Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ನಗರ
  • ಬಾಗಲಕೋಟ
  • ರೈತರ ಆದಾಯ ದ್ವಿಗುಣಗೊಳಿಸಲು ಸರ್ಕಾರದ ಪೂರಕ ಕ್ರಮ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ
  • ಬಾಗಲಕೋಟ
  • ಬೆಂಗಳೂರು ನಗರ

ರೈತರ ಆದಾಯ ದ್ವಿಗುಣಗೊಳಿಸಲು ಸರ್ಕಾರದ ಪೂರಕ ಕ್ರಮ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

The Bengaluru Live January 3, 2021 7:00 AM 1 minute read
ರೈತರ ಆದಾಯ ದ್ವಿಗುಣಗೊಳಿಸಲು ಸರ್ಕಾರದ ಪೂರಕ ಕ್ರಮ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

ರೈತರ ಆದಾಯ ದ್ವಿಗುಣಗೊಳಿಸಲು ಸರ್ಕಾರದ ಪೂರಕ ಕ್ರಮ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು:

ರೈತರ ಆದಾಯವನ್ನು ದ್ವಿಗುಣಗೊಳಿಸುವ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆಶಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪೂರಕ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪ ಅವರು ಇಂದು ತಿಳಿಸಿದರು.

ಅವರು ಇಂದು ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯವು ಹಮ್ಮಿಕೊಂಡಿರುವ ತೋಟಗಾರಿಕಾ ಮೇಳವನ್ನು ಆನ್ ಲೈನ್ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.

WhatsApp Image 2021 01 02 at 13.45.31

ಸಿಎಫ್ ಟಿ ಆರ್ ಐ ಹಾಗೂ ಭಾರತೀಯ ತೋಟಗಾರಿಕಾ ಸಂಸ್ಥೆಯ ಸಹಭಾಗಿತ್ವದೊಂದಿಗೆ ತೋಟಗಾರಿಕಾ ಉತ್ಪನ್ನಗಳ ಮೌಲ್ಯವರ್ಧನೆ, ಸಂಸ್ಕರಣೆ, ದಾಸ್ತಾನು ಮತ್ತು ಪ್ಯಾಕೇಜಿಂಗ್ ಗಳ ಬಗ್ಗೆ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸಲು ಉದ್ದೇಶಿಸಲಾಗಿದೆ. ಒಟ್ಟಾರೆ ತೋಟಗಾರಿಕೆಯನ್ನು ಉದ್ದಿಮೆಯಾಗಿ ಪರಿಗಣಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಪ್ರಧಾನ ಮಂತ್ರಿಯವರು 100ನೇ ಕಿಸಾನ್ ರೈಲಿಗೆ ಇತ್ತೀಚೆಗಷ್ಟೇ ಚಾಲನೆ ನೀಡಿದ್ದಾರೆ. ಮೂರು ತಿಂಗಳ ಅವಧಿಯಲ್ಲಿ ಕಿಸಾನ್ ರೈಲುಗಳ ಮೂಲಕ 27 ಸಾವಿರ ಟನ್ ಕೃಷಿ ಉತ್ಪನ್ನಗಳನ್ನು ಸಾಗಿಸಲಾಗಿದೆ. ಶೀಘ್ರವಾಗಿ ಕೊಳೆತುಹೋಗಬಹುದಾದ ದಾಳಿಂಬೆ, ಕಿತ್ತಳೆ ಹಾಗೂ ಇತರ ತೋಟಗಾರಿಕಾ ಬೆಳೆಗಳನ್ನು ಇತರ ರಾಜ್ಯಗಳಿಗೆ ಸಾಗಿಸಲು ಕೃಷಿ ರೈಲ್ ಯೋಜನೆಯ ಸೌಲಭ್ಯವನ್ನು ಬಳಸಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ತೋಟಗಾರಿಕಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ರಾಜ್ಯವು ತನ್ನ ಸ್ಥಾನವನ್ನು ಕಾಯ್ದುಕೊಂಡು ಇನ್ನೂ ಹೆಚ್ಚಿನ ಸಾಧನೆ ಮಾಡಲು ಪೂರಕ ಸಂಶೋಧನೆ, ವಿಸ್ತರಣೆ ಹಾಗೂ ಇತರ ಮೂಲಕಸೌಕರ್ಯ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಅವರು ನುಡಿದರು.

