Home ಅಪರಾಧ ಹವಾಲಾ ದಂಧೆ: ಆರೋಪಿಯ ಬಂಧನ, 28 ಲಕ್ಷ ರೂ.ನಗದು, ಹಣ ಎಣಿಕೆ ಯಂತ್ರ ವಶ

ಹವಾಲಾ ದಂಧೆ: ಆರೋಪಿಯ ಬಂಧನ, 28 ಲಕ್ಷ ರೂ.ನಗದು, ಹಣ ಎಣಿಕೆ ಯಂತ್ರ ವಶ

52
0

ಬೆಂಗಳೂರು:

ಹವಾಲ ದಂಧೆಯಲ್ಲಿ ತೊಡಗಿದ್ದ ಆರೋಪಿಯೊಬ್ಬನನ್ನು ಬಂಧಿಸಿರುವ ಸಿಸಿಬಿ ಪೊಲೀಸರು, 28 ಲಕ್ಷ ರೂ. ನಗದು, ಎರಡು ಮೊಬೈಲ್ ಹಾಗೂ ಹಣ ಎಣಿಕೆ ಯಂತ್ರವನ್ನು ವಶಪಡಿಸಿಕೊಂಡಿದ್ದಾರೆ.

IMG 20201110 100701

ಕಬ್ಬನ್ ಪೇಟೆ ಮುಖ್ಯ ರಸ್ತೆ, 21ನೇ ಕ್ರಾಸ್, 1ನೇ ಮಹಡಿ, ನಿವಾಸಿ ಪಂಕಜ್ ಪಟೇಲ್ (47) ಬಂಧಿತ ಆರೋಪಿ.

ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ಕಬ್ಬನ್ ಪೇಟೆ ಮುಖ್ಯ ರಸ್ತೆ 21ನೇ ಕ್ರಾಸ್, ಬಿಲ್ಡಿಂಗ್ ನಂ.3ರ 1ನೇ ಮಹಡಿಯಲ್ಲಿರುವ ಮನೆಯಲ್ಲಿ ವ್ಯಕ್ತಿಯೊಬ್ಬ ಅನಧಿಕೃತವಾಗಿ ಸಂಘಟಿತ ರೀತಿಯಲ್ಲಿ ಲಕ್ಷಗಟ್ಟಲೆ ಹಣವನ್ನು ವಶದಲ್ಲಿ ಇಟ್ಟುಕೊಂಡು ಸರ್ಕಾರಕ್ಕೆ ತೆರಿಗೆ ಪಾವತಿಸದೆ ಹಣವನ್ನು ಹವಾಲ ಮೂಲಕ ಬೇರೆ ಬೇರೆಯವರಿಗೆ ವರ್ಗಾವಣೆ ಮಾಡುವ ದಂಧೆ ನಡೆಸುತ್ತಿದ್ದಾನೆ ಎಂಬ ಖಚಿತ ಮಾಹಿತಿ ಸಂಗ್ರಹಿಸಿದ ಸಿಸಿಬಿ ವಿಶೇಷ ವಿಚಾರಣಾ ದಳದ ಪೊಲೀಸ್ ಇನ್ಸ್ ಪೆಕ್ಟರ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಹವಾಲ ದಂಧೆಯಲ್ಲಿ ತೊಡಗಿದ್ದ ಆರೋಪಿಯನ್ನು ಬಂಧಿಸಿದ್ದಾರೆ.

LEAVE A REPLY

Please enter your comment!
Please enter your name here