Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ನಗರ
  • ಬೆಂಗಳೂರು ನಗರ
  • Historian Dr. Ramachandra Guha: ಇತಿಹಾಸಕಾರ ಡಾ. ರಾಮಚಂದ್ರ ಗುಹಾ – ಕರ್ನಾಟಕ ಸರ್ಕಾರದ 2025ರ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಗೆ ಆಯ್ಕೆ
  • ಬೆಂಗಳೂರು ನಗರ

Historian Dr. Ramachandra Guha: ಇತಿಹಾಸಕಾರ ಡಾ. ರಾಮಚಂದ್ರ ಗುಹಾ – ಕರ್ನಾಟಕ ಸರ್ಕಾರದ 2025ರ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಗೆ ಆಯ್ಕೆ

Historian Dr. Ramachandra Guha – Selected for the 2025 Mahatma Gandhi Seva Award by the Karnataka Government
The Bengaluru Live October 2, 2025 12:56 AM 1 minute read
Historian Dr. Ramachandra Guha – Selected for the 2025 Mahatma Gandhi Seva Award by the Karnataka Government

Historian Dr. Ramachandra Guha: ಇತಿಹಾಸಕಾರ ಡಾ. ರಾಮಚಂದ್ರ ಗುಹಾ – ಕರ್ನಾಟಕ ಸರ್ಕಾರದ 2025ರ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಗೆ ಆಯ್ಕೆ

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು: ಪ್ರಸಿದ್ಧ ಇತಿಹಾಸಕಾರ, ಲೇಖಕ ಹಾಗೂ ಚಿಂತಕರಾದ ಡಾ. ರಾಮಚಂದ್ರ ಗುಹಾ ಅವರನ್ನು 2025ನೇ ಸಾಲಿನ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ – ಕರ್ನಾಟಕಕ್ಕೆ ರಾಜ್ಯ ಸರ್ಕಾರ ಆಯ್ಕೆ ಮಾಡಿದೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಪ್ರತಿವರ್ಷ ನೀಡಲಾಗುವ ಈ ಗೌರವಾನ್ವಿತ ಪ್ರಶಸ್ತಿಯನ್ನು, ಸತ್ಯ, ಅಹಿಂಸೆ, ಶಾಂತಿ ಮತ್ತು ಸೇವಾ ಮನೋಭಾವನೆಗಳಾದ ಗಾಂಧೀಜಿಯವರ ಮೌಲ್ಯಗಳನ್ನು ಸಮಾಜದಲ್ಲಿ ಹರಡುವಲ್ಲಿ ಮಹತ್ತರ ಕೊಡುಗೆ ನೀಡಿದ ವ್ಯಕ್ತಿ ಹಾಗೂ ಸಂಸ್ಥೆಗಳಿಗೆ ಪ್ರದಾನ ಮಾಡಲಾಗುತ್ತದೆ.

ರಾಜ್ಯಾದ್ಯಂತ ಗಾಂಧೀ ಜಯಂತಿ ಆಚರಣೆ ಅಂಗವಾಗಿ, ಸಾರ್ವಜನಿಕರು, ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯಿಂದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗಾಂಧೀ ತತ್ವಗಳನ್ನು ಸಮಕಾಲೀನ ಸಮಾಜಕ್ಕೆ ತಲುಪಿಸುವಲ್ಲಿ ವಿಶಿಷ್ಟ ಕೊಡುಗೆ ನೀಡಿರುವ ಡಾ. ಗುಹಾ ಅವರನ್ನು ಈ ವರ್ಷದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಆಧುನಿಕ ಭಾರತದ ಇತಿಹಾಸ, ರಾಜಕೀಯ ಚಳವಳಿಗಳು, ಪರಿಸರ ಹೋರಾಟಗಳು ಹಾಗೂ ಕ್ರಿಕೆಟ್ ಕುರಿತ ತಮ್ಮ ಅಧ್ಯಯನ ಮತ್ತು ಕೃತಿಗಳ ಮೂಲಕ ಡಾ. ಗುಹಾ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ. ಅವರ ಪ್ರಮುಖ ಕೃತಿಗಳು:

Also Read: Historian Ramachandra Guha Selected for Karnataka’s 2025 Mahatma Gandhi Seva Award

