆರಿಗೆ ಪಾವತಿಸಬೇಕಾಗಿಲ್ಲ. ಸವರಿನ್ ಗೋಲ್ಡ್ ಬಾಂಡ್​​ಗಳು ಕಡಿಮೆ ಲಿಕ್ವಿಡಿಟಿ ಹೊಂದಿವೆ.

ಗೋಲ್ಡ್ ಇಟಿಎಫ್​ಗಳು

ಚಿನ್ನದ ಇಟಿಎಫ್​ಗಳು ಹೆಚ್ಚು ಲಿಕ್ವಿಡಿಟಿ ಹೊಂದಿವೆ. ಎಲೆಕ್ಟ್ರಾನಿಕ್ ರೂಪದಲ್ಲಿ ಹೊರತುಪಡಿಸಿದರೆ ಮ್ಯೂಚುವಲ್ ಫಂಡ್​ ಹೌಸ್​ಗಳ ಮೂಳಕ ಖರೀದಿ ಮಾಡುವ ಗೋಲ್ಡ್ ಇಟಿಎಫ್​ಗಳು ಭೌತಿಕ ಚಿನ್ನ ಖರೀದಿಯನ್ನೇ ಹೋಲುತ್ತವೆ. ಇವು ಭೌತಿಕ ಚಿನ್ನ ಇಲ್ಲದೆಯೇ ಬುಲಿಯನ್ ಮಾರುಕಟ್ಟೆಯಲ್ಲಿ ವಹಿವಾಟು ನಡೆಸಲು ಹೂಡಿಕೆದಾರನಿಗೆ ಅವಕಾಶ ಮಾಡಿಕೊಡುತ್ತವೆ. ಹೀಗಾಗಿ, ಚಿನ್ನದ ಇಟಿಎಫ್‌ಗಳು ಷೇರು ಮಾರುಕಟ್ಟೆ ಹೂಡಿಕೆಗೆ ಅವಕಾಶ ಮಾಡಿಕೊಡುತ್ತವೆ ಮತ್ತು ಪಾರದರ್ಶಕವಾಗಿವೆ. ತೆರಿಗೆ ವಿಚಾರಕ್ಕೆ ಬಂದರೆ, ಖರೀದಿ ಮಾಡಿದ 2.5 ವರ್ಷದ ಒಳಕೆ ಮಾರಾಟ ಮಾಡಿದರೆ ಅಲ್ಪಾವಧಿ ಬಂಡವಾಳದಿಂದ ಗಳಿಸಿದ ಆದಾಯ ತೆರಿಗೆ ಅಥವಾ ಎಸ್​ಟಿಸಿಜಿ ಪಾವತಿಸಬೇಕಾಗುತ್ತದೆ. ಈ ಅವಧಿಯ ನಂತರ ಮಾರಾಟ ಮಾಡಿದರೆ ದೀರ್ಘಾವಧಿಯ ಬಂಡವಾಳದಿಂದ ಗಳಿಸಿದ ಆದಾಯ ತೆರಿಗೆ ಅಥವಾ ಎಲ್​ಟಿಸಿಜಿ ಪಾವತಿಸಬೇಕಾಗುತ್ತದೆ.

ವೈಯಕ್ತಿಕ ಹಣಕಾಸಿಗೆ ಸಂಬಂಧಿಸಿದ ಇನ್ನಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here