Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ನಗರ
  • ಬೆಂಗಳೂರು ನಗರ
  • Shettar had said he would not join BJP, Don’t know why he joined, it is a matter of his conscience: Karnataka Dy CM Shivakumar| ಬಿಜೆಪಿಗೆ ಹೋಗಲ್ಲ ಅಂದಿದ್ದ ಶೆಟ್ಟರ್ ಅವರು ಯಾಕೆ ಹೋಗಿದ್ದಾರೋ ಗೊತ್ತಿಲ್ಲ, ಇದು ಅವರ ಆತ್ಮಸಾಕ್ಷಿಗೆ ಬಿಟ್ಟ ವಿಚಾರ: ಡಿಸಿಎಂ ಡಿ.ಕೆ. ಶಿವಕುಮಾರ್
  • ರಾಜಕೀಯ
  • ಬೆಂಗಳೂರು ನಗರ

Shettar had said he would not join BJP, Don’t know why he joined, it is a matter of his conscience: Karnataka Dy CM Shivakumar| ಬಿಜೆಪಿಗೆ ಹೋಗಲ್ಲ ಅಂದಿದ್ದ ಶೆಟ್ಟರ್ ಅವರು ಯಾಕೆ ಹೋಗಿದ್ದಾರೋ ಗೊತ್ತಿಲ್ಲ, ಇದು ಅವರ ಆತ್ಮಸಾಕ್ಷಿಗೆ ಬಿಟ್ಟ ವಿಚಾರ: ಡಿಸಿಎಂ ಡಿ.ಕೆ. ಶಿವಕುಮಾರ್

The Bengaluru Live January 25, 2024 3:00 PM 1 minute read
Shettar had said he would not join BJP, Don't know why he joined, it is a matter of his conscience: Karnataka Dy CM Shivakumar

Shettar had said he would not join BJP, Don’t know why he joined, it is a matter of his conscience: Karnataka Dy CM Shivakumar| ಬಿಜೆಪಿಗೆ ಹೋಗಲ್ಲ ಅಂದಿದ್ದ ಶೆಟ್ಟರ್ ಅವರು ಯಾಕೆ ಹೋಗಿದ್ದಾರೋ ಗೊತ್ತಿಲ್ಲ, ಇದು ಅವರ ಆತ್ಮಸಾಕ್ಷಿಗೆ ಬಿಟ್ಟ ವಿಚಾರ: ಡಿಸಿಎಂ ಡಿ.ಕೆ. ಶಿವಕುಮಾರ್

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು:

“ಜಗದೀಶ್ ಶೆಟ್ಟರ್ ಅವರು ನಿನ್ನೆ ಕೂಡ ಬಿಜೆಪಿಗೆ ಹೋಗುವುದಿಲ್ಲ ಎಂದಿದ್ದರು. ಇಂದು ಯಾಕೆ ಬಿಜೆಪಿ ಸೇರಿದ್ದಾರೋ, ಅವರಿಗೆ ಯಾವ ಒತ್ತಡವಿತ್ತೋ ಗೊತ್ತಿಲ್ಲ. ಇದು ಅವರ ಆತ್ಮಸಾಕ್ಷಿಗೆ ಬಿಟ್ಟ ವಿಚಾರ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ ಅವರು ಮತ್ತೆ ಬಿಜೆಪಿ ಸೇರ್ಪಡೆ ವಿಚಾರವಾಗಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಕೆಪಿಸಿಸಿ ಕಚೇರಿ ಬಳಿ ಪ್ರತಿಕ್ರಿಯಿಸಿದ ಶಿವಕುಮಾರ್ ಅವರು ಹೇಳಿದ್ದಿಷ್ಟು:

“ಮತ್ತೆ ನನ್ನನ್ನು ಬಿಜೆಪಿಗೆ ವಾಪಸ್ ಬರುವಂತೆ ತಮ್ಮ ಕ್ಷೇತ್ರದ ನಾಯಕರು, ಕಾರ್ಯಕರ್ತರ ಮೂಲಕ ಆಹ್ವಾನಿಸಲಾಗುತ್ತಿದೆ ಎಂದು ಶೆಟ್ಟರ್ ಅವರು ನಿನ್ನೆ ನನಗೆ ಮಾಹಿತಿ ನೀಡಿದ್ದರು. ಕಾಂಗ್ರೆಸ್ ಪಕ್ಷ ನನಗೆ ರಾಜಕೀಯವಾಗಿ ಮರುಜೀವ ಕೊಟ್ಟಿದೆ. ಹೀಗಾಗಿ ಬಿಜೆಪಿಗೆ ಹೋಗುವುದಿಲ್ಲ ಎಂದಿದ್ದರು. ಅವರ ಮಾತಿನ ಮೇಲೆ ವಿಶ್ವಾಸ ಇಟ್ಟು, ಅವರು ಮತ್ತೆ ಬಿಜೆಪಿಗೆ ಹೋಗುವುದಿಲ್ಲ ಎಂದು ಮೈಸೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದೆ. ಈಗ ಮಾಧ್ಯಮಗಳ ಮೂಲಕ ಶೆಟ್ಟರ್ ಅವರು ದೆಹಲಿಯ ಬಿಜೆಪಿ ಕಚೇರಿಯಲ್ಲಿ ಪಕ್ಷ ಸೇರಿದ್ದಾರೆ ಎಂಬ ಸುದ್ದಿ ತಿಳಿಯಿತು.

ಅವರು ಹಿರಿಯ ನಾಯಕರು ಎಂಬ ಕಾರಣಕ್ಕೆ ಕಾಂಗ್ರೆಸ್ ಪಕ್ಷ ಅವರನ್ನು ಬಹಳ ಗೌರವದಿಂದ ನಡೆಸಿಕೊಂಡಿತ್ತು. ಇತ್ತೀಚೆಗೆ ರಾಮಮಂದಿರ ವಿಚಾರದಿಂದ ಹಿಡಿದು ಬೇರೆ, ಬೇರೆ ವಿಷಯಗಳ ಬಗ್ಗೆ ಶೆಟ್ಟರ್ ಅವರು ಬಿಜೆಪಿ ವಿರುದ್ಧ ಅನೇಕ ಹೇಳಿಕೆಗಳನ್ನು ನೀಡಿದ್ದರು. ನಾವು ಅವರ ಮೆಲೆ ಇಟ್ಟದ್ದ ವಿಶ್ವಾಸಕ್ಕೆ ಧಕ್ಕೆಯಾಗಿದೆ ಎಂದು ಮಾಧ್ಯಮಗಳೇ ವಿಶ್ಲೇಷಣೆ ಮಾಡುತ್ತಿವೆ. ವಿಧಾನ ಪರಿಷತ್ ಸಭಾಪತಿಗಳಿಗೆ ಅವರು ಕರೆ ಮಾಡಿ ಫ್ಯಾಕ್ಸ್ ಮೂಲಕ ರಾಜೀನಾಮೆ ಕಳುಹಿಸಿಕೊಡುವುದಾಗಿ ಹೇಳಿದ್ದಾರೆ ಎಂದು ಅಧಿಕಾರಿಗಳ ಮೂಲಕ ಮಾಹಿತಿ ಬಂದಿದೆ. ಅವರನ್ನು ಒತ್ತಡದ ಹಾಕಿ ಬಲವಂತವಾಗಿ ಕರೆದುಕೊಂಡು ಹೋಗಲಾಗಿದೆಯೋ ಎಂಬುದು ಗೊತ್ತಿಲ್ಲ. ಅವರ ಹೇಳಿಕೆ ನೋಡಿ ನಂತರ ಪ್ರತಿಕ್ರಿಯಿಸುತ್ತೇನೆ”

ಶೆಟ್ಟರ್ ಅವರು ದೇಶದ ಹಿತದೃಷ್ಟಿಯಿಂದ ಮತ್ತೆ ಬಿಜೆಪಿಗೆ ಸೇರ್ಪಡೆಯಾಗಿರುವುದಾಗಿ ಹೇಳಿದ್ದಾರೆ ಎಂದು ಕೇಳಿದಾಗ, “ಅವರಿಗೆ ಟಿಕೆಟ್ ತಪ್ಪಿದಾಗ ದೇಶದ ಹಿತಾಸಕ್ತಿ ಗೊತ್ತಿರಲಿಲ್ಲವೇ? ಕಾಂಗ್ರೆಸ್ ಪಕ್ಷ ಅವರನ್ನು ಗೌರವದಿಂದ ವಿಧಾನ ಪರಿಷತ್ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿದಾಗ ದೇಶದ ಹಿತ ಗೊತ್ತಿರಲಿಲ್ಲವೇ” ಎಂದು ಮರುಪ್ರಶ್ನಿಸಿದರು.