  • India After Gandhi – ಸ್ವಾತಂತ್ರ್ಯಾನಂತರ ಭಾರತದ ಇತಿಹಾಸ
  • A Corner of a Foreign Field – ಭಾರತೀಯ ಕ್ರಿಕೆಟ್‌ನ ಸಾಮಾಜಿಕ ಇತಿಹಾಸ
  • Gandhi Before India – ಮಹಾತ್ಮ ಗಾಂಧೀಜಿಯವರ ಜೀವನಚರಿತ್ರೆಯ ಮೊದಲ ಭಾಗ
  • Gandhi: The Years That Changed the World – ಜೀವನಚರಿತ್ರೆಯ ಎರಡನೇ ಭಾಗ
  • The Unquiet Woods – ತಳಮಟ್ಟದ ಪರಿಸರ ಚಳವಳಿಗಳ ಅಧ್ಯಯನ

ಈ ಕೃತಿಗಳು ಸಂಶೋಧನಾತ್ಮಕವಾಗಿರುವುದಷ್ಟೇ ಅಲ್ಲದೆ, ಸಾಮಾನ್ಯ ಓದುಗರಿಗೂ ಸುಲಭವಾಗಿ ತಲುಪುವ ಶೈಲಿಯಲ್ಲಿ ಬರೆದಿರುವುದರಿಂದ ಗಾಂಧೀ ತತ್ವಗಳ ಪ್ರಚಾರ ಮತ್ತು ಚಿಂತನೆಗೆ ಪ್ರೇರಣೆಯಾಗಿವೆ. ಡಾ. ಗುಹಾ ಅವರ ಗಾಂಧೀಜಿಯವರ ಜೀವನಚರಿತ್ರೆಯ ಎರಡು ಸಂಪುಟಗಳು ಕನ್ನಡ ಸೇರಿದಂತೆ ಅನೇಕ ಭಾಷೆಗಳಿಗೆ ಅನುವಾದಗೊಂಡಿವೆ.

ರಾಜ್ಯ ಸರ್ಕಾರ ಈ ಪ್ರಶಸ್ತಿಯ ಮೂಲಕ ಯುವಪೀಳಿಗೆಗೆ ಗಾಂಧೀ ಆದರ್ಶಗಳನ್ನು ಪರಿಚಯಿಸಿ, ಸತ್ಯ, ಅಹಿಂಸೆ, ಶಾಂತಿ ಮತ್ತು ಸೇವಾ ಮನೋಭಾವನೆಗಳನ್ನು ಬಲಪಡಿಸಲು ಬದ್ಧವಾಗಿದೆ. “ಡಾ. ರಾಮಚಂದ್ರ ಗುಹಾ ಅವರಿಗೆ ಈ ಪ್ರಶಸ್ತಿ ಪ್ರದಾನವಾಗುವುದು ಸಮಾಜದಲ್ಲಿ ಗಾಂಧೀ ಆದರ್ಶಗಳ ಸಂವಾದ ಮತ್ತು ಅಧ್ಯಯನಕ್ಕೆ ಪ್ರೇರಣೆಯಾದಂತಾಗಿದೆ” ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಹೇಮಂತ್ ಎಂ. ನಿಂಬಾಳ್ಕರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About the Author

The Bengaluru Live

Author

View All Posts

Post navigation

Previous: Siddaramaiah government will continue for five years, predicts Kodi Math Swamiji: ಸಿದ್ದರಾಮಯ್ಯ ಸರ್ಕಾರಕ್ಕೆ ತೊಂದರೆ ಇಲ್ಲ, ಐದು ವರ್ಷ ಮುಂದುವರೆಯುತ್ತದೆ ಎಂದು ಕೋಡಿ ಮಠದ ಸ್ವಾಮೀಜಿ ಭವಿಷ್ಯ
Next: Congress is the support of BJP too: ಗಾಂಧೀಜಿ ಮತ್ತು ಕಾಂಗ್ರೆಸ್ ದೇಶದ ಬಲ, ಬಿಜೆಪಿಗೂ ಕಾಂಗ್ರೆಸ್‌ ಆಧಾರ: ಡಿಸಿಎಂ ಡಿ.ಕೆ.ಶಿವಕುಮಾರ್

