Home Uncategorized Gold Price Today: ಮತ್ತೆ ಕುಸಿಯಿತು ಬೆಳ್ಳಿ ಬೆಲೆ, ಚಿನ್ನದ ದರ ತುಸು ಏರಿಕೆ

Gold Price Today: ಮತ್ತೆ ಕುಸಿಯಿತು ಬೆಳ್ಳಿ ಬೆಲೆ, ಚಿನ್ನದ ದರ ತುಸು ಏರಿಕೆ

28
0

Gold Silver Price in Bangalore | ಬೆಂಗಳೂರು: ಕಳೆದ ಎರಡು ದಿನಗಳಿಂದ ಕುಸಿತದ ಹಾದಿಯಲ್ಲಿದ್ದ ಚಿನ್ನದ ದರ ಇಂದು ತುಸು ಏರಿಕೆ ಕಂಡಿದೆ. ಬೆಳ್ಳಿ ಬೆಲೆ ಮತ್ತೆ ಕುಸಿದಿದೆ. ಇದರೊಂದಿಗೆ ಚಿನ್ನದ ದರ ಕುಸಿತದ ಓಟಕ್ಕೆ ತಾತ್ಕಾಲಿಕ ತಡೆಬಿದ್ದಿದೆ. 22 ಕ್ಯಾರೆಟ್​​ನ 10 ಗ್ರಾಂ ಚಿನ್ನದ ದರ 250 ರೂ. ಹೆಚ್ಚಾದರೆ, 1 ಕೆಜಿ ಬೆಳ್ಳಿಯ ಬೆಲೆ 500 ರೂ. ಇಳಿಕೆಯಾಗಿದೆ. ಹಿಂದಿನ ದಿನದ ವಹಿವಾಟಿನಲ್ಲಿ 1 ಕೆಜಿ ಬೆಳ್ಳಿಯ ಬೆಲೆ 1,000 ರೂ. ಇಳಿಕೆಯಾದರೆ, 22 ಕ್ಯಾರೆಟ್​​ನ 10 ಗ್ರಾಂ ಚಿನ್ನದ ದರ 290 ರೂ. ಇಳಿಕೆಯಾಗಿತ್ತು. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಇಂದಿನ ಚಿನ್ನ, ಬೆಳ್ಳಿ ದರ ವಿವರ ಇಲ್ಲಿ ನೀಡಲಾಗಿದೆ.

ಬೆಂಗಳೂರು ಸೇರಿ ಪ್ರಮುಖ ನಗರಗಳ ದರ ವಿವರ

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 250 ರೂ. ಏರಿಕೆಯಾಗಿ 49,950 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 270 ರೂ. ಹೆಚ್ಚಾಗಿ 54,490 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ 500 ರೂ. ಕುಸಿತವಾಗಿ 69,000 ರೂಪಾಯಿ ಆಗಿದೆ.

ಇದನ್ನೂ ಓದಿ: Gold Price Today: ಚಿನ್ನ, ಬೆಳ್ಳಿ ದರ ಇಂದೂ ಕುಸಿತ; ಪ್ರಮುಖ ನಗರಗಳ ದರ ವಿವರ ಇಲ್ಲಿ ನೋಡಿ

ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.

ಚೆನ್ನೈ – 50,560 ರೂ.
ಮುಂಬೈ- 49,950 ರೂ.
ದೆಹಲಿ- 50,100 ರೂ.
ಕೊಲ್ಕತ್ತಾ- 49,950 ರೂ.
ಬೆಂಗಳೂರು- 50,000 ರೂ.
ಹೈದರಾಬಾದ್- 49,950 ರೂ.
ಕೇರಳ- 49,950 ರೂ.
ಪುಣೆ- 49,950 ರೂ.
ಮಂಗಳೂರು- 50,000 ರೂ.
ಮೈಸೂರು- 50,000 ರೂ.

ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.

ಚೆನ್ನೈ- 55,160 ರೂ.
ಮುಂಬೈ- 54,490 ರೂ.
ದೆಹಲಿ- 54,640 ರೂ.
ಕೊಲ್ಕತ್ತಾ- 54,490 ರೂ.
ಬೆಂಗಳೂರು- 54,540 ರೂ.
ಹೈದರಾಬಾದ್- 54,490 ರೂ.
ಕೇರಳ- 54,490 ರೂ.
ಪುಣೆ- 54,490 ರೂ.
ಮಂಗಳೂರು- 54,540 ರೂ.
ಮೈಸೂರು- 54,540 ರೂ.

ಇಂದಿನ ಬೆಳ್ಳಿಯ ದರ:

ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ;

ಬೆಂಗಳೂರು- 73,000 ರೂ.
ಮೈಸೂರು- 73,000 ರೂ.
ಮಂಗಳೂರು- 73,000 ರೂ.
ಮುಂಬೈ- 69,000 ರೂ.
ಚೆನ್ನೈ- 73,000 ರೂ.
ದೆಹಲಿ- 69,000 ರೂ.
ಹೈದರಾಬಾದ್- 73,000 ರೂ.
ಕೊಲ್ಕತ್ತಾ- 69,000 ರೂ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here