ಬೆಂಗಳೂರು: ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಕಬ್ಬೂರು ಗ್ರಾಮದ ಕಲಾವಿದ ಕೆ.ಆರ್. ಬಸವರಾಜಾಚಾರ್ ಅವರು ಪ್ರಿಂಟ್ ಬಿನಾಲೆ ಇಂಡಿಯಾ 2026 ಪ್ರಶಸ್ತಿಗೆ ಭಾಜನರಾಗಿದ್ದಾರೆ.
34 ದೇಶಗಳ 1,449 ಕಲಾಕೃತಿಗಳು ಭಾಗವಹಿಸಿದ್ದ ಈ ಅಂತರರಾಷ್ಟ್ರೀಯ ಕಲಾಪ್ರದರ್ಶನದಲ್ಲಿ ಅತ್ಯುತ್ತಮ ಕಲಾಕೃತಿಗಳಿಗಾಗಿ ಆಯ್ಕೆಯಾದ ಐವರು ಕಲಾವಿದರಲ್ಲಿ ಬಸವರಾಜಾಚಾರ್ ಕೂಡ ಒಬ್ಬರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಪ್ರದಾನ
ನವದೆಹಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಬಸವರಾಜಾಚಾರ್ ಪ್ರಶಸ್ತಿ ಸ್ವೀಕರಿಸಿದ್ದಾರೆ. ಕಲಾವಿದರನ್ನು ಭಾನುವಾರ ಅಭಿನಂದಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಈ ಗೌರವವು ಅವರ ಕಲಾಪ್ರತಿಭೆಗೆ ಸಂದ ಮನ್ನಣೆಯಾಗಿದ್ದು, ಕರ್ನಾಟಕಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದ್ದಾರೆ.