Related Stories

ತ್ಯಾಜ್ಯ ತೆರವಿನ ನಂತರ ವಿದ್ಯಾರಣ್ಯಪುರದಲ್ಲಿ ಕಾಂಪೌಂಡ್ ಗೋಡೆ ಮತ್ತು ಮರಗಳಿರುವ ರಸ್ತೆಯ ಪಕ್ಕದ ಸ್ವಚ್ಛ ಪಾದಚಾರಿ ಮಾರ್ಗ
  • ಕರ್ನಾಟಕ
  • ಬೆಂಗಳೂರು ನಗರ

ವಾರ್ಡ್ ಒನ್ ಅಭಿಯಾನದಲ್ಲಿ ವಿದ್ಯಾರಣ್ಯಪುರದ ಮೂರು ಮುಖ್ಯರಸ್ತೆಗಳ ಬದಿಯ ತ್ಯಾಜ್ಯ ತೆರವು

The Bengaluru Live November 13, 2026 1:23 PM
ರಸ್ತೆ ಬದಿಯ ಚರಂಡಿ ಮತ್ತು ಪಾದಚಾರಿ ಮಾರ್ಗದ ವಾರ್ಡ್ ಒನ್ ಕಾಮಗಾರಿಯ ಮೊದಲು-ನಂತರದ ಹೋಲಿಕೆ
  • ಕರ್ನಾಟಕ
  • ಬೆಂಗಳೂರು ನಗರ

ವಾರ್ಡ್ ಒನ್ ಅಭಿಯಾನದ ಎರಡನೇ ವಾರ: 11 ವಾರ್ಡ್‌ಗಳಲ್ಲಿ ಶೇ 76ರಷ್ಟು ಸಮಸ್ಯೆ ಇತ್ಯರ್ಥ, ಆಯುಕ್ತ ಕೆ.ಎನ್. ರಮೇಶ್

The Bengaluru Live November 13, 2026 12:20 PM
ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್; ರಾಜ್ಯಪಾಲರಾದ ಸುಧಾ ಯಾದವ್ ಉಪಸ್ಥಿತರಿದ್ದಾರೆ
  • ಕರ್ನಾಟಕ
  • ಬೆಂಗಳೂರು ನಗರ

ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ; ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಸಿಎಂ ಶಿವಕುಮಾರ್, ರಾಜ್ಯಪಾಲರು

The Bengaluru Live November 13, 2026 12:17 PM

Latest Post

ವಾರ್ಡ್ ಒನ್ ಅಭಿಯಾನದಲ್ಲಿ ವಿದ್ಯಾರಣ್ಯಪುರದ ಮೂರು ಮುಖ್ಯರಸ್ತೆಗಳ ಬದಿಯ ತ್ಯಾಜ್ಯ ತೆರವು ತ್ಯಾಜ್ಯ ತೆರವಿನ ನಂತರ ವಿದ್ಯಾರಣ್ಯಪುರದಲ್ಲಿ ಕಾಂಪೌಂಡ್ ಗೋಡೆ ಮತ್ತು ಮರಗಳಿರುವ ರಸ್ತೆಯ ಪಕ್ಕದ ಸ್ವಚ್ಛ ಪಾದಚಾರಿ ಮಾರ್ಗ
  • ಕರ್ನಾಟಕ
  • ಬೆಂಗಳೂರು ನಗರ

ವಾರ್ಡ್ ಒನ್ ಅಭಿಯಾನದಲ್ಲಿ ವಿದ್ಯಾರಣ್ಯಪುರದ ಮೂರು ಮುಖ್ಯರಸ್ತೆಗಳ ಬದಿಯ ತ್ಯಾಜ್ಯ ತೆರವು

November 13, 2026 1:23 PM
ಮೈಸೂರಿನಲ್ಲಿ ‘ಭಾರತ್ ವನ್’ ಯೋಜನೆಗೆ ನಿರ್ಮಲಾ ಸೀತಾರಾಮನ್ ಚಾಲನೆ, 2 ಲಕ್ಷ ಸಸಿ ನೆಡುವ ಗುರಿ ಮೈಸೂರಿನಲ್ಲಿ ‘ಭಾರತ್ ವನ್’ ಯೋಜನೆಗೆ ಚಾಲನೆ ನೀಡುವ ವೇಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೆಟ್ಟ ಸಸಿಗೆ ನೀರು ಹಾಕುತ್ತಿರುವುದು
  • ಕರ್ನಾಟಕ