ಉಪಮುಖ್ಯಮಂತ್ರಿ @GovindKarjol, ತೋಟಗಾರಿಕಾ ಸಚಿವ ನಾರಾಯಣಗೌಡ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ, ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ, ತೋಟಗಾರಿಕಾ ವಿಶ್ವವಿದ್ಯಾಲಯದ ಕುಲಪತಿ ಡಾ.ಇಂದ್ರೇಶ್ ಮೊದಲಾದವರು ಉಪಸ್ಥಿತರಿದ್ದರು. (2/2)

— CM of Karnataka (@CMofKarnataka) January 2, 2021

ಸಮಾರಂಭದಲ್ಲಿ ಉಪಸ್ಥಿತರಿದ್ದ ಉಪ ಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಎಂ. ಕಾರಜೋಳ ಅವರು ಮಾತನಾಡಿ, 2008 ರಲ್ಲಿ ಮುಖ್ಯಮಂತ್ರಿಗಳಾಗಿದ್ದ ಶ್ರೀ ಬಿ.ಎಸ್. ಯಡಿಯೂರಪ್ಪ ಅವರೇ ಈ ತೋಟಗಾರಿಕೆ ವಿಶ್ವವಿದ್ಯಾಲಯವನ್ನು ಪ್ರಾರಂಭಿಸಿದರು. ಇದರಿಂದ ಉತ್ತರ ಕರ್ನಾಟಕದ ಅಭಿವೃದ್ಧಿ ಗೆ ಅದರಲ್ಲೂ ಬಾಗಲಕೋಟೆ ವಿಜಯಪುರ ಅವಳಿ ಜಿಲ್ಲೆಗಳ ತೋಟಗಾರಿಕೆ ಬೆಳೆಗಳ ವಿಸ್ತರಣೆ, ಸಂಶೋದನೆ, ತರಬೇತಿಗೆ ನೆರವಾಗಿದೆ. ರೈತ ಕುಟುಂಬದಿಂದ ಬಂದ , ರೈತರ ಧ್ವನಿಯಾಗಿ ರೂಪುಗೊಂಡಿರುವ ಶ್ರೀ ಬಿ.ಎಸ್. ಯಡಿಯೂರಪ್ಪ ಅವರು ರೈತರ ಶ್ರೇಯೋಭಿವೃದ್ದಿಗಾಗಿ ಶ್ರಮಿಸುತ್ತಿದ್ದಾರೆ. ರೈತರ ಹಿತ ಕಾಪಾಡಲು ಕಂಕಣ ಬದ್ದರಾಗಿದ್ದಾರೆ. ಈ ತೋಟಗಾರಿಕಾ ಪ್ರದೇಶ ವಿಸ್ತರಣೆಯಾಗುತ್ತಿರುವುದು ರೈತರಿಗೆ ತೋಟಗಾರಿಕೆ ಲಾಭದಾಯಕ ಎಂಬುದಕ್ಕೆ ನಿದರ್ಶನ. ವಿಜ್ಞಾನಿಗಳು ರೈತರಿಗೆ ಇನ್ನೂ ಹೆಚ್ಚು ಹೆಚ್ಚು ಲಾಭ ತರುವ ತಳಿಗಳನ್ನು ಸಂಶೋಧಿಸಿ, ರೈತರ ಬದುಕು ಹಸನುಗೊಳಿಸಬೇಕು. ರೈತರು ಇದರ ಸದುಪಯೋಗ ಪಡೆದು ಮಾದರಿ ರೈತರಾಗಬೇಕು ಎಂದು ಸಲಹೆ ನೀಡಿದರು.

