Home ಬೆಂಗಳೂರು ನಗರ ಹಲಾಲ್’ಗೆ ಸೆಡ್ಡು ಹೊಡೆಯಲು ಹಿಂದವೀ ಮೀಟ್ ಮಾರ್ಟ್ ಸಿದ್ದತೆ

ಹಲಾಲ್’ಗೆ ಸೆಡ್ಡು ಹೊಡೆಯಲು ಹಿಂದವೀ ಮೀಟ್ ಮಾರ್ಟ್ ಸಿದ್ದತೆ

47
0
Halal Free Yugadi
bengaluru

ಬೆಂಗಳೂರು:

ಹಲಾಲ್ ಬಾಯ್ಕಾಟ್ ಅಭಿಯಾನ ಮತ್ತೆ ಮುನ್ನೆಲೆಗೆ ಬಂದಿದೆ. ಕೆಲ ಹಿಂದೂಪರ ಕಾರ್ಯಕರ್ತರು ಹಲಾಲ್’ಗೆ ಸೆಡ್ಡು ಹೊಡೆಯಲು ಹಿಂದವೀ ಮೀಟ್ ಮಾರ್ಟ್’ನಲ್ಲಿ ಮಾಂಸ ಖರೀದಿ ಮಾಡುವಂತೆ ಅಭಿಯಾನ ಶುರು ಮಾಡಿದ್ದು, ಇದಕ್ಕೆ ಸಾರ್ವಜನಿಕರಿಂದ ಟೀಕೆಗಳು ವ್ಯಕ್ತವಾಗುತ್ತಿವೆ.

ಯುಗಾದಿ ಹಬ್ಬದ ಮರುದಿನ “ಹೊಸತೊಡಕು’ ದಿನ ಆಚರಿಸಲಾಗುತ್ತಿದ್ದು ರಾಜ್ಯದಲ್ಲಿ ಮೊದಲಿಗೆ ಹಿಂದವೀ ಮೀಟ್ ಮಾರ್ಟ್’ನ್ನು ಆರಂಭಿಸಿದ್ದು ಮುನೇಗೌಡ ಎಂಬ ವ್ಯಕ್ತಿ. ಹಲಾಲ್ ಕಟ್ ಮಾಂಸದ ವಿರುದ್ಧ ಮುನೇಗೌಡ ಅವರು ಅಭಿಯಾನ ಆರಂಭಿಸಿದ್ದರು.

ಹಿಂದವಿ ಬ್ರಾಂಡ್‌ನ ಅಡಿಯಲ್ಲಿ, ಬೆಂಗಳೂರು ಮತ್ತು ಹೊರವಲಯದಲ್ಲಿ ನಾಲ್ಕು ಅಂಗಡಿಗಳನ್ನು ತೆರೆಯಲಾಗಿತ್ತು. ಈ ವರ್ಷ ನಗರದಾದ್ಯಂತ 18 ಅಂಗಡಿಗಳ ತೆರೆಯಲಾಗಿದೆ. ಕಮ್ಮನಹಳ್ಳಿ, ಇಟ್ಟಮಡು, ದಾಸರಹಳ್ಳಿ, ಸಂಜಯ್ ನಗರ, ಗೆದ್ದಲಹಳ್ಳಿ, ಯಲಹಂಕ, ಇಂದಿರಾನಗರ, ಟ್ಯಾನರಿ ರಸ್ತೆ, ಹೊರಮಾವು, ಅನ್ನಪೂರ್ಣೇಶ್ವರಿ ನಗರ ಮತ್ತಿತರ ಕಡೆ ಅಂಗಡಿಗಳನ್ನು ತೆರೆಯಲಾಗಿದೆ ಎಂದು ಮುನೇಗೌಡ ಅವರು ಹೇಳಿದ್ದಾರೆ.

ಹಿಂದೂಪರ ಕಾರ್ಯಕರ್ತರ ಇಂತಹ ಅಭಿಯಾನದ ವಿರುದ್ಧ ಕೆಲವರು ಟೀಕೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here