Home Uncategorized IND vs BAN: ಬಾಂಗ್ಲಾ ಹುಲಿಗಳ ಮೇಲೆ ಭಾರತದ ಸವಾರಿ; ಟೀಂ ಇಂಡಿಯಾ ಗೆಲುವಿಗೆ 4...

IND vs BAN: ಬಾಂಗ್ಲಾ ಹುಲಿಗಳ ಮೇಲೆ ಭಾರತದ ಸವಾರಿ; ಟೀಂ ಇಂಡಿಯಾ ಗೆಲುವಿಗೆ 4 ವಿಕೆಟ್ ಬಾಕಿ..!

12
0
Advertisement
bengaluru

ಚೆಟ್ಟೋಗ್ರಾಮ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಬಾಂಗ್ಲಾದೇಶ (India and Bangladesh) ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ (Team India) ಗೆಲುವಿನತ್ತ ಮುಖ ಮಾಡಿದೆ. ನಾಲ್ಕನೇ ದಿನದಾಟ ಮುಕ್ತಾಯಗೊಂಡಿದ್ದು, ದಿನದಾಟದಂತ್ಯಕ್ಕೆ ಬಾಂಗ್ಲಾ ತಂಡ ಪ್ರಮುಖ 6 ವಿಕೆಟ್ ಕಳೆದುಕೊಂಡು 272 ರನ್ ಗಳಿಸಿದೆ. ನಾಲ್ಕನೇ ದಿನದಾಟದಲ್ಲಿ ಬಾಂಗ್ಲಾ ಪರ ಜಾಕೀರ್ ಹಸನ್ (Zakir Hasan) ಶತಕ ಸಿಡಿಸಿ ಸಂಭ್ರಮಿಸಿದರೆ, ನಾಯಕ ಶಕೀಬ್ ಹಾಗೂ ಮೆಹದಿ ಹಸನ್ ಐದನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಈ ಪಂದ್ಯದಲ್ಲಿ ಬಾಂಗ್ಲಾ ಗೆಲ್ಲಬೇಕಾದರೆ ಕೊನೆಯ ದಿನದಲ್ಲಿ 241 ರನ್ ಗಳಿಸಬೇಕಿದೆ. ಈ ಕಡೆ ಟೀಂ ಇಂಡಿಯಾ ಗೆಲುವು ಸಾಧಿಸಬೇಕೆಂದರೆ ಬಾಂಗ್ಲಾ ತಂಡದಲ್ಲಿ ಉಳಿದಿರುವ 4 ವಿಕೆಟ್​ಗಳನ್ನು ಉರುಳಿಸಬೇಕಿದೆ.

ಭಾರತ ಮೊದಲ ಇನಿಂಗ್ಸ್‌ನಲ್ಲಿ 404 ರನ್ ಗಳಿಸಿದ ಭಾರತ, ಈ ಗುರಿ ಬೆನ್ನಟ್ಟಿದ ಬಾಂಗ್ಲಾ ತಂಡಕ್ಕೆ ಈ ಗುರಿ ಹತ್ತಿರ ಬರುವುದಕ್ಕೂ ಅವಕಾಶ ನೀಡಲಿಲ್ಲ. ಹೀಗಾಗಿ ಬಾಂಗ್ಲಾದೇಶ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 150 ರನ್‌ಗಳಿಗೆ ಆಲೌಟ್ ಆಗಿತ್ತು. ಟೀಂ ಇಂಡಿಯಾ ನಾಯಕ ಕೆಎಲ್ ರಾಹುಲ್ ಬಾಂಗ್ಲಾದೇಶಕ್ಕೆ ಫಾಲೋ ಆನ್ ನೀಡದೆ ಎರಡನೇ ಇನ್ನಿಂಗ್ಸ್ ಆರಂಭಿಸಲು ನಿರ್ಧರಿಸಿದರು. ಎರಡನೇ ಇನ್ನಿಂಗ್ಸ್​ನಲ್ಲಿ ಭಾರತ ಎರಡು ವಿಕೆಟ್ ಕಳೆದುಕೊಂಡು 258 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದು, ಬಾಂಗ್ಲಾದೇಶಕ್ಕೆ ಪ್ರಬಲ ಗುರಿ ನೀಡಿದೆ.