ಈ ನಿಟ್ಟಿನಲ್ಲಿ ತೋಟಗಾರಿಕಾ ವಿವಿಯು ರೈತರಿಗೆ ಹಮ್ಮಿಕೊಳ್ಳುತ್ತಿರುವ ತರಬೇತಿ ಕಾರ್ಯಕ್ರಮಗಳ ಕುರಿತು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ತೋಟಗಾರಿಕಾ ಸಚಿವ ಶ್ರೀ ನಾರಾಯಣಗೌಡ ಅವರು ಮಾತನಾಡಿ, ರಾಜ್ಯದಲ್ಲಿ ತೋಟಗಾರಿಕೆ ಉತ್ತೇಜನಕ್ಕೆ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ. ತೋಟಗಾರಿಕೆ ಉತ್ಪನ್ನಗಳ ರಫ್ತು ಪ್ರಮಾಣ ಶೇ. 2.5 ರಿಂದ ಶೇ. 5ಕ್ಕೇರಿದೆ. ಮುಂದಿನ ದಿನಗಳಲ್ಲಿ ಇದನ್ನು ಇನ್ನಷ್ಟು ಹೆಚ್ಚಿಸಲು ರೈತರಿಗೆ ಅಗತ್ಯ ಬೆಂಬಲ ನೀಡಲಾಗುವುದು ಎಂದು ತಿಳಿಸಿದರು.

ಬಾಗಲಕೋಟೆ ಶಾಸಕ ಡಾ. ವೀರಣ್ಣ ಚರಂತಿ ಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಶ್ರೀ ಎಸ್. ಆರ್. ಪಾಟೀಲ, ತೋಟಗಾರಿಕಾ ವಿವಿಯ ಕುಲಪತಿ ಡಾ. ಇಂದ್ರೇಶ್ ಮತ್ತು ಇತರರು ಉಪಸ್ಥಿತರಿದ್ದರು.

About the Author

The Bengaluru Live

Administrator

Visit Website View All Posts

Post navigation

Previous: ದಿನದ 24 ಗಂಟೆ ವಾಣಿಜ್ಯ ಮಳಿಗೆ ತೆರೆಯಲು ಅವಕಾಶ
Next: ಶಿಕ್ಷಕರಿಗೆ ಕೊರೋನಾ- ಶಾಲಾರಂಭ ಮುಂದಕ್ಕೆ

Related Stories

ಪತ್ರಿಕಾಗೋಷ್ಠಿಯಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ
  • ಬೆಂಗಳೂರು ನಗರ

ಬೆಂಗಳೂರಿನ ಐದು ನಗರ ಪಾಲಿಕೆಗಳ ಸುಮಾರು 24 ಲಕ್ಷ ಆಸ್ತಿ ಮಾಲೀಕರಿಗೆ ವಾಟ್ಸಾಪ್‌ನಲ್ಲಿ ಉಚಿತ ಇ-ಖಾತಾ ವಿತರಣೆ: ಜಿಬಿಎ

The Bengaluru Live November 17, 2026 8:24 PM
ಪತ್ರಿಕಾಗೋಷ್ಠಿಯಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ
  • ಬೆಂಗಳೂರು ನಗರ

ಜಕ್ಕೂರು ರೈಲ್ವೆ ಮೇಲ್ಸೇತುವೆ, ಗೆದ್ದಲಹಳ್ಳಿ ರೈಲ್ವೆ ವೆಂಟ್ ಉದ್ಘಾಟನೆ; ₹436 ಕೋಟಿ ವೆಚ್ಚದ ಐಓಸಿ ಜಂಕ್ಷನ್ ರೋಟರಿ ಮೇಲ್ಸೇತುವೆಗೆ ನ.18ರಂದು ಶಂಕುಸ್ಥಾಪನೆ

The Bengaluru Live November 17, 2026 8:21 PM
ಬೆಂಗಳೂರಿನ ಕರ್ನಾಟಕ ಲೋಕಾಯುಕ್ತ ಕಚೇರಿಯ ಕಮಾನು ಪ್ರವೇಶದ್ವಾರ
  • ಬೆಂಗಳೂರು ನಗರ

