ಹಾಸನ: ಹಾಸನ ಗಣೇಶೋತ್ಸವ ದುರಂತ ಮತ್ತೊಮ್ಮೆ ಕಣ್ಣೀರು ತರಿಸಿದೆ. ಹಾಸನದ ಶಿವಯ್ಯನ ಕೊಪ್ಪಲಿನ ವಿದ್ಯಾರ್ಥಿ ಚಂದನ್ ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಇದರಿಂದ ಕ್ಯಾಂಟರ್ ಲಾರಿ ದುರಂತದಲ್ಲಿ ಮೃತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.
ಚಂದನ್ ಕೂಡ ಗಣೇಶ ಮೆರವಣಿಗೆಯಲ್ಲಿ ಭಾಗವಹಿಸಿದ್ದ ವೇಳೆ ನಡೆದ ಕ್ಯಾಂಟರ್ ಲಾರಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಬ್ರೈನ್ ಡೆಡ್ ಆಗಿದ್ದ. ಹಲವಾರು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರೂ ಇಂದು ಬೆಳಿಗ್ಗೆ ಜೀವ ಕಳೆದುಕೊಂಡರು.

ದುರಂತದ ಸುದ್ದಿ ತಿಳಿದ ತಕ್ಷಣ ಕುಟುಂಬ ಸದಸ್ಯರು ಆಕ್ರಂದನಕ್ಕೆ ಒಳಗಾಗಿದ್ದು, “ಸಂಭ್ರಮಿಸಲು ಹೋಗಿದ್ದ ಮಗ ಮೃತದೇಹವಾಗಿ ಮನೆಗೆ ಬಂದಿದ್ದಾನೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
Also Read: Hassan Ganeshotsava Tragedy: Death Toll Rises to 10 as Student Chandan Succumbs in HIMs
ಸ್ಥಳೀಯರು ಈ ಘಟನೆಯನ್ನು “ಹಬ್ಬದ ಸಂಭ್ರಮವೇ ದುರಂತಕ್ಕೆ ತಿರುಗಿದ ನೋವು” ಎಂದು ವರ್ಣಿಸಿದ್ದಾರೆ. ಇನ್ನು ಹಲವಾರು ಗಾಯಾಳುಗಳು ಇನ್ನೂ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
