Home ಆರೋಗ್ಯ ಕೋವಿಶೀಲ್ಡ್ ಡೋಸ್ ಗಳ ನಡುವಿನ ಅಂತರ ಹೆಚ್ಚಿಸಿ: ರಾಜ್ಯ ಸರ್ಕಾರಗಳಿಗೆ ಕೇಂದ್ರ ಸೂಚನೆ

ಕೋವಿಶೀಲ್ಡ್ ಡೋಸ್ ಗಳ ನಡುವಿನ ಅಂತರ ಹೆಚ್ಚಿಸಿ: ರಾಜ್ಯ ಸರ್ಕಾರಗಳಿಗೆ ಕೇಂದ್ರ ಸೂಚನೆ

47
0

ನವದೆಹಲಿ:

ತಜ್ಞರ ಸಮತಿಯ ಶಿಫಾರಸುಗಳ ಆಧಾರದ ಮೇಲೆ ಕೋವಿಡ್ -19 ಲಸಿಕೆ ಕೋವಿಶೀಲ್ಡ್ ಎರಡು ಡೋಸ್ ಗಳ ನಡುವಿನ ಅಂತರವನ್ನು 6-8 ವಾರಗಳಿಗೆ ಹೆಚ್ಚಿಸುವಂತೆ ಕೇಂದ್ರ ಸರ್ಕಾರ ಸೋಮವಾರ ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಿದೆ.

ಈ ಹಿಂದೆ ನಿರ್ಲಕ್ಷಿಸಲ್ಪಟ್ಟ ಅಂತರರಾಷ್ಟ್ರೀಯ ಪುರಾವೆಗಳನ್ನು ಕೇಂದ್ರ ಸರ್ಕಾರ ಈಗ ಗಮನಿಸಿದ್ದು, ಕೋವಿಶೀಲ್ಡ್ನ ಎರಡನೇ ಡೋಸ್ ಅನ್ನು 6-8 ವಾರಗಳ ನಡುವೆ ನೀಡಿದರೆ ಹೆಚ್ಚು ಪರಿಣಾಮಕಾರಿ ಎಂದು ತೋರುತ್ತದೆ. ಆದರೆ ಎಂಟು ವಾರಗಳ ನಿಗದಿತ ಅವಧಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುವಂತಿಲ್ಲ ಎಂದು ಎಚ್ಚರಿಸಿದೆ.

ಕೆಲವು ದೇಶಗಳ ವೈಜ್ಞಾನಿಕ ಪುರಾವೆಗಳು ನಾಲ್ಕು ವಾರಗಳ ಅಂತರದಲ್ಲಿ ನೀಡಿದ ಲಸಿಕೆ ಸುಮಾರು ಶೇ. 60-65 ರಷ್ಟು ಪರಿಣಾಮಕಾರಿಯಾಗಿದ್ದರೆ, 12 ವಾರಗಳ ಮಧ್ಯಂತರದಲ್ಲಿ ನೀಡಿದರೆ ಶೇ. 90% ವರೆಗೆ ಪರಿಣಾಮಕಾರಿಯಾಗಿದೆ ಎಂದಿದೆ.

ಕೇಂದ್ರದ ನಿರ್ದೇಶನಗಳು ತಕ್ಷಣವೇ ಅನ್ವಯಿಸುತ್ತಿದ್ದು, ಮೊದಲ ಡೋಸ್ ತೆಗೆದುಕೊಂಡ ಎಲ್ಲರಿಗೂ 6 ರಿಂದ 8 ವಾರಗಳ ಅಂತರದಲ್ಲಿ ಎರಡನೆ ಡೋಸ್ ನೀಡಬೇಕು ಎಂದು ಹೇಳಿದೆ.

ಪುಣೆಯ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ(ಎಸ್‌ಐಐ) ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಸಂಸ್ಥೆಯ ಕೋವಿಶೀಲ್ಡ್ ಲಸಿಕೆಯ ಎರಡನೇ ಡೋಸ್ ಅನ್ನು ಪ್ರಸ್ತುತ ದೇಶದಲ್ಲಿ 4-6 ವಾರಗಳ ಅಂತರದಲ್ಲಿ ಫಲಾನುಭವಿಗಳಿಗೆ ನೀಡಲಾಗುತ್ತಿದೆ.

LEAVE A REPLY

Please enter your comment!
Please enter your name here