ತಲಘಟ್ಟಪುರ ಕೆರೆ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳದ ಅಧಿಕಾರಿಗಳ ಬಗ್ಗೆ ಲೋಕಾಯುಕ್ತ ಅಸಮಾಧಾನ; ದಕ್ಷಿಣ ನಗರ ಪಾಲಿಕೆಗೆ ಮತ್ತೊಂದು ಅವಕಾಶ

The Bengaluru Live November 17, 2026 6:07 PM

Latest Post

ಒಳಮೀಸಲಾತಿ ಅನುಷ್ಠಾನವಾಗಿದೆ, ವ್ಯಾಜ್ಯ ಬಗೆಹರಿದಿದೆ: ಸಮಾಜ ಕಲ್ಯಾಣ ಸಚಿವ ಕೆ.ಎಚ್. ಮುನಿಯಪ್ಪ; ನವೆಂಬರ್ 26ರ ಮೈಸೂರು ಸಂವಿಧಾನ ದಿನಾಚರಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರಲು ಕರೆ ಬೆಂಗಳೂರಿನಲ್ಲಿ ಗೋಲ್ಡನ್ ಅಂಬೇಡ್ಕರ್ ಫೌಂಡೇಷನ್ ಸನ್ಮಾನ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿರುವವರು
  • ಕರ್ನಾಟಕ

ಒಳಮೀಸಲಾತಿ ಅನುಷ್ಠಾನವಾಗಿದೆ, ವ್ಯಾಜ್ಯ ಬಗೆಹರಿದಿದೆ: ಸಮಾಜ ಕಲ್ಯಾಣ ಸಚಿವ ಕೆ.ಎಚ್. ಮುನಿಯಪ್ಪ; ನವೆಂಬರ್ 26ರ ಮೈಸೂರು ಸಂವಿಧಾನ ದಿನಾಚರಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರಲು ಕರೆ

November 17, 2026 11:59 PM
ಜಿಲ್ಲಾ ಆರೋಗ್ಯಾಧಿಕಾರಿಗಳು, ಜಿಲ್ಲಾ ಶಸ್ತ್ರಚಿಕಿತ್ಸಕರೊಂದಿಗೆ ಜಿಲ್ಲಾವಾರು ಕಾರ್ಯಕ್ರಮ ಪರಿಶೀಲಿಸಿದ ಆರೋಗ್ಯ ಸಚಿವ ಯು.ಟಿ. ಖಾದರ್: ನಿಗದಿತ ಸಮಯದಲ್ಲಿ ಅನುಷ್ಠಾನಕ್ಕೆ ಸೂಚನೆ ಬೆಂಗಳೂರಿನ ಆರೋಗ್ಯ ಸೌಧದಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಮಾತನಾಡುತ್ತಿರುವ ಆರೋಗ್ಯ ಸಚಿವರು
  • ಕರ್ನಾಟಕ

ಜಿಲ್ಲಾ ಆರೋಗ್ಯಾಧಿಕಾರಿಗಳು, ಜಿಲ್ಲಾ ಶಸ್ತ್ರಚಿಕಿತ್ಸಕರೊಂದಿಗೆ ಜಿಲ್ಲಾವಾರು ಕಾರ್ಯಕ್ರಮ ಪರಿಶೀಲಿಸಿದ ಆರೋಗ್ಯ ಸಚಿವ ಯು.ಟಿ. ಖಾದರ್: ನಿಗದಿತ ಸಮಯದಲ್ಲಿ ಅನುಷ್ಠಾನಕ್ಕೆ ಸೂಚನೆ

