Home ಬೆಂಗಳೂರು ನಗರ ಗೃಹ ಜ್ಯೋತಿ ನೋಂದಣಿಗೆ ವೇಗ: 45.61 ಲಕ್ಷ ನೋಂದಣಿ

ಗೃಹ ಜ್ಯೋತಿ ನೋಂದಣಿಗೆ ವೇಗ: 45.61 ಲಕ್ಷ ನೋಂದಣಿ

20
0
Gruha Jyothi crosses 45.61 lakh registrations
Gruha Jyothi crosses 45.61 lakh registrations

ಬೆಂಗಳೂರು:

ಗೃಹ ಜ್ಯೋತಿ ನೋಂದಣಿಯು ಇನ್ನಷ್ಟು ವೇಗ ಪಡೆದುಕೊಂಡಿದ್ದು, ಶನಿವಾರ ಸಂಜೆ 8 ಗಂಟೆವರೆಗೆ 45,61,662 ಗ್ರಾಹಕರು ನೋಂದಣಿಗೊಂಡಿದ್ದಾರೆ.

ಇ-ಆಡಳಿತ ಇಲಾಖೆ ಪ್ರತ್ಯೇಕ ನೋಂದಣಿ ಲಿಂಕ್ ಅನ್ನು ರಾಜ್ಯದ 2,000 ವಿದ್ಯುಚ್ಛಕ್ತಿ ಕಚೇರಿಗಳಿಗೆ ನೀಡಿದ ನಂತರ ನೋಂದಣಿ ಪ್ರಕ್ರಿಯೆ ವೇಗ ಪಡೆದುಕೊಂಡಿದ್ದು, ಶುಕ್ರವಾರ (ಜೂನ್ 23) 10,93,606 ಗ್ರಾಹಕರು ನೋಂದಣಿ ಮಾಡಿಕೊಂಡಿದ್ದರು. ಶನಿವಾರ (ಜೂನ್ 24) ಸಂಜೆ 8 ಗಂಟೆಯವರೆಗೆ 11,17,208 ಗ್ರಾಹಕರು ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ.

ರಾಜ್ಯದಲ್ಲಿ 200 ಯೂನಿಟ್ ವರೆಗೆ ವಿದ್ಯುತ್ ಬಳಸುವ ಗ್ರಾಹಕರ ಸಂಖ್ಯೆ 2.14 ಕೋಟಿ ಇದ್ದು, ಯೋಜನೆಗೆ ನೋಂದಣಿ ಮಾಡಲು ಸಾರ್ವಜನಿಕರು ಭಾರೀ ಉತ್ಸುಕತೆ ತೋರುತ್ತಿದ್ದಾರೆ.

ಸೇವಾ ಸಿಂಧು ಪೋರ್ಟಲ್ ಮೂಲಕ ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್, ನಾಡ ಕಚೇರಿ ಹಾಗೂ ಬಾಪೂಜಿ ಕೇಂದ್ರಗಳಲ್ಲಿ ಗ್ರಾಹಕರು ನೋದಾಯಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಕಂಪ್ಯೂಟರ್, ಲ್ಯಾಪ್ ಟಾಪ್, ಮೊಬೈಲ್ ಫೋನ್ ಹಾಗು ಸೈಬರ್ ಕೇಂದ್ರಗಳಲ್ಲಿ ಕೂಡ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ.

ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಯಾವುದೇ ಗಡುವನ್ನು ನಿಗದಿಪಡಿಸದ ಕಾರಣ ಗ್ರಾಹಕರು ಆತಂಕಪಡದೇ https://sevasindhugs.karnataka.gov.in ಪೋರ್ಟಲ್ ಮೂಲಕ ನೋಂದಾಯಿಸಬಹುದು ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.

LEAVE A REPLY

Please enter your comment!
Please enter your name here