2. ಉತ್ತಮ ಆರಂಭ ಪಡೆದ ಬಾಂಗ್ಲಾ

ಭಾರತ ನೀಡಿರುವ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಬಾಂಗ್ಲಾ ಪಡೆ, 3ನೇ ದಿನದಾಟದಂತ್ಯಕ್ಕೆ ಯಾವುದೇ ವಿಕೆಟ್ ಕಳೆದುಕೊಳ್ಳದೆ 42 ರನ್​ಗಳಿಸಿತ್ತು. ಬಳಿಕ ನಾಲ್ಕನೇ ದಿನದಾಟ ಆರಂಭಿಸಿದ ಬಾಂಗ್ಲಾದೇಶ ತಂಡದ ಆರಂಭಿಕ ಜೋಡಿ ನಜ್ಮುಲ್ ಹುಸೇನ್ ಶಾಂಟೊ ಮತ್ತು ಜಾಕಿರ್ ಹಸನ್ ಮೊದಲ ವಿಕೆಟ್‌ಗೆ 124 ರನ್ ಸೇರಿಸಿದರು. ಆದರೆ ಈ ಜೋಡಿ ಮುರಿದ ತಕ್ಷಣ ಬಾಂಗ್ಲಾದೇಶದ ಬ್ಯಾಟಿಂಗ್ ವಿಭಾಗ ಛಿದ್ರಗೊಂಡಿತು, ಅಕ್ಷರ್ ಪಟೇಲ್, ಕುಲ್ದೀಪ್ ಮ್ಯಾಜಿಕ್ ಮುಂದೆ ಮಂಕಾದ ಬಾಂಗ್ಲಾ ತಂಡ ಆಗಾಗ್ಗೆ ವಿಕೆಟ್ ಕಳೆದುಕೊಳ್ಳಲಾರಂಭಿಸಿತು. ಆದರೆ, ಈ ಇಬ್ಬರು ಸ್ಪಿನ್ನರ್​ಗಳಿಗೂ ಮುನ್ನ ಶಾಂಟೊ ಅವರನ್ನು ಔಟ್ ಮಾಡುವ ಮೂಲಕ ಉಮೇಶ್ ಯಾದವ್ ಭಾರತಕ್ಕೆ ಮೊದಲ ವಿಕೆಟ್ ತಂದುಕೊಡುವಲ್ಲಿ ಯಶಸ್ವಿಯಾದರು. ತಮ್ಮ ಇನ್ನಿಂಗ್ಸ್​ನಲ್ಲಿ 156 ಎಸೆತಗಳನ್ನು ಎದುರಿಸಿದ ಶಾಂಟೊ ಏಳು ಬೌಂಡರಿಗಳ ನೆರವಿನಿಂದ 67 ರನ್ ಗಳಿಸಿದರು.

bengaluru bengaluru

3. ಅಕ್ಷರ್- ಕುಲ್ದೀಪ್ ಸ್ಪಿನ್ ಮ್ಯಾಜಿಕ್

ಮೊದಲ ವಿಕೆಟ್ ಪತನದ ಬಳಿಕ ಲಯ ಕಳೆದುಕೊಂಡ ಬಾಂಗ್ಲಾ ತಂಡಕ್ಕೆ ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಶಾಂಟೋ ವಿಕೆಟ್ ಬಳಿಕ ಅಕ್ಷರ್, ಯಾಸಿರ್ ಅಲಿಯನ್ನು ವಜಾ ಮಾಡಿದರು. ಲಿಟನ್ ದಾಸ್ ಅವರನ್ನು ಕುಲ್ದೀಪ್ ಯಾದವ್ ಔಟ್ ಮಾಡುವ ಮೂಲಕ ಭಾರತಕ್ಕೆ ನಾಲ್ಕನೇ ಯಶಸ್ಸು ತಂದುಕೊಟ್ಟರು. ಯಾಸಿರ್ ಐದು ರನ್ ಗಳಿಸಿದರೆ, ಲಿಟನ್ 19 ರನ್ ಗಳಿಸಿ ಪೆವಿಲಿಯನ್​ ಸೇರಿಕೊಂಡರು. ಶತಕ ಬಾರಿಸುವುದರೊಂದಿಗೆ ಭಾರತಕ್ಕೆ ತಲೆನೋವಾಗಿದ್ದ ಹಸನ್​ರನ್ನು ಔಟ್​ ಮಾಡುವ ಮೂಲಕ ಆಸ್ವಿನ್ ಭಾರತಕ್ಕೆ ಐದನೇ ಯಶಸ್ಸು ನೀಡಿದರು. ತಮ್ಮ ಇನ್ನಿಂಗ್ಸ್​ನಲ್ಲಿ 224 ಎಸೆತಗಳನ್ನು ಎದುರಿಸಿದ ಹಸನ್, 13 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 100 ರನ್ ಗಳಿಸಿದರು. ನಂತರ ಬಾಂಗ್ಲಾದೇಶಕ್ಕೆ ಐದನೇ ಹೊಡೆತವನ್ನು ನೀಡಿದ ಅಕ್ಷರ್, ಮುಶ್ಫಿಕ್ಮರ್ ರಹೀಮ್ ಅವರ ಇನ್ನಿಂಗ್ಸ್ ಅನ್ನು 23 ರನ್‌ಗಳಿಗೆ ಕೊನೆಗೊಳಿಸಿದರು. ಬಳಿಕ ನೂರುಲ್ ಹಸನ್​ಗೂ ಪೆವಿಲಿಯನ್ ಹಾದಿ ತೋರಿಸಿದರು.


bengaluru

LEAVE A REPLY

Please enter your comment!
Please enter your name here