November 17, 2026 11:02 PM
ಬೈಕಂಪಾಡಿಯ ಬೋಲಾಸ್ ಆಗ್ರೋದಿಂದ 1,240 ಕೆ.ಜಿ ಅಡುಗೆ ಎಣ್ಣೆ ವಶ: ಹಸಿ ಕಡಲೆಕಾಯಿ ಎಣ್ಣೆಯನ್ನು ‘ಕೋಲ್ಡ್ ಪ್ರೆಸ್ಡ್’ ಎಂದು ಮರುಪ್ಯಾಕ್ ಬೈಕಂಪಾಡಿಯ ಸಂಗ್ರಹಾಗಾರದಲ್ಲಿ ವಶಪಡಿಸಿಕೊಂಡ ಅಡುಗೆ ಎಣ್ಣೆಯ ಕ್ಯಾನ್‌ಗಳ ರಾಶಿ
  • ಕರ್ನಾಟಕ

ಬೈಕಂಪಾಡಿಯ ಬೋಲಾಸ್ ಆಗ್ರೋದಿಂದ 1,240 ಕೆ.ಜಿ ಅಡುಗೆ ಎಣ್ಣೆ ವಶ: ಹಸಿ ಕಡಲೆಕಾಯಿ ಎಣ್ಣೆಯನ್ನು ‘ಕೋಲ್ಡ್ ಪ್ರೆಸ್ಡ್’ ಎಂದು ಮರುಪ್ಯಾಕ್

November 17, 2026 11:02 PM
ಕರ್ನಾಟಕ ಇಸ್ರೇಲ್ ಸಹಭಾಗಿತ್ವ: ಕ್ವಾಂಟಮ್, ಜಲ ನಿರ್ವಹಣೆ ಸಂಶೋಧನೆಗೆ ಆಸಕ್ತಿ; ಕ್ವಾಂಟಮ್ ಸಿಟಿ, ಕ್ವಾಂಟಮ್ ಇಂಡಿಯಾ ಬೆಂಗಳೂರು 2027ಕ್ಕೆ ಇಸ್ರೇಲ್ ಕಂಪನಿಗಳಿಗೆ ಆಹ್ವಾನ ಬೆಂಗಳೂರು ಟೆಕ್ ಸಮ್ಮಿಟ್ 2026ರ ಮಳಿಗೆಯಲ್ಲಿ ಕರ್ನಾಟಕದ ಅಧಿಕಾರಿಗಳು ಮತ್ತು ಇಸ್ರೇಲ್ ಪ್ರತಿನಿಧಿಗಳ ಗುಂಪು ಚಿತ್ರ
  • ಕರ್ನಾಟಕ

ಕರ್ನಾಟಕ ಇಸ್ರೇಲ್ ಸಹಭಾಗಿತ್ವ: ಕ್ವಾಂಟಮ್, ಜಲ ನಿರ್ವಹಣೆ ಸಂಶೋಧನೆಗೆ ಆಸಕ್ತಿ; ಕ್ವಾಂಟಮ್ ಸಿಟಿ, ಕ್ವಾಂಟಮ್ ಇಂಡಿಯಾ ಬೆಂಗಳೂರು 2027ಕ್ಕೆ ಇಸ್ರೇಲ್ ಕಂಪನಿಗಳಿಗೆ ಆಹ್ವಾನ

November 17, 2026 10:57 PM
ಬೆಳಗಾವಿ ಲೋಕಾಯುಕ್ತ ಬಲೆಗೆ ಸಹಾಯಕ ಆಯುಕ್ತರ ಕಚೇರಿ ಗುಮಾಸ್ತ ಪದ್ಮಾಕರ ಪಾಟೀಲ: ಕಾನೂನು ವಿದ್ಯಾರ್ಥಿಯಿಂದ ₹2,000 ಲಂಚ ಸ್ವೀಕಾರ, 38 ಪ್ರಕರಣಗಳಿಗೆ ₹30,000 ಬೇಡಿಕೆ ಬೆಂಗಳೂರಿನ ಕರ್ನಾಟಕ ಲೋಕಾಯುಕ್ತ ಕಚೇರಿಯ ಕಮಾನು ಪ್ರವೇಶದ್ವಾರ
  • ಕರ್ನಾಟಕ

