Home ಅಪರಾಧ ಬೆಂಗಳೂರು ಮೂಲದ 3 ಗುತ್ತಿಗೆದಾರರ ಮೇಲೆ ಆದಾಯ ತೆರಿಗೆ ದಾಳಿ: ₹ 750 ಕೋಟಿಗಳ ಅಘೋಷಿತ...

ಬೆಂಗಳೂರು ಮೂಲದ 3 ಗುತ್ತಿಗೆದಾರರ ಮೇಲೆ ಆದಾಯ ತೆರಿಗೆ ದಾಳಿ: ₹ 750 ಕೋಟಿಗಳ ಅಘೋಷಿತ ಆದಾಯ ಬಹಿರಂಗ

33
0
Advertisement
bengaluru

₹ 9 ಕೋಟಿ ಮೌಲ್ಯದ ಚಿನ್ನಾಭರಣ, ₹ 4.69 ಕೋಟಿ ನಗದು ವಶ

ಬೆಂಗಳೂರು:

ಬೆಂಗಳೂರಿನ ಪ್ರಮುಖ ಮೂವರು ಗುತ್ತಿಗೆದಾರರ ಮೇಲೆ ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಗಳಲ್ಲಿ ಸುಮಾರು ₹ 750 ಕೋಟಿಗಳ ಅಘೋಷಿತ ಆದಾಯ ಪತ್ತೆಯಾಗಿದ್ದು, ₹ 9 ಕೋಟಿ ಮೌಲ್ಯದ ಚಿನ್ನ, ಬೆಳ್ಳಿ ಆಭರಣ ಮತ್ತು ₹ 4.69 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ.

ಪಿಐಬಿ ಮಂಗಳವಾರದ ಮಾಧ್ಯಮ ಪ್ರಕಟಣೆಯಲ್ಲಿ ಉಲ್ಲೇಖಿಸಲಾದ ಆದಾಯ ತೆರಿಗೆ ಮೂಲಗಳ ಪ್ರಕಾರ, ಆದಾಯ ತೆರಿಗೆ ಇಲಾಖೆ ನೀರಾವರಿ ಮತ್ತು ಹೆದ್ದಾರಿ ಯೋಜನೆಗಳ ಕಾಮಗಾರಿಗಳಲ್ಲಿ ತೊಡಗಿರುವ ಬೆಂಗಳೂರು ಮೂಲದ ಮೂವರು ಪ್ರಮುಖ ಗುತ್ತಿಗೆದಾರರ ವಿರುದ್ಧ ಆದಾಯ ತೆರಿಗೆ ಇಲಾಖೆ ಶೋಧ ಮತ್ತು ಪತ್ತೆ ಕಾರ್ಯಾಚರಣೆ ನಡೆಸಿದೆ. 2021ರ ಅಕ್ಟೋಬರ್ 7ರಂದು ಆರಂಭವಾದ ಈ ಕಾರ್ಯಾಚರಣೆ ನಾಲ್ಕು ರಾಜ್ಯಗಳಾದ್ಯಂತ 47 ಕಡೆ ನಡೆದಿದೆ.

ಬೋಗಸ್ ನಮೂದುಗಳು

ಈ ಶೋಧ ಕಾರ್ಯದ ವೇಳೆ, ಈ ಮೂರು ಸಂಸ್ಥೆಗಳು ನಕಲಿ ಖರೀದಿದಾದರರನ್ನು ಆಶ್ರಯಿಸುವ ಮೂಲಕ ತಮ್ಮ ಆದಾಯವನ್ನು ಮುಚ್ಚಿಟ್ಟಿರುವುದು, ಕಾರ್ಮಿಕ ವೆಚ್ಚಗಳ ಹಣದುಬ್ಬರ, ಬೋಗಸ್ ಉಪ-ಗುತ್ತಿಗೆಗಳ ವೆಚ್ಚ ಬುಕಿಂಗ್ ಇತ್ಯಾದಿಗಳಲ್ಲಿ ತೊಡಗಿರುವುದು ಕಂಡು ಬಂದಿದೆ. ನಿರ್ಮಾಣ ವ್ಯವಹಾರಗಳಿಗೆ ಸಂಬಂಧವಿಲ್ಲದ ಸುಮಾರು 40 ವ್ಯಕ್ತಿಗಳ ಹೆಸರಿನಲ್ಲಿ ಒಂದು ಬಳಗ, ನಕಲಿ ಉಪ ಗುತ್ತಿಗೆ ವೆಚ್ಚಗಳನ್ನು ಬುಕ್ ಮಾಡಿರುವುದು ತನಿಖೆಯ ವೇಳೆ ಹೊರಬಿದ್ದಿದೆ. ತನಿಖೆಯ ವೇಳೆ ಈ ವ್ಯಕ್ತಿಗಳು ತಾವು ಅವ್ಯವಹಾರ ಎಸಗಿರುವುದನ್ನು ಒಪ್ಪಿಕೊಂಡಿದ್ದಾರೆ.