ಅವರಿಗೆ ಆಮಿಷ ಒಡ್ಡಲಾಗಿದೆಯೇ ಎಂದು ಕೇಳಿದಾಗ, “ಈ ವಿಚಾರವಾಗಿ ಅವರೇ ಹೇಳಬೇಕು. ಕಾಂಗ್ರೆಸ್ ಪಕ್ಷ ಅವರನ್ನು ಬಹಳ ಗೌರವದಿಂದ ನಡೆಸಿಕೊಂಡಿದೆ. ನಮಗೂ ಆತ್ಮಸಾಕ್ಷಿ ಇದೆ. ಅವರಿಗೂ ಆತ್ಮಸಾಕ್ಷಿ ಇದೆ. ಕಾಂಗ್ರೆಸ್ ಪಕ್ಷದ ಕಾರ್ಯವೈಖರಿಯೇ ಬೇರೆ, ಬಿಜೆಪಿ ಕಾರ್ಯವೈಖರಿಯೇ ಬೇರೆ. ಕೆಪಿಸಿಸಿ ಅಧ್ಯಕ್ಷನಾಗಿ ನಾನು ಅವರಿಗೆ ಬಿ ಫಾರಂ ಕೊಟ್ಟಿದ್ದೆ. ನನಗೆ ಅವರ ರಾಜೀನಾಮೆ ಪತ್ರ ತಲುಪಿಲ್ಲ” ಎಂದು ತಿಳಿಸಿದರು.

ಸಂಘ ಪರಿವಾರದವರು ನಂಬಿಕೆಗೆ ಅರ್ಹರಲ್ಲ ಎಂದು ಭಾವಿಸುತ್ತೀರಾ ಎಂದು ಕೇಳಿದಾಗ, “ಎಲ್ಲಾ ವಿಚಾರದಲ್ಲೂ ಈ ರೀತಿ ತಳುಕು ಹಾಕುವುದೇಕೆ? ಸಂಘದವರು ಅವರ ಕೆಲಸ ಮಾಡುತ್ತಾರೆ. ರಾಜಕಾರಣಿಗಳು ನಮ್ಮ ಕೆಲಸ ಮಾಡುತ್ತೇವೆ. ಸಂಘಕ್ಕೂ ಅದಕ್ಕೂ ಏನು ಸಂಬಂಧ ಕಲ್ಪಿಸಲಿ? ಸಂಘ ಪರಿವಾರದವರಾಗಿದ್ದರೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿದ್ದರಾ? ಶೆಟ್ಟರ್ ಅವರು ರಾಜಕಾರಣಿ, ಅವರನ್ನು ಸಂಘದವರು ಎಂದು ಯಾಕೆ ನೋಡಲಿ” ಎಂದು ಪ್ರಶ್ನಿಸಿದರು.

ಲಕ್ಷ್ಮಣ್ ಸವದಿ ಅವರೂ ಶೆಟ್ಟರ್ ಅವರ ಜತೆಯಲ್ಲೇ ಪಕ್ಷಕ್ಕೆ ಬಂದಿದ್ದು ಅವರನ್ನಾದರೂ ಉಳಿಸಿಕೊಳ್ಳುತ್ತೀರಾ ಎಂದು ಕೇಳಿದಾಗ, “ಶೆಟ್ಟರ್ ಅವರು ಯಾಕೆ ಹೋಗಿದ್ದಾರೋ ಅದು ಬೇರೆ ವಿಚಾರ. ಉಳಿದಂತೆ ಬೇರೆ ಯಾರೂ ಕೂಡ ಬಿಜೆಪಿಗೆ ಹೋಗುವುದಿಲ್ಲ. ಶೆಟ್ಟರ್ ಅವರನ್ನು ಜನ 35 ಸಾವಿರ ಮತಗಳಿಂದ ತಿರಸ್ಕರಿಸಿದರೂ ನಾವು ಅವರನ್ನು ಗೌರವಯುತವಾಗಿ ನಡೆಸಿಕೊಂಡು ಪರಿಷತ್ ಸ್ಥಾನ ನೀಡಿದ್ದೆವು. ಮಿಕ್ಕಿದ್ದು ಅವರ ಆತ್ಮಸಾಕ್ಷಿ ಹಾಗೂ ಜನರಿಗೆ ಬಿಟ್ಟ ವಿಚಾರ” ಎಂದು ತಿಳಿಸಿದರು.

