Home ಗದಗ ಶಿಕ್ಷಕರಿಗೆ ಕೊರೋನಾ- ಶಾಲಾರಂಭ ಮುಂದಕ್ಕೆ

ಶಿಕ್ಷಕರಿಗೆ ಕೊರೋನಾ- ಶಾಲಾರಂಭ ಮುಂದಕ್ಕೆ

37
0

ಗದಗ/ಬೆಂಗಳೂರು:

ಗದಗ ಜಿಲ್ಲೆ ಗದಗದ ಲೋಯಲಾ ಪ್ರಾಥಮಿಕ ಶಾಲೆ, ಲೋಯಲಾ ಪ್ರೌಢಶಾಲೆ, ಸೇಂಟ್ ಜಾನ್ ಪ್ರಾಥಮಿಕ ಶಾಲೆ, ಮಾರಲ್ ಪ್ರಾಥಮಿಕ ಶಾಲೆ, ಸಿ.ಎಸ್. ಪಾಟೀಲ ಪ್ರೌಢಶಾಲೆ ಮತ್ತು ನರಗುಂದ ತಾಲೂಕಿನ ಜಗಾಪೂರ ಸರ್ಕಾರಿ ಪ್ರೌಢಶಾಲೆಯ ಒಟ್ಟು 10 ಶಿಕ್ಷಕರಿಗೆ ಶಾಲಾರಂಭಕ್ಕೂ ಮುನ್ನವೇ ಕೋವಿಡ್-19 ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಈ ಶಾಲೆಗಳು ಶುಕ್ರವಾರ ಆರಂಭವಾಗಿಲ್ಲ.

ಶಾಲೆಗಳು ಆರಂಭವಾಗದೇ ಇದ್ದುದರಿಂದ ಈ ಶಿಕ್ಷಕರ ಯಾವುದೇ ಮಕ್ಕಳ ಸಂಪರ್ಕಕ್ಕೆಬಂದಿಲ್ಲ. ಈ ಶಿಕ್ಷಕರ ಹೋಂಕ್ವಾರಂಟೈನ್ ಅವಧಿ ಇನ್ನೂ ಏಳು ದಿನಗಳ ಬಾಕಿಯಿದ್ದು, ಈ ಶಾಲೆಗಳು  ಮುಂದಿನ ದಿನಗಳಲ್ಲಿ  ಆರಂಭವಾಗಲಿವೆ  ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ  ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here