Home ರಾಜಕೀಯ ಕಾಂಗ್ರೆಸ್ ಸರಕಾರದ ಎಲ್ಲ ಕಾನೂನಾತ್ಮಕ ದೌರ್ಜನ್ಯ ತಡೆಗೆ ಶೀಘ್ರವೇ ಹೆಲ್ಪ್‍ಲೈನ್: ತೇಜಸ್ವಿ ಸೂರ್ಯ

ಕಾಂಗ್ರೆಸ್ ಸರಕಾರದ ಎಲ್ಲ ಕಾನೂನಾತ್ಮಕ ದೌರ್ಜನ್ಯ ತಡೆಗೆ ಶೀಘ್ರವೇ ಹೆಲ್ಪ್‍ಲೈನ್: ತೇಜಸ್ವಿ ಸೂರ್ಯ

29
0
Helpline to stop all legal atrocities of KarnatakanCongress government soon: Tejaswi Surya
Helpline to stop all legal atrocities of KarnatakanCongress government soon: Tejaswi Surya
Advertisement
bengaluru

ಬೆಂಗಳೂರು:

ಕಾಂಗ್ರೆಸ್ ಸರಕಾರದ ಎಲ್ಲ ಕಾನೂನಾತ್ಮಕ ದೌರ್ಜನ್ಯ ತಡೆಗೆ ಶೀಘ್ರವೇ ರಾಜ್ಯ ಬಿಜೆಪಿ ಕಾನೂನು ಪ್ರಕೋಷ್ಠದಿಂದ ಹೆಲ್ಪ್‍ಲೈನ್ (ಸಹಾಯವಾಣಿ) ಆರಂಭಿಸಲಾಗುವುದು ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ತಿಳಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಕಾನೂನು ಪ್ರಕೋಷ್ಠವು ನಮ್ಮ ಎಲ್ಲ ವಕೀಲರ ಸಭೆ ನಡೆಸಿದೆ. ಕಾಂಗ್ರೆಸ್ ಸರಕಾರದ ಎಲ್ಲ ಕಾನೂನಾತ್ಮಕ ದೌರ್ಜನ್ಯ, ಅಧಿಕಾರ ದುರ್ಬಳಕೆ, ಸುಳ್ಳು ಕೇಸು, ಸುಳ್ಳು ಎಫ್‍ಐಆರ್‍ಗಳನ್ನು ಸಮರ್ಥವಾಗಿ ಎದುರಿಸಲು ಮುಂದಾಗಿದೆ. ಇದಕ್ಕಾಗಿ ಹೆಲ್ಪ್‍ಲೈನ್ ನಂಬರನ್ನು ಒಂದು ವಾರದ ಒಳಗೆ ನಾವು ಪ್ರಕಟಿಸಲಿದ್ದೇವೆ ಎಂದು ತಿಳಿಸಿದರು.

ಈ ಹೆಲ್ಪ್‍ಲೈನ್ ನಂಬರ್ ರಾಜ್ಯದ ಕಾರ್ಯಕರ್ತರ ಉಪಯೋಗಕ್ಕೆ ಇರುವ ಸಂಖ್ಯೆ. 24 ಗಂಟೆ ಕಾರ್ಯ ನಿರ್ವಹಿಸಲಿದೆ. ನಮ್ಮ ಕಾರ್ಯಕರ್ತರ ಮೇಲೆ ಸುಳ್ಳು ಕೇಸು ದಾಖಲಿಸಿದಾಗ, ತಪ್ಪು ಆರೋಪ ಹೊರಿಸಿ ಪೊಲೀಸ್ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೆಲಸ ಮಾಡಿದಾಗ ಈ ಸಂಖ್ಯೆಗೆ ಕರೆ ಮಾಡಿ ನೆರವು ಪಡೆಯಬಹುದು. ರಾಜ್ಯದ ಮೂಲೆಮೂಲೆಗಳಲ್ಲೂ ಕೂಡ ಇರುವ ನಮ್ಮ ವಕೀಲರ ತಂಡ ಕಾರ್ಯಕರ್ತರ ನೆರವಿಗೆ ಧಾವಿಸಲಿದೆ. ಕಾರ್ಯಕರ್ತರ ಪರವಾಗಿ ಕೋರ್ಟಿನಲ್ಲಿ, ಪೊಲೀಸ್ ಠಾಣೆಯಲ್ಲಿ ಕೇಸು ನಡೆಸಿ ಅವರ ರಕ್ಷಣೆ ಮಾಡಲಿದೆ ಎಂದು ಭರವಸೆ ನೀಡಿದರು.

