Home ರಾಜಕೀಯ ಸಿದ್ದರಾಮಯ್ಯನವರಿಗೆ 2006ರಲ್ಲಿ ಕೆಲಸ ಮಾಡುವಾಗ ನಾನು ಒದೆ ತಿಂದಿದ್ದೆ, ಅವರು ಮರೆತಿದ್ದಾರೆ: ಸೋಮಣ್ಣ

ಸಿದ್ದರಾಮಯ್ಯನವರಿಗೆ 2006ರಲ್ಲಿ ಕೆಲಸ ಮಾಡುವಾಗ ನಾನು ಒದೆ ತಿಂದಿದ್ದೆ, ಅವರು ಮರೆತಿದ್ದಾರೆ: ಸೋಮಣ್ಣ

28
0
I was kicked for campaigning for Siddaramaiah, he has forgotten today says BJP Leader V Somanna

ಚಾಮರಾಜನಗರ:

ಸಿದ್ದರಾಮಯ್ಯ ಈಗ ವಿರೋಧ ಪಕ್ಷದ ನಾಯಕರೂ ಅಲ್ಲ, ನಾನು ಮಂತ್ರಿನೂ ಅಲ್ಲ. ನಾನೂ ಅಭ್ಯರ್ಥಿ , ಅವರೂ ಅಭ್ಯರ್ಥಿ ಅಷ್ಟೆ. ನಾನು ಅವರನ್ನು ಮುತ್ಸದ್ದಿ ನಾಯಕ ಎಂದು ಭಾವಿಸಿದ್ದೆ. ಸಿದ್ದರಾಮಯ್ಯನವರಿಗೆ 2006ರಲ್ಲಿ ಕೆಲಸ ಮಾಡುವಾಗ ನಾನು ಒದೆ ತಿಂದಿದ್ದೆ ಎಂದು ವರುಣಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾದ ವಿ. ಸೋಮಣ್ಣ ಅವರು ಹೇಳಿದ್ದಾರೆ.

ಚಾಮರಾಜನಗರದಲ್ಲಿ ಮಾತನಾಡಿದ ಅವರು, ಅವನ್ಯಾರು, ಇವನ್ಯಾರು ಅನ್ನೋ ಡೈಲಾಗ್ ಕಡಿಮೆ ಮಾಡಿದ್ರೆ ಒಳ್ಳೇದು. ರಾಜಕೀಯದಲ್ಲಿ ತಾಳ್ಮೆ ಮುಖ್ಯ ಹೀಗೆಂದು ನಯವಾಗಿ ಎಚ್ಚರಿಕೆ ನೀಡಿದ್ದಾರೆ.

ಬೆಳಗ್ಗೆಯೇ ಪ್ರಚಾರಕ್ಕೆ ತೆರಳಿದ್ದ ಅವರನ್ನು ಭೇಟಿಯಾದ ಮಾಧ್ಯಮದವರು, ‘ಸಿದ್ದರಾಮಯ್ಯನವರು ವಿ. ಸೋಮಣ್ಣ ಯಾರು ಎಂದು ಕೇಳಿದ್ದಾರೆ’ ಎಂದು ಸೋಮಣ್ಣನವರ ಗಮನಕ್ಕೆ ತಂದರು. ಆಗ, ಬೇಸರದಿಂದ ಉತ್ತರಿಸಿದ ಸೋಮಣ್ಣ, ನಾನು 2006ರ ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯನವರಿಗಾಗಿ ಕೆಲಸ ಮಾಡಿದ್ದೆ. ಆಗ, ಚಾಮರಾಜ ಕ್ಷೇತ್ರದಲ್ಲಿ ಸುಮಾರು ಒಂದೂವರೆ ತಿಂಗಳ ಕಾಲ ವಾಸ್ತವ್ಯ ಹೂಡಿದ್ದೆ. ಆಗ, ದೇವಲಾಪುರದಲ್ಲಿ ಸಿದ್ದರಾಮಯ್ಯನವರಿಗಾಗಿ ಮತಯಾಚನೆ ಮಾಡಲು ಹೋದಾಗ ಅಲ್ಲಿ ಅನ್ಯ ಪಕ್ಷಗಳ ಕಾರ್ಯಕರ್ತರು ನನ್ನ ಮೇಲೆ ದಾಳಿ ನಡೆಸಿದ್ದರು ಎಂದು ಹೇಳಿದರು.