About the Author

The Bengaluru Live

Administrator

Visit Website View All Posts

Post navigation

Previous: Congress party treated Jagdish Shettar with dignity and gave him a suitable position: Chief Minister Siddaramaiah| ಬಿಜೆಪಿಯಿಂದ ಅವಮಾನಿತರಾಗಿ ಬಂದ ಜಗದೀಶ್ ಶೆಟ್ಟರಿಗೆ ಕಾಂಗ್ರೆಸ್ ಪಕ್ಷ ಘನತೆಯಿಂದ ನಡೆಸಿಕೊಂಡು ಸೂಕ್ತ ಸ್ಥಾನ ಮಾನ ನೀಡಿತು: ಮುಖ್ಯಮಂತ್ರಿ ಸಿದ್ದರಾಮಯ್ಯ
Next: Congress won two constituencies in Kodagu district: Chief Minister Siddaramaiah congratulated people of entire Kodagu district on behalf of government| ಕೊಡಗು ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು: ಇಡೀ ಜಿಲ್ಲೆಯ ಜನತೆಗೆ ಸರ್ಕಾರ ಮತ್ತು ಪಕ್ಷದ ಪರವಾಗಿ ಅಭಿನಂದನೆ ಸಲ್ಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

Related Stories

ನಿಲ್ದಾಣದಲ್ಲಿ ಹೂಮಾಲೆ ಹಾಕಿದ ನಮ್ಮ ಮೆಟ್ರೋ ಪಿಂಕ್ ಲೈನ್ ರೈಲು; ಹಸಿರು ಬಾವುಟ ಬೀಸುತ್ತಿರುವ ಪ್ರಧಾನಿ ಮೋದಿ ಮತ್ತು ಸಿಎಂ ಶಿವಕುಮಾರ್
  • ಬೆಂಗಳೂರು ನಗರ

ತಾವರೆಕೆರೆ ಮೆಟ್ರೋ ನಿಲ್ದಾಣದಲ್ಲಿ ನಮ್ಮ ಮೆಟ್ರೋ ಪಿಂಕ್ ಲೈನ್‌ಗೆ ಪ್ರಧಾನಿ ಮೋದಿ, ಸಿಎಂ ಶಿವಕುಮಾರ್ ಚಾಲನೆ

The Bengaluru Live November 13, 2026 1:47 PM
ತ್ಯಾಜ್ಯ ತೆರವಿನ ನಂತರ ವಿದ್ಯಾರಣ್ಯಪುರದಲ್ಲಿ ಕಾಂಪೌಂಡ್ ಗೋಡೆ ಮತ್ತು ಮರಗಳಿರುವ ರಸ್ತೆಯ ಪಕ್ಕದ ಸ್ವಚ್ಛ ಪಾದಚಾರಿ ಮಾರ್ಗ
  • ಬೆಂಗಳೂರು ನಗರ

ವಾರ್ಡ್ ಒನ್ ಅಭಿಯಾನದಲ್ಲಿ ವಿದ್ಯಾರಣ್ಯಪುರದ ಮೂರು ಮುಖ್ಯರಸ್ತೆಗಳ ಬದಿಯ ತ್ಯಾಜ್ಯ ತೆರವು

The Bengaluru Live November 13, 2026 1:23 PM
ರಸ್ತೆ ಬದಿಯ ಚರಂಡಿ ಮತ್ತು ಪಾದಚಾರಿ ಮಾರ್ಗದ ವಾರ್ಡ್ ಒನ್ ಕಾಮಗಾರಿಯ ಮೊದಲು-ನಂತರದ ಹೋಲಿಕೆ
  • ಬೆಂಗಳೂರು ನಗರ

