Home ಬೆಂಗಳೂರು ನಗರ ಕಾವೇರಿಪುರ ವಾರ್ಡಿನಲ್ಲಿ ವಸತಿ ಸಚಿವ ಸೋಮಣ್ಣ ಅವರಿಂದ ಆಹಾರ ಧಾನ್ಯ ಕಿಟ್ ವಿತರಣೆ

ಕಾವೇರಿಪುರ ವಾರ್ಡಿನಲ್ಲಿ ವಸತಿ ಸಚಿವ ಸೋಮಣ್ಣ ಅವರಿಂದ ಆಹಾರ ಧಾನ್ಯ ಕಿಟ್ ವಿತರಣೆ

88
0

ಬೆಂಗಳೂರು:

ಕೋವಿಡ್ ಸಂಕಷ್ಟಕ್ಕೆ ಒಳಗಾಗಿರುವ ದೇಶದ 80 ಕೋಟಿ ಜನರಿಗೆ ಈ ವರ್ಷಾಂತ್ಯದವರೆಗೆ ಉಚಿತ ಆಹಾರಧಾನ್ಯಗಳನ್ನು ವಿತರಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಿರ್ಧಾರ ಕೈಗೊಂಡಿದ್ದಾರೆ, ರಾಜ್ಯದ ಮುಖ್ಯಮಂತ್ರಿಗಳು ಬಡವರಿಗೆ ನಗದು ಪರಿಹಾರ ಸೇರಿದಂತೆ ಉಪಯುಕ್ತವಾಗುವ ಹಲವಾರು ಪ್ಯಾಕೇಜುಗಳನ್ನು ಘೋಷಿಸಿದ್ದಾರೆ, ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬಡ ಜನರು ಹೆಚ್ಚಾಗಿದ್ದು, ಈ ಕ್ಷೇತ್ರದ ಬಾಂಧವರಿಗೆ ಉತ್ತಮ ಗುಣಮಟ್ಟದ ಆಹಾರಧಾನ್ಯ ವಿತರಣೆಯನ್ನು ತಮ್ಮ ಕಡೆಯಿಂದಲೂ ನೀಡುತ್ತಿದ್ದು ಜನತೆ ಭಯಭೀತರಾಗದೆ ಇರಬೇಕೆಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

Housing Minister Somanna distributes Food Grain Kit at Kaveripura Ward 2

ಅವರು ಇಂದು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಕಾವೇರಿಪುರ ವಾರ್ಡಿನಲ್ಲಿ ಕೋವಿಡ್ ಸಂಕಷ್ಟಕ್ಕೆ ಒಳಗಾದ ಆರ್ಥಿಕವಾಗಿ ಹಿಂದುಳಿದವರು, ಬಡವರು, ಕಾರ್ಮಿಕರು ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ಆಹಾರಧಾನ್ಯ ಕಿಟ್’ಗಳನ್ನು ವಿತರಿಸಿದರು.

Housing Minister Somanna distributes Food Grain Kit at Kaveripura Ward 1

ಈ ಸಂದರ್ಭದಲ್ಲಿ, ಯುವಮುಖಂಡ ಡಾ.ಅರುಣ್ ಸೋಮಣ್ಣ, ಮಂಡಲಾಧ್ಯಕ್ಷ ವಿಶ್ವನಾಥಗೌಡ, ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ದಾಸೇಗೌಡ, ವಾಗೀಶ್, ಮೋಹನ್ ಕುಮಾರ್, ಉಮಾಶಂಕರ್ ಮುಂತಾದ ಕಾರ್ಯಕರ್ತರು ಸಚಿವರ ಜೊತೆಗೂಡಿದ್ದರು.

LEAVE A REPLY

Please enter your comment!
Please enter your name here