bengaluru bengaluru

ರಾಜ್ಯದಾದ್ಯಂತ ಕೋರ್ಟಿನ ಮುಖ್ಯ ಪಾತ್ರವಿದೆ. ಪಿಐಎಲ್, ರಿಟ್ ಜೂರಿಸ್‍ಡಿಕ್ಷನ್ ಮೂಲಕ ಕೋರ್ಟ್ ಬಾಗಿಲನ್ನು ತಟ್ಟಿ ಸಮಾಜದ ಹಿತರಕ್ಷಣೆ ಮಾಡಲು ಸಾಕಷ್ಟು ಹಿರಿಯ ವಕೀಲರ ತಂಡವನ್ನು, ತಜ್ಞರ ತಂಡವನ್ನೂ ಬಿಜೆಪಿ ಕಾನೂನು ಪ್ರಕೋಷ್ಠ ಸಜ್ಜುಗೊಳಿಸಲಿದೆ. ಹಿಂದಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಗಣಪತಿ ಪೆಂಡಾಲ್ ಹಾಕಲು ಕೂಡ ಅನುಮತಿ ಪಡೆಯಬೇಕಾದಂಥ ದೈನೇಸಿ ಸ್ಥಿತಿ ಇತ್ತು. ಹಬ್ಬ ಹರಿದಿನ ಆಚರಿಸುವಾಗ ಕೇಸು ಹಾಕುವುದು, ಪಟಾಕಿ ಹೊಡೆಯಬಾರದು, 10 ಜನ ನಿಲ್ಲಬಾರದು ಎಂದು ಶರ್ತ ವಿಧಿಸುತ್ತಿದ್ದರು. ಕುಂಟು ನೆಪ ಒಡ್ಡಿ ಹಬ್ಬ ಹರಿದಿನಗಳನ್ನು ಆಚರಿಸದಂತೆ ಕಟ್ಟಿ ಹಾಕುವ ಪ್ರಯತ್ನ ನಡೆದಿತ್ತು ಎಂದು ಆಕ್ಷೇಪಿಸಿದರು.

ಈ ರೀತಿಯ ಸ್ಥಿತಿ ಬಂದರೆ ಕೋರ್ಟಿನಲ್ಲಿ ಅದರ ವಿರುದ್ಧ ಹೋರಾಟ ಮಾಡುವಂಥ, ಪಿಐಎಲ್, ರಿಟ್ ಕೇಸು ಹಾಕಲು ಕರ್ನಾಟಕದ ಬೆಂಗಳೂರು, ಧಾರವಾಡ, ಗುಲ್ಬರ್ಗದಲ್ಲಿ ವಕೀಲರ ತಂಡವನ್ನು ಸಿದ್ಧಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ಸರಕಾರ ಬಂದಿದೆ ಎಂದು ಧೈರ್ಯಗೆಡದಿರಿ. ಕಾಂಗ್ರೆಸ್ ಹಿಂದೆ ಅಧಿಕಾರದಲ್ಲಿ ಇದ್ದಾಗ ಸುಳ್ಳು ಕೇಸು ಹಾಕಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯ, ಧ್ವನಿ ಹತ್ತಿಕ್ಕುವ ಕೆಲಸ ಮಾಡಿದ ಅಂಶÀಗಳಲ್ಲಿ ನಮಗೆ ಅನುಭವವಿದೆ. ರಾಜ್ಯದ ಎಲ್ಲ ಕಾರ್ಯಕರ್ತರು, ಸಂಘ ಪರಿವಾರದ, ಹಿಂದುತ್ವದ ಕೆಲಸ ಮಾಡುವ ಕಾರ್ಯಕರ್ತರು ಮತ್ತು ಹಿತೈಷಿಗಳು ಧೈರ್ಯಗೆಡುವ ಅಗತ್ಯವಿಲ್ಲ. ಅವರು ಒಂದು ಕೇಸು ಹಾಕಿದರೆ ರಾತ್ರಿಯೇ ಆಗಿದ್ದರೂ ನಿಮ್ಮ ಜೊತೆ ಬಂದು ಹೆಗಲಿಗೆ ಹೆಗಲು ಕೊಟ್ಟು ಕಾನೂನು ಹೋರಾಟ ಮಾಡಿ ನಿಮ್ಮ ಜೊತೆ ಹೋರಾಟ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದರು.

ನಮ್ಮ ವಿಚಾರಧಾರೆ ಇದೇರೀತಿ ನಡೆಯಲಿ. ಈ ಸರಕಾರದ ಅನ್ಯಾಯಗಳು, ಅಧಿಕಾರದ ದುರ್ಬಳಕೆ ವಿರುದ್ಧ ಧ್ವನಿ ಎತ್ತುವ ನೈತಿಕ- ಸಾತ್ವಿಕ ಹೋರಾಟ ಮುಂದುವರಿಸೋಣ ಎಂದು ಅವರು ತಿಳಿಸಿದರು. ಅನ್ಯಾಯ ಮುಂದುವರಿದರೆ ಕಾನೂನು ಹೋರಾಟವೂ ನಿಲ್ಲದು ಎಂದು ಅವರು ಪ್ರಶ್ನೆಗೆ ಉತ್ತರ ನೀಡಿದರು.