ಪ್ರಚಾರಕ್ಕೆಂದು ಹೋಗಿದ್ದಾಗ, ಸಿದ್ದರಾಮಯ್ಯನವರ ವಿರೋಧಿಗಳು ನನ್ನ ಮೇಲೆ ಹಲ್ಲೆ ಮಾಡಿದ್ದರು. ನನ್ನ ಕಾರಿಗೆ ಕಲ್ಲು ಹೊಡೆದಿದ್ದರು. ಆಗ, ನನ್ನ ಕಾರಿನ ಗಾಜು ಜಖಂ ಆಗಿತ್ತು. ಆ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಇದ್ದು ಅವರೂ ಸಂಘರ್ಷಕ್ಕಿಳಿದರು. ಆಗ ಕೊಂಚ ಗಲಾಟೆಯಾಗಿತ್ತು. ಆ ಗಲಾಟೆಯಲ್ಲಿ ನನ್ನ ಬಟ್ಟೆಗಳನ್ನೂ ಹರಿದುಹಾಕಿದ್ದರು’’ ಎಂದು ಸೋಮಣ್ಣ ವಿವರಿಸಿದ್ದಾರೆ.

ನಾನು ಸಿದ್ದರಾಮಯ್ಯನವರಿಗಾಗಿ ಪ್ರಚಾರ ಮಾಡಿದ್ದು, ಅವರಿಗಾಗಿ ಒದೆ ತಿಂದಿದ್ದು – ಇವೆಲ್ಲವನ್ನೂ ಸಿದ್ದರಾಮಯ್ಯನವರು ಇಂದು ಮರೆತಿದ್ದಾರೆ. ನಾನು ಅವರನ್ನು ಇಂದಿಗೂ ಗೌರವದಿಂದ ‘ಸಾಹೇಬರೇ’ ಅಂತ ಕರೆಯುತ್ತೇನೆ. ಆದರೆ, ಅವರನ್ನು ನನ್ನನ್ನು ಏಕವಚನದಲ್ಲಿ ಸಂಬೋಧಿಸುತ್ತಾರೆ ಎಂದು ಸೋಮಣ್ಣ ನೋವಿನಿಂದ ನುಡಿದರು.

ಇಲ್ಲಿ ಯಾರೂ ಶಾಶ್ವತರಲ್ಲ, ಒಂದಲ್ಲ ಒಂದು ದಿನ ನಾವೆಲ್ಲ ಹೋಗಲೇಬೇಕು. ಅವನ್ಯಾರು, ಇವನ್ಯಾರು ಅನ್ನೋ ಡೈಲಾಗ್ ನ ಸ್ವಲ್ಪ ಕಡಿಮೆ ಮಾಡ್ಕೋಬೇಕು. ಅವರು ಮನಸ್ಥಿತಿ ಸರಿ ಮಾಡ್ಕೋಬೇಕು. ಗಾಂಭೀರ್ಯತೆಯಿಂದ ಹೆಜ್ಜೆ ಹಾಕಬೇಕು ಅಂತ ಮಾತ್ರ ಹೇಳ್ತೀನಿʼʼ ಎಂದು ಚಾಮರಾಜನಗರದಲ್ಲಿ ಹೇಳಿದರು ಸೋಮಣ್ಣ.ಈಗಲೂ ಯಾವುದೇ ಹಳ್ಳಿಗೆ ಹೋದ್ರೆ ನಾನು ನಾಲ್ಕು ಜನರ ಹೆಸರು ಹೇಳ್ತೀನಿ. ಆ ಮಟ್ಟಿಗೆ ನನಗೆ ಸಂಪರ್ಕ ಇದೆ ಎಂದು ಸೋಮಣ್ಣ ಹೇಳಿಕೊಂಡರು. ಮೈಸೂರು, ಚಾಮರಾಜ ನಗರ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಒಂದೇ ರೀತಿ ಅಭಿವೃದ್ಧಿ ಆಗಬೇಕಾಗಿತ್ತು. ಆದರೆ, ಏನಾಗಿದೆಎಂದು ಸೋಮಣ್ಣ ಪ್ರಶ್ನಿಸಿದರು.

LEAVE A REPLY

Please enter your comment!
Please enter your name here