ವಾರ್ಡ್ ಒನ್ ಅಭಿಯಾನದ ಎರಡನೇ ವಾರ: 11 ವಾರ್ಡ್‌ಗಳಲ್ಲಿ ಶೇ 76ರಷ್ಟು ಸಮಸ್ಯೆ ಇತ್ಯರ್ಥ, ಆಯುಕ್ತ ಕೆ.ಎನ್. ರಮೇಶ್

The Bengaluru Live November 13, 2026 12:20 PM

Latest Post

ತಾವರೆಕೆರೆ ಮೆಟ್ರೋ ನಿಲ್ದಾಣದಲ್ಲಿ ನಮ್ಮ ಮೆಟ್ರೋ ಪಿಂಕ್ ಲೈನ್‌ಗೆ ಪ್ರಧಾನಿ ಮೋದಿ, ಸಿಎಂ ಶಿವಕುಮಾರ್ ಚಾಲನೆ ನಿಲ್ದಾಣದಲ್ಲಿ ಹೂಮಾಲೆ ಹಾಕಿದ ನಮ್ಮ ಮೆಟ್ರೋ ಪಿಂಕ್ ಲೈನ್ ರೈಲು; ಹಸಿರು ಬಾವುಟ ಬೀಸುತ್ತಿರುವ ಪ್ರಧಾನಿ ಮೋದಿ ಮತ್ತು ಸಿಎಂ ಶಿವಕುಮಾರ್
  • ಬೆಂಗಳೂರು ನಗರ

ತಾವರೆಕೆರೆ ಮೆಟ್ರೋ ನಿಲ್ದಾಣದಲ್ಲಿ ನಮ್ಮ ಮೆಟ್ರೋ ಪಿಂಕ್ ಲೈನ್‌ಗೆ ಪ್ರಧಾನಿ ಮೋದಿ, ಸಿಎಂ ಶಿವಕುಮಾರ್ ಚಾಲನೆ

November 13, 2026 1:47 PM
ವಾರ್ಡ್ ಒನ್ ಅಭಿಯಾನದಲ್ಲಿ ವಿದ್ಯಾರಣ್ಯಪುರದ ಮೂರು ಮುಖ್ಯರಸ್ತೆಗಳ ಬದಿಯ ತ್ಯಾಜ್ಯ ತೆರವು ತ್ಯಾಜ್ಯ ತೆರವಿನ ನಂತರ ವಿದ್ಯಾರಣ್ಯಪುರದಲ್ಲಿ ಕಾಂಪೌಂಡ್ ಗೋಡೆ ಮತ್ತು ಮರಗಳಿರುವ ರಸ್ತೆಯ ಪಕ್ಕದ ಸ್ವಚ್ಛ ಪಾದಚಾರಿ ಮಾರ್ಗ
  • ಬೆಂಗಳೂರು ನಗರ

ವಾರ್ಡ್ ಒನ್ ಅಭಿಯಾನದಲ್ಲಿ ವಿದ್ಯಾರಣ್ಯಪುರದ ಮೂರು ಮುಖ್ಯರಸ್ತೆಗಳ ಬದಿಯ ತ್ಯಾಜ್ಯ ತೆರವು

November 13, 2026 1:23 PM
ಮೈಸೂರಿನಲ್ಲಿ ‘ಭಾರತ್ ವನ್’ ಯೋಜನೆಗೆ ನಿರ್ಮಲಾ ಸೀತಾರಾಮನ್ ಚಾಲನೆ, 2 ಲಕ್ಷ ಸಸಿ ನೆಡುವ ಗುರಿ ಮೈಸೂರಿನಲ್ಲಿ ‘ಭಾರತ್ ವನ್’ ಯೋಜನೆಗೆ ಚಾಲನೆ ನೀಡುವ ವೇಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೆಟ್ಟ ಸಸಿಗೆ ನೀರು ಹಾಕುತ್ತಿರುವುದು
  • ಕರ್ನಾಟಕ

