ಹೊಸೂರು/ಬೆಂಗಳೂರು:
‘ನನಗೂ ಸಿಡಿ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಕಾನೂನು ಪ್ರಕಾರ ತನಿಖೆ ಮಾಡಲಿ, ತಪ್ಪಿತಸ್ಥರಿಗೆ ಶಿಕ್ಷೆ ನೀಡಲಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಸಿಡಿ ಪ್ರಕರಣದಲ್ಲಿ ಯುವತಿಯನ್ನು ಬಳಸಿಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂಬ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಸಂತ್ರಸ್ತ ಯುವತಿ ಪೋಷಕರ ಆರೋಪ ಸಂಬಂಧ ಹೊಸೂರಿನಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಸಂಜೆ ಕೇಳಿದ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯೆ ನೀಡಿದರು.
‘ಪಾಪ, ಅವರು ಹತಾಶರಾಗಿದ್ದಾರೆ, ಬೇಸರದಲ್ಲಿದ್ದಾರೆ. ಅವರಿಗೆ ಅವರ ಸಮಸ್ಯೆ ಇದೆ. ಹೀಗಾಗಿ ಮಾತನಾಡುತ್ತಾರೆ. ಅವರಿಗೆ ಉತ್ತರ ಕೊಡಲು ಹೋಗುವುದಿಲ್ಲ. ಕಾನೂನಿದೆ, ಪೊಲೀಸ್ ಅಧಿಕಾರಿಗಳಿದ್ದಾರೆ. ತನಿಖೆ ನಡೆಯುತ್ತಿದೆ. ಎಲ್ಲ ವಿಚಾರಣೆ ಮುಗಿಯಲಿ.
ಇದನ್ನು ಓದು: ಡಿ.ಕೆ. ಶಿವಕುಮಾರ್ ಗಂಡಸಲ್ಲ. ನಾನು ಗಂಡಸು: ಮಹಾನ್ ನಾಯಕನ ವಿರುದ್ಧ ಹೋರಾಟ – ರಮೇಶ್ ಜಾರಕಿಹೊಳಿ https://kannada.thebengalurulive.com/dk-shivakumar-is-not-a-man-ramesh-jarkiholi/
ಇದನ್ನು ಓದು: ಯುವತಿ ನನ್ನ ಭೇಟಿಗೆ ಯತ್ನಿಸಿರಬಹುದು, ಆದರೆ ನಾವು ಭೇಟಿ ಮಾಡಿಲ್ಲ: ಡಿ.ಕೆ. ಶಿವಕುಮಾರ್ https://kannada.thebengalurulive.com/woman-in-cd-tried-to-meet-me-but-i-have-not-met-dk-shivakumar/