ಬೆಂಗಳೂರು:
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, 5.3 ಕೋಟಿ ಮೌಲ್ಯದ ಹೆರಾಯಿನ್ ಪತ್ತೆಮಾಡಿ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ.
ದುಬೈನಿಂದ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಾರ್ಗೋ ವಿಭಾಗಕ್ಕೆ ಜ.22 ರಂದು ಕೊರಿಯರ್ ಮೂಲಕ ಬಂದ ಡ್ಯಾಕ್ಯುಮೆಂಟ್ಸ್ ಬ್ಯಾಗ್ ಪರಿಶೀಲನೆ ನಡೆಸಿದ್ದಾಗ 5.3 ಕೋಟಿ ಮೌಲ್ಯದ 754 ಗ್ರಾಂ ಹೆರಾಯಿನ್ ಪತ್ತೆಯಾಗಿದೆ.
Specific intelligence developed by Customs Intelligence Unit, Airport and ACC Blore, lead to seizure of 754 gm. (Approx. Rs 5.3 Cr) of Heroin concealed in Courier parcel from Dubai , declared as "Documents and Bag". Consignee arrested & Investigation is in progress @cbic_india pic.twitter.com/Jqmx1gpXWD
— Bengaluru Customs (@blrcustoms) January 26, 2022
ಖಚಿತ ಮಾಹಿತಿ ಮೇರೆಗೆ ಕಸ್ಟಮ್ಸ್ ಇಂಟೆಲಿಜೆನ್ಸ್ ಯುನಿಟ್ ( CIU) ಮತ್ಯು ಏರ್ ಕಾರ್ಗೋ ಕಮಿಷನರೇಟ್ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಬ್ಯಾಗ್ನ ಪೋಲ್ಡರ್ ಒಳಗೆ ಪುಡಿಯೊಂದು ಪತ್ತೆಯಾಗಿದೆ. ಪರೀಕ್ಷೆ ನಡೆಸಿದಾಗ ಪತ್ತೆಯಾದ ಪುಡಿ ಹೆರಾಯಿನ್ ಎಂದು ದೃಢಪಟ್ಟಿದೆ.
Also Read: Heroin worth Rs 5.3 crore seized at Bengaluru International Airport