Home ಬೆಂಗಳೂರು ನಗರ ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಬಿಗಿ ಭದ್ರತೆಯ ನಡುವೆ ಐತಿಹಾಸಿಕ ತ್ರಿವರ್ಣ ಧ್ವಜಾರೋಹಣ

ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಬಿಗಿ ಭದ್ರತೆಯ ನಡುವೆ ಐತಿಹಾಸಿಕ ತ್ರಿವರ್ಣ ಧ್ವಜಾರೋಹಣ

77
0
Amid tight security, tricolour hoisted at Chamarajpet Idgah Maidan in Bengaluru2

ಬೆಂಗಳೂರು:

ಚಾಮರಾಜಪೇಟೆ ಮೈದಾನದಲ್ಲಿ ಇಂದು ಬೆಳಿಗ್ಗೆ 8 ಗಂಟೆಗೆ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿಲಾಯಿತು.

ಇದೇ ಪ್ರಥಮ ಬಾರಿಗೆ ಈ ಮೈದಾನದಲ್ಲಿ ಸರ್ಕಾರದಿಂದ ಆಯೋಜಿಸಿದ್ದ ಧ್ವಜಾರೋಹಣ ವನ್ನು ಉಪವಿಭಾಗಾಧಿಕಾರಿಗಳಾದ ಡಾ.ಎಂ. ಜಿ. ಶಿವಣ್ಣ ಅವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಸಂಸದರಾದ ಪಿ.ಸಿ. ಮೋಹನ್, ಶಾಸಕರಾದ ಜಮೀರ್ ಅಹಮ್ಮದ್, ಹೆಚ್ಚುವರಿ ಪೊಲೀಸ್ ಆಯುಕ್ತರಾದ ಸಂದೀಪ್ ಪಾಟೀಲ್, ಉಪ ಪೊಲೀಸ್ ಆಯುಕ್ತರಾದ ಲಕ್ಮಣ ಲಿಂಬರಗಿ ಉಪಸ್ಥಿತರಿದ್ದರು.

Also Read: Amid tight security, tricolour hoisted at Chamarajpet Idgah Maidan in Bengaluru

Amid tight security, tricolour hoisted at Chamarajpet Idgah Maidan in Bengaluru2

ಧ್ವಜಾರೋಹಣ ನಂತರ ರಾಷ್ಟ್ರ ಗೀತೆ ಮೊಳಗಿದುದು ನೆರೆದಿದ್ದ ಸ್ಥಳೀಯ ಸಾರ್ವಜನಿಕರು ಪುಳಕಿತರಾದರು. ರಾಷ್ಟ್ರ ಗೀತೆ ನಂತರ ಬೊಲೊ ಭಾರತ್ ಮಾತಾಕಿ ಜೈ ಘೋಷಣೆ ಮುಗಿಲು ಮುಟ್ಟಿತು.

ಧ್ವಜಾರೋಹಣ ಅತ್ಯಂತ ಶಾಂತಿಯುತವಾಗಿ ನೆರವೇರಿತು. ಐತಿಹಾಸಿಕ ಧ್ವಜಾರೋಹಣಕ್ಕೆ ಚಾಮರಾಜಪೇಟೆಯ ಸಾರ್ವಜನಿಕರು ಸಾಕ್ಷಿಯಾದರು.

Amid tight security, tricolour hoisted at Chamarajpet Idgah Maidan in Bengaluru2

ಚಾಮರಾಜಪೇಟೆ ಸರ್ಕಾರಿ ಶಾಲಾ ಮಕ್ಕಳು ವಿವಿಧ ದೇಶ ಭಕ್ತಿ ಕುರಿತ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿದರು. 9 ನೇ ತರಗತಿಯ ಸಿಂಚನ ಮತ್ತು ತಂಡ ಒನಕೆ ಓಬವ್ವ ಕಿರು ನಾಟಕ ಪ್ರದರ್ಶನ ಮಾಡಿದರು. ಮಕ್ಕಳು ಒಂದೇ ಮಾತರಂ ಗೀತೆ ಗೆ ನೃತ್ಯ ಮಾಡಿದರು.

LEAVE A REPLY

Please enter your comment!
Please enter your name here