bengaluru bengaluru

ಇನ್ನೊಂದು ಒಳಗ ಸುಮಾರು 382 ಕೋಟಿ ರೂ.ಗಳಷ್ಟು ಕಾರ್ಮಿಕ ವೆಚ್ಚಗಳ ಹಣದುಬ್ಬರವನ್ನು ಪಡೆದಿರುವುದಾಗಿ ಒಪ್ಪಿಕೊಂಡಿದೆ. ಅಲ್ಲದೆ, ಮತ್ತೊಂದು ಬಳಗ ಅಸ್ಥಿತ್ವದಲ್ಲೇ ಇಲ್ಲದ ಪೇಪರ್ ಕಂಪನಿಗಳಿಂದ ಸುಮಾರು 105 ಕೋಟಿ ಗಳವರೆಗೆ ವಸತಿ ಪ್ರವೇಶಗಳನ್ನು ಪಡೆದಿದೆ ಮತ್ತು ಆ ಅಂಶವನ್ನು ಆ ಬಳಗ ಒಪ್ಪಿಕೊಂಡಿದೆ.

Bengaluru IT raids

ಭೌತಿಕ ದಾಖಲೆಗಳು, ಡಿಜಿಟಲ್ ಸಾಕ್ಷ್ಯಗಳು ಸೇರಿ ಇತ್ಯಾದಿಗಳ ರೂಪದಲ್ಲಿ ವಿವಿಧ ದೋಷಾರೋಪಣ ಸಾಕ್ಷ್ಯಗಳು ಪತ್ತೆಯಾಗಿವೆ ಮತ್ತು ಅವುಗಳನ್ನು ವಶಕ್ಕೆ ಪಡೆಯಲಾಗಿದೆ. ಶೋಧ ಕಾರ್ಯದ ವೇಳೆ ಲೆಕ್ಕವಿಲ್ಲದ 4.96 ಕೋಟಿ ರೂ. ನಗದು; ಲೆಕ್ಕವಿಲ್ಲದ 8.67 ಕೋಟಿ ರೂ.ಮೌಲ್ಯದ ಆಭರಣ ಮತ್ತು ಬುಲಿಯನ್; 29.83 ಕೋಟಿ ರೂ. ಮೌಲ್ಯದ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಮೂರು ಸಂಸ್ಥೆಗಳ ಪತ್ತೆ ಮತ್ತು ಶೋಧ ಕಾರ್ಯದಿಂದ ಸುಮಾರು 750 ಕೋಟಿ ರೂ, ಮೌಲ್ಯದ ಘೋಷಿಸಲಾಗದ ಆದಾಯ ಪತ್ತೆಯಾಗಿದೆ. ಆ ಪೈಕಿ ಒಟ್ಟು 487 ಕೋಟಿ ರೂ. ಬಹಿರಂಗಪಡಿಸದ ಆದಾಯವೆಂದು ಸ್ವತಃ ಆಯಾ ಸಮೂಹ ಸಂಸ್ಥೆಗಳೇ ಒಪ್ಪಿಕೊಂಡಿವೆ.  

ಮುಂದಿನ ತನಿಖೆ ಪ್ರಗತಿಯಲ್ಲಿದೆ.

Also Read: Income-Tax raids on 3 Bengaluru-based contractors unearth Rs 750 crore undisclosed income


bengaluru

LEAVE A REPLY

Please enter your comment!
Please enter your name here