ಬೆಳಗಾವಿ ಲೋಕಾಯುಕ್ತ ಬಲೆಗೆ ಸಹಾಯಕ ಆಯುಕ್ತರ ಕಚೇರಿ ಗುಮಾಸ್ತ ಪದ್ಮಾಕರ ಪಾಟೀಲ: ಕಾನೂನು ವಿದ್ಯಾರ್ಥಿಯಿಂದ ₹2,000 ಲಂಚ ಸ್ವೀಕಾರ, 38 ಪ್ರಕರಣಗಳಿಗೆ ₹30,000 ಬೇಡಿಕೆ

November 17, 2026 10:49 PM
ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಸಂಪರ್ಕ ಯೋಜನೆ: 31 ಜಿಲ್ಲೆಗಳ 15,000 ಕಿ.ಮೀ. ರಸ್ತೆಗೆ ₹10,000 ಕೋಟಿ; 15 ತಿಂಗಳಲ್ಲಿ ಕಾಮಗಾರಿ ಪೂರ್ಣ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • ಕರ್ನಾಟಕ

ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಸಂಪರ್ಕ ಯೋಜನೆ: 31 ಜಿಲ್ಲೆಗಳ 15,000 ಕಿ.ಮೀ. ರಸ್ತೆಗೆ ₹10,000 ಕೋಟಿ; 15 ತಿಂಗಳಲ್ಲಿ ಕಾಮಗಾರಿ ಪೂರ್ಣ

November 17, 2026 8:49 PM

ನೀವು ತಪ್ಪಿಸಿಕೊಂಡಿರಬಹುದು

ಬೆಂಗಳೂರಿನಲ್ಲಿ ಗೋಲ್ಡನ್ ಅಂಬೇಡ್ಕರ್ ಫೌಂಡೇಷನ್ ಸನ್ಮಾನ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿರುವವರು
  • ಕರ್ನಾಟಕ

ಒಳಮೀಸಲಾತಿ ಅನುಷ್ಠಾನವಾಗಿದೆ, ವ್ಯಾಜ್ಯ ಬಗೆಹರಿದಿದೆ: ಸಮಾಜ ಕಲ್ಯಾಣ ಸಚಿವ ಕೆ.ಎಚ್. ಮುನಿಯಪ್ಪ; ನವೆಂಬರ್ 26ರ ಮೈಸೂರು ಸಂವಿಧಾನ ದಿನಾಚರಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರಲು ಕರೆ

The Bengaluru Live November 17, 2026 11:59 PM
ಬೆಂಗಳೂರಿನ ಆರೋಗ್ಯ ಸೌಧದಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಮಾತನಾಡುತ್ತಿರುವ ಆರೋಗ್ಯ ಸಚಿವರು
  • ಕರ್ನಾಟಕ

ಜಿಲ್ಲಾ ಆರೋಗ್ಯಾಧಿಕಾರಿಗಳು, ಜಿಲ್ಲಾ ಶಸ್ತ್ರಚಿಕಿತ್ಸಕರೊಂದಿಗೆ ಜಿಲ್ಲಾವಾರು ಕಾರ್ಯಕ್ರಮ ಪರಿಶೀಲಿಸಿದ ಆರೋಗ್ಯ ಸಚಿವ ಯು.ಟಿ. ಖಾದರ್: ನಿಗದಿತ ಸಮಯದಲ್ಲಿ ಅನುಷ್ಠಾನಕ್ಕೆ ಸೂಚನೆ

The Bengaluru Live November 17, 2026 11:02 PM
ಬೈಕಂಪಾಡಿಯ ಸಂಗ್ರಹಾಗಾರದಲ್ಲಿ ವಶಪಡಿಸಿಕೊಂಡ ಅಡುಗೆ ಎಣ್ಣೆಯ ಕ್ಯಾನ್‌ಗಳ ರಾಶಿ
  • ಕರ್ನಾಟಕ

ಬೈಕಂಪಾಡಿಯ ಬೋಲಾಸ್ ಆಗ್ರೋದಿಂದ 1,240 ಕೆ.ಜಿ ಅಡುಗೆ ಎಣ್ಣೆ ವಶ: ಹಸಿ ಕಡಲೆಕಾಯಿ ಎಣ್ಣೆಯನ್ನು ‘ಕೋಲ್ಡ್ ಪ್ರೆಸ್ಡ್’ ಎಂದು ಮರುಪ್ಯಾಕ್