ಹೊಸ ಕಾಂಗ್ರೆಸ್ ಸರಕಾರ ಬಂದ ಬಳಿಕ ಧಮ್ಕಿ ಹಾಕುವುದು, ಸುಳ್ಳು ಆಪಾದನೆ ಹೊರಿಸಿ ನಮ್ಮ ಕಾರ್ಯಕರ್ತರನ್ನು ಗುರಿ ಮಾಡಿ ಪೊಲೀಸ್ ಸ್ಟೇಷನ್‍ಗಳಲ್ಲಿ ಕೇಸು ದಾಖಲಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ನಿನ್ನೆ ತಾನೇ ರಾಯಚೂರಿನಲ್ಲೂ ಕೂಡ ಒಬ್ಬ ಕಾರ್ಯಕರ್ತರ ಮೇಲೆ ಕೇಸು ಹಾಕಿ ಬಂಧಿಸಿದ ಪ್ರಕರಣ ರಾಜ್ಯದ ಗಮನಕ್ಕೆ ಬಂದಿದೆ ಎಂದು ಆಕ್ಷೇಪಿಸಿದರು.

ಈ ಹಿಂದೆ ಸಿದ್ದರಾಮಯ್ಯನವರ ಆಡಳಿತದ ಮೊದಲ ಅವಧಿಯಲ್ಲಿ ಇದೇ ರೀತಿ ದ್ವೇಷದ ರಾಜಕಾರಣದ ಸಂದರ್ಭದಲ್ಲಿ ರಾಜ್ಯದ ಹಲವಾರು ಕಡೆ ನಮ್ಮ ಕಾರ್ಯಕರ್ತರ ಮೇಲೆ ರೌಡಿ ಎಂದು ಪ್ರಕರಣ ದಾಖಲಿಸುವುದು, ಕೇಸು ದಾಖಲಿಸಿ ಪೊಲೀಸ್ ಠಾಣೆಗೆ ಅಲೆಯುವಂತೆ ಮಾಡುತ್ತಿದ್ದರು. ವಿಶೇಷವಾಗಿ ಹಿಂದುತ್ವದ ಆಧಾರದಲ್ಲಿ ಲೇಖನ ಬರೆಯುವವರು, ಪೋಸ್ಟ್ ಹಾಕುವವರ ಮೇಲೆ, ಯೂ ಟ್ಯೂಬರ್‍ಗಳು, ಸಾಮಾಜಿಕ ಜಾಲತಾಣದ ಕಾರ್ಯಕರ್ತರ ಮೇಲೆ ಅವರ ಧ್ವನಿ ಅಡಗಿಸುವ ಕೇಸು ಹಾಕಲಾಗುತ್ತಿತ್ತು. ಎಷ್ಟೋ ಬಾರಿ ಹಿಂದೂ ಕಾರ್ಯಕರ್ತರ ಹತ್ಯೆ ಆದಾಗ ಸರಿಯಾದ ಎಫ್‍ಐಆರ್ ದಾಖಲಿಸದೆ ಚಾರ್ಜ್‍ಶೀಟ್ ದುರ್ಬಲವಾಗುವಂತೆ ಮಾಡಿ, ಕೋರ್ಟಿನಲ್ಲಿ ಕೇಸನ್ನು ಸರಿಯಾಗಿ ನಡೆಸದೆ ಆ ಕೇಸು ತಾರ್ಕಿಕ ಅಂತ್ಯಕ್ಕೆ ಹೋಗದಂತೆ ನಡೆಸಿದ ಪಿತೂರಿಗಳು ನಮ್ಮ ಅನುಭವದಲ್ಲಿವೆ ಎಂದು ತಿಳಿಸಿದರು.

ಒಡಿಶಾದ ರೈಲು ದುರಂತದಲ್ಲಿ ಮೃತಪಟ್ಟವರಿಗೆ ಸದ್ಗತಿಗೆ ಪ್ರಾರ್ಥಿಸಲಾಯಿತು. ಬಿಜೆಪಿ ರಾಜ್ಯ ಕಾನೂನು ಪ್ರಕೋಷ್ಟದ ಸಂಚಾಲಕ ಯೋಗೇಂದ್ರ ಹೂಡಾಘಟ್ಟ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


bengaluru

LEAVE A REPLY

Please enter your comment!
Please enter your name here