ಮೈಸೂರಿನಲ್ಲಿ ‘ಭಾರತ್ ವನ್’ ಯೋಜನೆಗೆ ನಿರ್ಮಲಾ ಸೀತಾರಾಮನ್ ಚಾಲನೆ, 2 ಲಕ್ಷ ಸಸಿ ನೆಡುವ ಗುರಿ

November 13, 2026 1:21 PM
ವಾರ್ಡ್ ಒನ್ ಅಭಿಯಾನದ ಎರಡನೇ ವಾರ: 11 ವಾರ್ಡ್‌ಗಳಲ್ಲಿ ಶೇ 76ರಷ್ಟು ಸಮಸ್ಯೆ ಇತ್ಯರ್ಥ, ಆಯುಕ್ತ ಕೆ.ಎನ್. ರಮೇಶ್ ರಸ್ತೆ ಬದಿಯ ಚರಂಡಿ ಮತ್ತು ಪಾದಚಾರಿ ಮಾರ್ಗದ ವಾರ್ಡ್ ಒನ್ ಕಾಮಗಾರಿಯ ಮೊದಲು-ನಂತರದ ಹೋಲಿಕೆ
  • ಬೆಂಗಳೂರು ನಗರ

ವಾರ್ಡ್ ಒನ್ ಅಭಿಯಾನದ ಎರಡನೇ ವಾರ: 11 ವಾರ್ಡ್‌ಗಳಲ್ಲಿ ಶೇ 76ರಷ್ಟು ಸಮಸ್ಯೆ ಇತ್ಯರ್ಥ, ಆಯುಕ್ತ ಕೆ.ಎನ್. ರಮೇಶ್

November 13, 2026 12:20 PM
ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ; ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಸಿಎಂ ಶಿವಕುಮಾರ್, ರಾಜ್ಯಪಾಲರು ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್; ರಾಜ್ಯಪಾಲರಾದ ಸುಧಾ ಯಾದವ್ ಉಪಸ್ಥಿತರಿದ್ದಾರೆ
  • ಬೆಂಗಳೂರು ನಗರ

ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ; ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಸಿಎಂ ಶಿವಕುಮಾರ್, ರಾಜ್ಯಪಾಲರು

November 13, 2026 12:17 PM
ನವೆಂಬರ್ 14ರಂದು ಬೆಂಗಳೂರಿನ ಎಲ್ಲ 64 ಎಆರ್‌ಒ ಕಚೇರಿಗಳಲ್ಲಿ ಇ-ಖಾತಾ ಓಪನ್ ಹೌಸ್ ಬೆಂಗಳೂರು ಉತ್ತರದ ಇ-ಖಾತಾ ಸೇವಾ ಕೇಂದ್ರದಲ್ಲಿ ನಾಗರಿಕರು ಮತ್ತು ಸಿಬ್ಬಂದಿ
  • ಬೆಂಗಳೂರು ನಗರ

ನವೆಂಬರ್ 14ರಂದು ಬೆಂಗಳೂರಿನ ಎಲ್ಲ 64 ಎಆರ್‌ಒ ಕಚೇರಿಗಳಲ್ಲಿ ಇ-ಖಾತಾ ಓಪನ್ ಹೌಸ್

November 13, 2026 8:24 AM

ನೀವು ತಪ್ಪಿಸಿಕೊಂಡಿರಬಹುದು

ನಿಲ್ದಾಣದಲ್ಲಿ ಹೂಮಾಲೆ ಹಾಕಿದ ನಮ್ಮ ಮೆಟ್ರೋ ಪಿಂಕ್ ಲೈನ್ ರೈಲು; ಹಸಿರು ಬಾವುಟ ಬೀಸುತ್ತಿರುವ ಪ್ರಧಾನಿ ಮೋದಿ ಮತ್ತು ಸಿಎಂ ಶಿವಕುಮಾರ್
  • ಬೆಂಗಳೂರು ನಗರ

ತಾವರೆಕೆರೆ ಮೆಟ್ರೋ ನಿಲ್ದಾಣದಲ್ಲಿ ನಮ್ಮ ಮೆಟ್ರೋ ಪಿಂಕ್ ಲೈನ್‌ಗೆ ಪ್ರಧಾನಿ ಮೋದಿ, ಸಿಎಂ ಶಿವಕುಮಾರ್ ಚಾಲನೆ