The Bengaluru Live November 17, 2026 11:02 PM
ಬೆಂಗಳೂರು ಟೆಕ್ ಸಮ್ಮಿಟ್ 2026ರ ಮಳಿಗೆಯಲ್ಲಿ ಕರ್ನಾಟಕದ ಅಧಿಕಾರಿಗಳು ಮತ್ತು ಇಸ್ರೇಲ್ ಪ್ರತಿನಿಧಿಗಳ ಗುಂಪು ಚಿತ್ರ
  • ಕರ್ನಾಟಕ

ಕರ್ನಾಟಕ ಇಸ್ರೇಲ್ ಸಹಭಾಗಿತ್ವ: ಕ್ವಾಂಟಮ್, ಜಲ ನಿರ್ವಹಣೆ ಸಂಶೋಧನೆಗೆ ಆಸಕ್ತಿ; ಕ್ವಾಂಟಮ್ ಸಿಟಿ, ಕ್ವಾಂಟಮ್ ಇಂಡಿಯಾ ಬೆಂಗಳೂರು 2027ಕ್ಕೆ ಇಸ್ರೇಲ್ ಕಂಪನಿಗಳಿಗೆ ಆಹ್ವಾನ

The Bengaluru Live November 17, 2026 10:57 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಒಳಮೀಸಲಾತಿ ಅನುಷ್ಠಾನವಾಗಿದೆ, ವ್ಯಾಜ್ಯ ಬಗೆಹರಿದಿದೆ: ಸಮಾಜ ಕಲ್ಯಾಣ ಸಚಿವ ಕೆ.ಎಚ್. ಮುನಿಯಪ್ಪ; ನವೆಂಬರ್ 26ರ ಮೈಸೂರು ಸಂವಿಧಾನ ದಿನಾಚರಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರಲು ಕರೆ
  • ಜಿಲ್ಲಾ ಆರೋಗ್ಯಾಧಿಕಾರಿಗಳು, ಜಿಲ್ಲಾ ಶಸ್ತ್ರಚಿಕಿತ್ಸಕರೊಂದಿಗೆ ಜಿಲ್ಲಾವಾರು ಕಾರ್ಯಕ್ರಮ ಪರಿಶೀಲಿಸಿದ ಆರೋಗ್ಯ ಸಚಿವ ಯು.ಟಿ. ಖಾದರ್: ನಿಗದಿತ ಸಮಯದಲ್ಲಿ ಅನುಷ್ಠಾನಕ್ಕೆ ಸೂಚನೆ
  • ಬೈಕಂಪಾಡಿಯ ಬೋಲಾಸ್ ಆಗ್ರೋದಿಂದ 1,240 ಕೆ.ಜಿ ಅಡುಗೆ ಎಣ್ಣೆ ವಶ: ಹಸಿ ಕಡಲೆಕಾಯಿ ಎಣ್ಣೆಯನ್ನು ‘ಕೋಲ್ಡ್ ಪ್ರೆಸ್ಡ್’ ಎಂದು ಮರುಪ್ಯಾಕ್
  • ಕರ್ನಾಟಕ ಇಸ್ರೇಲ್ ಸಹಭಾಗಿತ್ವ: ಕ್ವಾಂಟಮ್, ಜಲ ನಿರ್ವಹಣೆ ಸಂಶೋಧನೆಗೆ ಆಸಕ್ತಿ; ಕ್ವಾಂಟಮ್ ಸಿಟಿ, ಕ್ವಾಂಟಮ್ ಇಂಡಿಯಾ ಬೆಂಗಳೂರು 2027ಕ್ಕೆ ಇಸ್ರೇಲ್ ಕಂಪನಿಗಳಿಗೆ ಆಹ್ವಾನ
©Copyright 2025 The Bengaluru Live All rights reserved. | MoreNews by AF themes.