ಬೆಂಗಳೂರು:
ಡಿಸಿಎಂ ಡಿ ಕೆ ಶಿವಕುಮಾರ್ ಹಾಗೂ ಮಾಜಿ ಡಿಸಿಎಂ, ಶಾಸಕ ಲಕ್ಷ್ಮಣ್ ಸವದಿ ಅವರು ಬೆಂಗಳೂರಿನಲ್ಲಿ ಗುರುವಾರ ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಶೆಟ್ಟರ್ ಬಿಜೆಪಿ ಸೇರ್ಡೆ ಹಿನ್ನೆಲೆಯಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಕೂಡ ಬಿಜೆಪಿ ಸೇರ್ತಾರೆ ಎನ್ನುವ ಗುಮಾನಿಗಳು ಹರಡುತ್ತಿದ್ದವು ಇದರ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದ್ದಾರೆ. ನನ್ನ ನಿಲುವು ಸ್ಪಷ್ಟ. ನಾನು ಬಿಜೆಪಿಗೆ ಹೋಗಲ್ಲ ಎಂದು ಹೇಳಿದ ಲಕ್ಷ್ಮಣ್ ಸವದಿ.
ಪಕ್ಷ ಬಿಡಲ್ಲ ಎಂಬುಂದನ್ನ ಪದೇ ಪದೇ ಉಚ್ಚಾರಿಸಿದ ಲಕ್ಷ್ಮಣ್ ಸವದಿ ನಾನು ಅವರು ಒಟ್ಟಿಗೆ ನಿರ್ಧಾರ ಮಾಡಿ ಕಾಂಗ್ರೆಸ್ ಗೆ ಹೋಗಿರಲಿಲ್ಲ ನಾನು ಮೊದಲು ಬಂದೆ ಟಿಕೆಟ್ ಸಿಗದ ಕಾರಣ ನಂತರ ಶೆಟ್ಟರು ಬಂದರು ಯಾಕೆ ಹೋಗಿದ್ದಾರೆ ಅಂತ ಗೊತ್ತಿಲ್ಲ ಎಂದು ಹೇಳಿದರು.
ನಾನು ಅವರು ಸ್ನೇಹಿತರು,ದಿನ ನಾವಿಬ್ಬರು ಮಾತನಾಡುತ್ತೇವೆ ಆದರೆ ಅವರು ಈ ನಿರ್ಧಾರ ಮಾಡ್ತಾರೆ ಅಂತ ಗೊತ್ತಿರಲಿಲ್ಲ ಲೋಕಸಭೆ ಚುನಾವಣಾ ಹಿನ್ನೆಲೆ ಅವರಿಗೆ ನಮ್ಮ ಅನಿರ್ವಾಯತೆ ಇದೆ ಹಾಗಾಗಿ ಸಂಪರ್ಕ ಮಾಡ್ತಾ ಇದ್ದಾರೆ
ಸಚಿವ ಸ್ಥಾನ ನೀಡುವ ವಿಚಾರ ಬಗ್ಗೆ ಈಗ ಮಾತನಾಡೋದು ಸೂಕ್ತ ಅಲ್ಲ ಪಕ್ಷ ಏನು ಹೇಳುತ್ತೋ ಅದನ್ನ ಮಾಡುತ್ತೇನೆ ದೆಹಲಿಗೆ ಹೋಗುವುದಾದರೆ ಹೇಳಿಯೇ ಹೋಗುತ್ತೇನೆ ಎಂದು ಹೇಳಿದರು.