Home ಬೆಂಗಳೂರು ನಗರ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಹಾಲಿನ ಬೇಡಿಕೆ ಹೆಚ್ಚಳ; ಆದರೆ ಪೂರೈಕೆ ಕಡಿಮೆ: ಕೆಎಂಎಫ್

ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಹಾಲಿನ ಬೇಡಿಕೆ ಹೆಚ್ಚಳ; ಆದರೆ ಪೂರೈಕೆ ಕಡಿಮೆ: ಕೆಎಂಎಫ್

28
0
Karnataka's Nandini Milk begins it's sale in Maharashtra's Vidarbha Region1
bengaluru

ಬೆಂಗಳೂರು:

ರಾಜ್ಯದಾದ್ಯಂತ ಹಾಲಿನ ಬೇಡಿಕೆಯಲ್ಲಿ ಹೆಚ್ಚಳ ಕಾಣುತ್ತಿದೆ. ಆದರೆ, ಪೂರೈಕೆಯಲ್ಲಿ ಕೊರತೆ ಉಂಟಾಗುತ್ತಿದೆ ಎಂದು ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಹೇಳಿದೆ.

ಬೇಸಿಗೆ ಆರಂಭವಾಗುತ್ತಿದ್ದಂತೆ ಹಾಲಿನ ಬೇಡಿಕೆ ರಾಜ್ಯದಾದ್ಯಂತ ಶೇ 15-20ರಷ್ಟು ಹಾಗೂ ಬೆಂಗಳೂರಿನಲ್ಲಿ ಶೇ.17ರಷ್ಟು ಹೆಚ್ಚಿದೆ. ಆದರೆ, ರೈತರು ಬೆಳೆ ಕಟಾವಿನತ್ತ ಗಮನಹರಿಸುತ್ತಿರುವುದರಿಂದ ಪೂರೈಕೆ ಕಡಿಮೆಯಾಗಿದೆ. ಕೆಎಂಎಪ್ ಈಗ ರೈತರಿಂದ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಪ್ರೋತ್ಸಾಹ ಮತ್ತು ಯೋಜನೆಗಳನ್ನು ಘೋಷಿಸುತ್ತಿದೆ ಎಂದು ಕೆಎಂಎಫ್ ಅಧಿಕಾರಿಗಳು ತಿಳಿಸಿದ್ದಾರೆ.

‘ಜನರು ಹಾಲಿನ ಉತ್ಪನ್ನಗಳಿಗಿಂತ ಹೆಚ್ಚಿನ ಹಾಲನ್ನು ಬಯಸುತ್ತಿದ್ದಾರೆ. ಆದರೆ, ಇದು ಖಾಸಗಿ ಪೂರೈಕೆದಾರರು ಇದಕ್ಕೆ ವಿರುದ್ಧವಾಗಿದ್ದಾರೆ. ಖಾಸಗಿ ಪೂರೈಕೆದಾರರು ಹಾಲಿನ ಪೂರೈಕೆಯನ್ನು ಕಡಿಮೆ ಮಾಡಿದ್ದು, ಸೀಸನ್ ಆಧಾರಿತ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಇದರೊಂದಿಗೆ ಅವರ ಗ್ರಾಹಕರೂ ನಂದಿನಿ ಹಾಲಿನತ್ತ ತೆರಳಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದರು.

ಬೇಡಿಕೆಯಲ್ಲಿ ಶೇ 4ರಷ್ಟು ಹೆಚ್ಚಳವಾಗಿದೆ. ಆದರೆ, ಶೇ 1ರಷ್ಟು ಕೊರತೆಯಿದ್ದು, ರಾಷ್ಟ್ರೀಯ ಕೊರತೆ ಶೇ 5 ರಷ್ಟಿದೆ ಎಂದು ಅಧಿಕಾರಿಗಳು ಹೇಳಿದರು.

ಆದರೆ, ಕೆಎಂಎಫ್ ಅಧಿಕಾರಿಗಳು, ‘ಪ್ಯಾಕೆಟ್‌ನಲ್ಲಿ ಏನು ಘೋಷಿಸಲಾಗಿದೆಯೋ ಅದನ್ನು ಸರಬರಾಜು ಮಾಡಲಾಗುತ್ತಿದೆ. ಹೆಚ್ಚಿನ ಕೊಬ್ಬಿನ ಅಂಶವನ್ನು ಹೊಂದಿರುವ ಪೂರ್ಣ ಕೆನೆ ಹಾಲಿನ ಸಂದರ್ಭದಲ್ಲಿ ಮಾತ್ರ ನಾವು ಪ್ರಮಾಣವನ್ನು ಕಡಿಮೆ ಮಾಡಿದ್ದೇವೆ. ಆದರೆ, ಅದನ್ನು ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here