The Bengaluru Live November 13, 2026 1:47 PM
ತ್ಯಾಜ್ಯ ತೆರವಿನ ನಂತರ ವಿದ್ಯಾರಣ್ಯಪುರದಲ್ಲಿ ಕಾಂಪೌಂಡ್ ಗೋಡೆ ಮತ್ತು ಮರಗಳಿರುವ ರಸ್ತೆಯ ಪಕ್ಕದ ಸ್ವಚ್ಛ ಪಾದಚಾರಿ ಮಾರ್ಗ
  • ಬೆಂಗಳೂರು ನಗರ

ವಾರ್ಡ್ ಒನ್ ಅಭಿಯಾನದಲ್ಲಿ ವಿದ್ಯಾರಣ್ಯಪುರದ ಮೂರು ಮುಖ್ಯರಸ್ತೆಗಳ ಬದಿಯ ತ್ಯಾಜ್ಯ ತೆರವು

The Bengaluru Live November 13, 2026 1:23 PM
ಮೈಸೂರಿನಲ್ಲಿ ‘ಭಾರತ್ ವನ್’ ಯೋಜನೆಗೆ ಚಾಲನೆ ನೀಡುವ ವೇಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೆಟ್ಟ ಸಸಿಗೆ ನೀರು ಹಾಕುತ್ತಿರುವುದು
  • ಕರ್ನಾಟಕ

ಮೈಸೂರಿನಲ್ಲಿ ‘ಭಾರತ್ ವನ್’ ಯೋಜನೆಗೆ ನಿರ್ಮಲಾ ಸೀತಾರಾಮನ್ ಚಾಲನೆ, 2 ಲಕ್ಷ ಸಸಿ ನೆಡುವ ಗುರಿ

The Bengaluru Live November 13, 2026 1:21 PM
ರಸ್ತೆ ಬದಿಯ ಚರಂಡಿ ಮತ್ತು ಪಾದಚಾರಿ ಮಾರ್ಗದ ವಾರ್ಡ್ ಒನ್ ಕಾಮಗಾರಿಯ ಮೊದಲು-ನಂತರದ ಹೋಲಿಕೆ
  • ಬೆಂಗಳೂರು ನಗರ

ವಾರ್ಡ್ ಒನ್ ಅಭಿಯಾನದ ಎರಡನೇ ವಾರ: 11 ವಾರ್ಡ್‌ಗಳಲ್ಲಿ ಶೇ 76ರಷ್ಟು ಸಮಸ್ಯೆ ಇತ್ಯರ್ಥ, ಆಯುಕ್ತ ಕೆ.ಎನ್. ರಮೇಶ್

The Bengaluru Live November 13, 2026 12:20 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ತಾವರೆಕೆರೆ ಮೆಟ್ರೋ ನಿಲ್ದಾಣದಲ್ಲಿ ನಮ್ಮ ಮೆಟ್ರೋ ಪಿಂಕ್ ಲೈನ್‌ಗೆ ಪ್ರಧಾನಿ ಮೋದಿ, ಸಿಎಂ ಶಿವಕುಮಾರ್ ಚಾಲನೆ
  • ವಾರ್ಡ್ ಒನ್ ಅಭಿಯಾನದಲ್ಲಿ ವಿದ್ಯಾರಣ್ಯಪುರದ ಮೂರು ಮುಖ್ಯರಸ್ತೆಗಳ ಬದಿಯ ತ್ಯಾಜ್ಯ ತೆರವು
  • ಮೈಸೂರಿನಲ್ಲಿ ‘ಭಾರತ್ ವನ್’ ಯೋಜನೆಗೆ ನಿರ್ಮಲಾ ಸೀತಾರಾಮನ್ ಚಾಲನೆ, 2 ಲಕ್ಷ ಸಸಿ ನೆಡುವ ಗುರಿ
  • ವಾರ್ಡ್ ಒನ್ ಅಭಿಯಾನದ ಎರಡನೇ ವಾರ: 11 ವಾರ್ಡ್‌ಗಳಲ್ಲಿ ಶೇ 76ರಷ್ಟು ಸಮಸ್ಯೆ ಇತ್ಯರ್ಥ, ಆಯುಕ್ತ ಕೆ.ಎನ್. ರಮೇಶ್
©Copyright 2025 The Bengaluru Live All rights reserved. | MoreNews by AF themes.