Home ಗದಗ ಎಚ್.ಕೆ.ಪಾಟೀಲ ಹಾಗೂ ಅಶೋಕ ದಳವಾಯಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ

ಎಚ್.ಕೆ.ಪಾಟೀಲ ಹಾಗೂ ಅಶೋಕ ದಳವಾಯಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ

60
0

ಗದಗ:

ರಾಜ್ಯ ಗ್ರಾಮೀಣಾಬಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಆವರಣದಲ್ಲಿ ಜರುಗಿದ ಪ್ರಥಮ ಘಟಿಕೋತ್ಸವ ಸಮಾರಂಭದಲ್ಲಿ ಇಬ್ಬರು ಮಹನೀಯರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾನೂನು, ಸಾರ್ವಜನಿಕ ನೀತಿ ಮತ್ತು ಸಮಾಜ ಸೇವೆಗೆ ನೀಡಿದ ಗಮನಾರ್ಹ ಕೊಡುಗೆಯನ್ನು ಗುರುತಿಸಿ ಗದಗ ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಕೆ.ಪಾಟೀಲ ಅವರಿಗೆ ಡಾಕ್ಟರ್ ಆಫ್ ಲಾಸ್ ( ಎಲ್.ಎಲ್.ಬಿ) ಗೌರವ ಡಾಕ್ಟರ್ ಪದವಿಯನ್ನು ಹಾಗೂ ದೇಶದ ಗ್ರಾಮೀಣ ಬುಡಕಟ್ಟು ಜನಾಂಗದ ಪುನರ್ ನಿರ್ಮಾಣದಲ್ಲಿ ಸಲ್ಲಿಸಿರುವ ಮಹತ್ತರ ಸೇವೆಗಾಗಿ ಐ.ಎ.ಎಸ್ ಹಿರಿಯ ಅಧಿಕಾರಿ ಡಾಕ್ಟರ್ ಅಶೋಕ ದಳವಾಯಿ ಅವರಿಗೆ ಡಾಕ್ಟರ್ ಆಫ್ ಲಿಟರೇಚರ್ ( ಡಿಲಿಟ್ ) ಗೌರವ ಡಾಕ್ಟರೇಟ್ ಪದವಿಯನ್ನು ವಿಶ್ವ ವಿದ್ಯಾಲಯದ ಸಹಕುಲಾಧಿಪತಿಗಳೂ ಆಗಿರುವ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರು ಪ್ರಶಸ್ತಿ ಪ್ರದಾನ ಮಾಡಿದರು.

Rural Development Panchayat Raj Universitys first convocation 2

ಈ ಸಂದರ್ಭದಲ್ಲಿ ಘಟಿಕೋತ್ಸವದ ಮುಖ್ಯ ಅತಿಥಿ ಮೈಸೂರಿನ ಸ್ವಾಮಿ ವಿವೇಕಾನಂದ ಯೂಥ್ ಮೂವ್ ಮೆಂಟ್ ಹಾಗೂ ಗ್ರಾಸ್ ರೂಟ್ಸ್ ರಿಸರ್ಚ್ & ಅಡೊಕಸಿ ಮೂವ್‌ಮೆಂಟ್ (ಗ್ರಾಮ್)ನ ಸಂಸ್ಥಾಪಕ ಹಾಗೂ ಅಧ್ಯಕ್ಷ ಡಾ. ಆರ್. ಬಾಲಸುಬ್ರಮಣ್ಯಂ, ಗ್ರಾಮೀಣಾಭಿವೃದ್ಧಿ ವಿವಿ ಕುಲಸಚಿವ ಪ್ರೊ. ವಿಷ್ಣುಕಾಂತ ಚಟಪಲ್ಲಿ, ರಿಜಿಸ್ಟಾçರ್ ಬಸವರಾಜ ಲಕ್ಕಣ್ಣವರ, ವಿತ್ತೀಯ ಅಧಿಕಾರಿ ಪ್ರಶಾಂತ ಜೆ.ಸಿ., ವಿವಿಯ ವಿವಿಧ ಕೇಂದ್ರಗಳ ನಿರ್ದೇಶಕರು, ಶಾಲೆಗಳ ಮುಖ್ಯಸ್ಥರು, ಕಾರ್ಯನಿವಾಹಕ ಪರಿಷತ್ತಿನ ಸದಸ್ಯರು, ಶೈಕ್ಷಣಿಕ ಪರಿಷತ್ತಿನ ಸದಸ್ಯರು ಸೇರಿದಂತೆ ಪದವಿ ಪಡೆಯುವ ಅಭ್ಯರ್ಥಿಗಳು, ಪಾಲಕರು ಇತರರು ಇದ್ದರು.

LEAVE A REPLY

Please enter your comment!
Please enter your name here