ಬೆಂಗಳೂರು:
ವಿದ್ಯಾರ್ಥಿಗಳ ಪಠ್ಯಕ್ರಮದಲ್ಲಿ ಆರೋಗ್ಯ ಶಿಕ್ಷಣ ನೀಡುವ ಮೂಲಕ ಯುವಕರಲ್ಲಿ ಆರೋಗ್ಯ ಜಾಗೃತಿ ಮೂಡಿಸುವುದು ಅತಿ ಅವಶ್ಯಕವಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯ ಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಇಂದು ವಿಶ್ವ ಹೆಪಟೈಟಿಸ್ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಹೆಪಟೈಟಿಸ್ ಸೋಂಕು ಆಹಾರ ಮತ್ತು ಜೀವನಶೈಲಿಯಲ್ಲಿ ಆಗುವ ಬದಲಾವಣೆಗಳಿಂದ ಬರುತ್ತದೆ. ಮಾನವನ ಅಂಗಾಂಗದಲ್ಲಿ liver ಗೆ ನಾವು ಹೆಚ್ಚು ಪ್ರಾಮುಖ್ಯತೆ ನೀಡಬೇಕಾಗಿದೆ. liver ಅನ್ನ ನಾವು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತೇವೋ, ಅದು ನಮಗೆ ಅಷ್ಟೇ ಉತ್ತಮ ಆರೋಗ್ಯವನ್ನ ನೀಡುವಂತಹ ಒಂದು ಅಂಗಾಂಗವಾಗಿದೆ. ಮಾನವನ ದೇಹದಲ್ಲಿ liver 500 ಕ್ಕೂ ಹೆಚ್ವು ಕಾರ್ಯವನ್ನ ಮಾಡುವ ಪ್ರಮುಖ ಅಂಗಾಂಗ. A,B,C,D ಮತ್ತು E ರೀತಿಯ ಹೆಪಟೈಟಿಸ್ ವೈರಸ್ ಗಳನ್ನ ಗುರುತಿಸಲಾಗಿದೆ. ಇವುಗಳಲ್ಲಿ B ಮತ್ತು C ವೈರಸ್ liver ಡ್ಯಾಮೇಜ್ ಮಾಡುವ ವೈರಸ್ ಗಳಾಗಿದ್ದು, ಮಾರಕ ಕಾಯಿಲೆಯನ್ನ ಉಂಟುಮಾಡುತ್ತವೆ.
ಹೆಪಟೈಟಿಸ್ ವೈರಸ್ ನಿಂದಾಗಿ ದೇಶದಲ್ಲಿ ಇಂದು 3 ವರೆ ಕೋಟಿಗೂ ಹೆಚ್ಚು ಜನರು ಇಂದು liver ಸಮಸ್ಯೆ ಎದುರಿಸುತ್ತಿದ್ದಾರೆ. ಕರ್ನಾಟದಲ್ಲಿ ಶೇ 1 ರಷ್ಟು ಹೆಪಟೈಟಿಸ್ ಸೋಂಕು ಕಂಡುಬಂದಿದೆ. 2030 ರೊಳಗೆ ಹೆಪಟೈಟಿಸ್ C ವೈರಸ್ ಮುಕ್ತ ರಾಜ್ಯವನ್ನಾಗಿ ಮಾಡುವ ಗುರಿ ಹೊಂದಲಾಗಿದ್ದು, ಹೆಪಟೈಟಿಸ್ B ವೈರಸ್ ಅನ್ನ ಕೂಡಾ ನಿಯಂತ್ರಣದಲ್ಲಿಡಲು ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಈ ನಿಟ್ಟಿನಲ್ಲಿ ಸಮಾಜದಲ್ಲಿ ಜಾಗೃತಿ ಅತ್ಯವಶ್ಯಕವಾಗಿದೆ ಹೆಪಟೈಟಿಸ್ ವೈರಸ್ ಒಂದೇ ಅಲ್ಲ, ಕಿಡ್ನಿ ವೈಫಲ್ಯದಂತ ಮಾರಕ ಕಾಯಿಲೆಗಳಿಂದ ಯುವಕರನ್ನ ದೂರವಿಡಲು ವಿದ್ಯಾರ್ಥಿಗಳ ಪಠ್ಯದಲ್ಲಿಯೇ ಆರೋಗ್ಯ ಶಿಕ್ಷಣ ನೀಡುವ ಅಗತ್ಯವಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಪ್ರತಿಪಾದಿಸಿದರು. ಯುವಕರು ಒಂದೆಡೆ ವ್ಯಸನಗಳಿಗೆ ಮಾರುಹೋಗಿ ನಂತರದ ದಿನಗಳಲ್ಲಿ ಕಾಯಿಲೆಗಳಿಗೆ ಈಡಾಗ್ತಾರೆ. ಅಲ್ಲದೇ ಅಹಾರ ಪದ್ದತಿ, ಜೀವನ ಶೈಲಿಯಲ್ಲಾಗುವ ಬದಲಾವಣೆಗಳು ಇಂದು ಮಾರಕ ವೈರಸ್ ಗಳು ಮನಷ್ಯನ ಅಂಗಾಂಗಗಳಿಗೆ ಸಮಸ್ಯೆಯುಂಟು ಮಾಡುತ್ತಿವೆ.
ಪ್ರೌಢ ಹಾಗೂ ಪದವಿ ಪಠ್ಯಕ್ರಮದಲ್ಲಿ ಆರೋಗ್ಯ ಶಿಕ್ಷಣವನ್ನ ನೀಡುವ ಮೂಲಕ ಬಹುತೇಕ ಯುವಕರನ್ನ ಜಾಗೃತಗೊಳಿಸಬಹುದು. ಮಾರಕ ಕಾಯಿಲೆಗಳನ್ನ ಯುವಕರನ್ನ ದೂರವಿಡಬಹುದು. ಉತ್ತಮ ಆರೋಗ್ಯ ನೀಡುವ ಆಹಾರಗಳ ಬಗ್ಗೆ ಅರಿವು ಮೂಡಿಸಬೇಕು. ಹೆಪಟೈಟಿಸ್ ನಂತ ವೈರಸ್ ಗಳು, ಹೇಗೆ ಬರುತ್ತವೆ. Liver ನ ಮಹತ್ವದ ಬಗ್ಗೆ ಶಿಕ್ಷಣ ಅತ್ಯಗತ್ಯ. ಹೆಪಟೈಟಿಸ್ ವೈರಸ್ ಆರಂಭದಲ್ಲೇ ಪತ್ತೆ ಹಚ್ವಿದರೆ liver ಫೆಲ್ಯೂರ್ ಆಗುವುದನ್ನ ತಡೆಗಟ್ಟಬಹುದಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಸ್ಕ್ರೀನಿಂಗ್ ಮಾಡುವುದರ ಜೊತೆಗೆ, ಲಸಿಕೆ ಹಾಕುವ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಿದೆ. ವಿಶೇಷವಾಗಿ ಗರ್ಭಿಣಿಯರಿಗೆ ಹೆಪಟೈಟಿಸ್ B ಸ್ಕ್ರೀನಿಂಗ್ ಕಡ್ಡಾಯವಾಗಿ ಮಾಡಿ, ಪಾಸಿಟಿವ್ ಗರ್ಭಿಣಿಯರಿಗೆ ಜನಿಸುವ ಶಿಶುಗಳಿಗೆ ಹೆಪಟೈಟಿಸ್ ಬಿ ಚುಚ್ಚುಮದ್ದು ನೀಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇದೇ ವೇಳೆ ತಿಳಿಸಿದರು.