ಮೈಸೂರಿನಲ್ಲಿ ‘ಭಾರತ್ ವನ್’ ಯೋಜನೆಗೆ ನಿರ್ಮಲಾ ಸೀತಾರಾಮನ್ ಚಾಲನೆ, 2 ಲಕ್ಷ ಸಸಿ ನೆಡುವ ಗುರಿ

November 13, 2026 1:21 PM
ವಾರ್ಡ್ ಒನ್ ಅಭಿಯಾನದ ಎರಡನೇ ವಾರ: 11 ವಾರ್ಡ್‌ಗಳಲ್ಲಿ ಶೇ 76ರಷ್ಟು ಸಮಸ್ಯೆ ಇತ್ಯರ್ಥ, ಆಯುಕ್ತ ಕೆ.ಎನ್. ರಮೇಶ್ ರಸ್ತೆ ಬದಿಯ ಚರಂಡಿ ಮತ್ತು ಪಾದಚಾರಿ ಮಾರ್ಗದ ವಾರ್ಡ್ ಒನ್ ಕಾಮಗಾರಿಯ ಮೊದಲು-ನಂತರದ ಹೋಲಿಕೆ
  • ಕರ್ನಾಟಕ
  • ಬೆಂಗಳೂರು ನಗರ

ವಾರ್ಡ್ ಒನ್ ಅಭಿಯಾನದ ಎರಡನೇ ವಾರ: 11 ವಾರ್ಡ್‌ಗಳಲ್ಲಿ ಶೇ 76ರಷ್ಟು ಸಮಸ್ಯೆ ಇತ್ಯರ್ಥ, ಆಯುಕ್ತ ಕೆ.ಎನ್. ರಮೇಶ್

November 13, 2026 12:20 PM
ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ; ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಸಿಎಂ ಶಿವಕುಮಾರ್, ರಾಜ್ಯಪಾಲರು ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್; ರಾಜ್ಯಪಾಲರಾದ ಸುಧಾ ಯಾದವ್ ಉಪಸ್ಥಿತರಿದ್ದಾರೆ
  • ಕರ್ನಾಟಕ
  • ಬೆಂಗಳೂರು ನಗರ

ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ; ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಸಿಎಂ ಶಿವಕುಮಾರ್, ರಾಜ್ಯಪಾಲರು

November 13, 2026 12:17 PM
ನವೆಂಬರ್ 14ರಂದು ಬೆಂಗಳೂರಿನ ಎಲ್ಲ 64 ಎಆರ್‌ಒ ಕಚೇರಿಗಳಲ್ಲಿ ಇ-ಖಾತಾ ಓಪನ್ ಹೌಸ್ ಬೆಂಗಳೂರು ಉತ್ತರದ ಇ-ಖಾತಾ ಸೇವಾ ಕೇಂದ್ರದಲ್ಲಿ ನಾಗರಿಕರು ಮತ್ತು ಸಿಬ್ಬಂದಿ
  • ಕರ್ನಾಟಕ
  • ಬೆಂಗಳೂರು ನಗರ

ನವೆಂಬರ್ 14ರಂದು ಬೆಂಗಳೂರಿನ ಎಲ್ಲ 64 ಎಆರ್‌ಒ ಕಚೇರಿಗಳಲ್ಲಿ ಇ-ಖಾತಾ ಓಪನ್ ಹೌಸ್

November 13, 2026 8:24 AM
ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳವನ್ನು 9ನೇ ಅನುಸೂಚಿಗೆ ಸೇರಿಸಲು ಪ್ರಧಾನಿಗೆ ಪತ್ರ; ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನದ ಸಾಮಾಜಿಕ ಆಡಿಟ್‌ಗೆ ಸೂಚನೆ: ಶಿವಕುಮಾರ್ cm-scst-council-meeting-20261112
  • ಕರ್ನಾಟಕ

ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳವನ್ನು 9ನೇ ಅನುಸೂಚಿಗೆ ಸೇರಿಸಲು ಪ್ರಧಾನಿಗೆ ಪತ್ರ; ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನದ ಸಾಮಾಜಿಕ ಆಡಿಟ್‌ಗೆ ಸೂಚನೆ: ಶಿವಕುಮಾರ್

November 13, 2026 2:51 AM

ನೀವು ತಪ್ಪಿಸಿಕೊಂಡಿರಬಹುದು

ತ್ಯಾಜ್ಯ ತೆರವಿನ ನಂತರ ವಿದ್ಯಾರಣ್ಯಪುರದಲ್ಲಿ ಕಾಂಪೌಂಡ್ ಗೋಡೆ ಮತ್ತು ಮರಗಳಿರುವ ರಸ್ತೆಯ ಪಕ್ಕದ ಸ್ವಚ್ಛ ಪಾದಚಾರಿ ಮಾರ್ಗ
  • ಕರ್ನಾಟಕ
  • ಬೆಂಗಳೂರು ನಗರ

ವಾರ್ಡ್ ಒನ್ ಅಭಿಯಾನದಲ್ಲಿ ವಿದ್ಯಾರಣ್ಯಪುರದ ಮೂರು ಮುಖ್ಯರಸ್ತೆಗಳ ಬದಿಯ ತ್ಯಾಜ್ಯ ತೆರವು

The Bengaluru Live November 13, 2026 1:23 PM
ಮೈಸೂರಿನಲ್ಲಿ ‘ಭಾರತ್ ವನ್’ ಯೋಜನೆಗೆ ಚಾಲನೆ ನೀಡುವ ವೇಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೆಟ್ಟ ಸಸಿಗೆ ನೀರು ಹಾಕುತ್ತಿರುವುದು
  • ಕರ್ನಾಟಕ

ಮೈಸೂರಿನಲ್ಲಿ ‘ಭಾರತ್ ವನ್’ ಯೋಜನೆಗೆ ನಿರ್ಮಲಾ ಸೀತಾರಾಮನ್ ಚಾಲನೆ, 2 ಲಕ್ಷ ಸಸಿ ನೆಡುವ ಗುರಿ

The Bengaluru Live November 13, 2026 1:21 PM
ರಸ್ತೆ ಬದಿಯ ಚರಂಡಿ ಮತ್ತು ಪಾದಚಾರಿ ಮಾರ್ಗದ ವಾರ್ಡ್ ಒನ್ ಕಾಮಗಾರಿಯ ಮೊದಲು-ನಂತರದ ಹೋಲಿಕೆ
  • ಕರ್ನಾಟಕ
  • ಬೆಂಗಳೂರು ನಗರ

ವಾರ್ಡ್ ಒನ್ ಅಭಿಯಾನದ ಎರಡನೇ ವಾರ: 11 ವಾರ್ಡ್‌ಗಳಲ್ಲಿ ಶೇ 76ರಷ್ಟು ಸಮಸ್ಯೆ ಇತ್ಯರ್ಥ, ಆಯುಕ್ತ ಕೆ.ಎನ್. ರಮೇಶ್

The Bengaluru Live November 13, 2026 12:20 PM
ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್; ರಾಜ್ಯಪಾಲರಾದ ಸುಧಾ ಯಾದವ್ ಉಪಸ್ಥಿತರಿದ್ದಾರೆ
  • ಕರ್ನಾಟಕ
  • ಬೆಂಗಳೂರು ನಗರ

ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ; ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಸಿಎಂ ಶಿವಕುಮಾರ್, ರಾಜ್ಯಪಾಲರು

The Bengaluru Live November 13, 2026 12:17 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ವಾರ್ಡ್ ಒನ್ ಅಭಿಯಾನದಲ್ಲಿ ವಿದ್ಯಾರಣ್ಯಪುರದ ಮೂರು ಮುಖ್ಯರಸ್ತೆಗಳ ಬದಿಯ ತ್ಯಾಜ್ಯ ತೆರವು
  • ಮೈಸೂರಿನಲ್ಲಿ ‘ಭಾರತ್ ವನ್’ ಯೋಜನೆಗೆ ನಿರ್ಮಲಾ ಸೀತಾರಾಮನ್ ಚಾಲನೆ, 2 ಲಕ್ಷ ಸಸಿ ನೆಡುವ ಗುರಿ
  • ವಾರ್ಡ್ ಒನ್ ಅಭಿಯಾನದ ಎರಡನೇ ವಾರ: 11 ವಾರ್ಡ್‌ಗಳಲ್ಲಿ ಶೇ 76ರಷ್ಟು ಸಮಸ್ಯೆ ಇತ್ಯರ್ಥ, ಆಯುಕ್ತ ಕೆ.ಎನ್. ರಮೇಶ್
  • ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ; ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಸಿಎಂ ಶಿವಕುಮಾರ್, ರಾಜ್ಯಪಾಲರು
©Copyright 2025 The Bengaluru Live All rights reserved. | MoreNews by AF themes.