Home Uncategorized IND vs BAN: ಭಾರತ ವಿರುದ್ಧದ 2ನೇ ಟೆಸ್ಟ್‌ಗೆ ಬಾಂಗ್ಲಾ ತಂಡ ಪ್ರಕಟ; ಇಬ್ಬರು ಸ್ಟಾರ್...

IND vs BAN: ಭಾರತ ವಿರುದ್ಧದ 2ನೇ ಟೆಸ್ಟ್‌ಗೆ ಬಾಂಗ್ಲಾ ತಂಡ ಪ್ರಕಟ; ಇಬ್ಬರು ಸ್ಟಾರ್ ಬೌಲರ್ಸ್​ ತಂಡದಿಂದ ಔಟ್..!

5
0
bengaluru

ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ಬಾಂಗ್ಲಾದೇಶ (India vs Bangladesh) ಕ್ರಿಕೆಟ್ ಮಂಡಳಿ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಸರಣಿಯ ಎರಡನೇ ಮತ್ತು ಕೊನೆಯ ಪಂದ್ಯ ಡಿಸೆಂಬರ್ 22 ರಿಂದ ಢಾಕಾದಲ್ಲಿ ನಡೆಯಲಿದೆ. ಸರಣಿಯ ಮೊದಲ ಟೆಸ್ಟ್ ಪಂದ್ಯವನ್ನು ಈಗಾಗಲೇ ಗೆದ್ದಿರುವ ಟೀಂ ಇಂಡಿಯಾ (Team India), ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ. ಹೀಗಾಗಿ ಕೊನೆಯ ಪಂದ್ಯವನ್ನು ಗೆದ್ದು, ಸರಣಿಯನ್ನು ಕೈವಶ ಮಾಡಿಕೊಳ್ಳುವುದರೊಂದಿಗೆ ಏಕದಿನ ಸರಣಿಯ ಸೋಲಿಗೆ ಸೇಡನ್ನು ತೀರಿಸಿಕೊಳ್ಳುವ ಯತ್ನದಲ್ಲಿ ಟೀಂ ಇಂಡಿಯಾ ಇದೆ. ಇತ್ತ ಕೊನೆಯ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಸಮಬಲಗೊಳಿಸಲು ಬಾಂಗ್ಲಾ ತಂಡ ಹೋರಾಡಲಿದೆ. ಇದಕ್ಕಾಗಿ ಎರಡನೇ ಟೆಸ್ಟ್ ಪಂದ್ಯಕ್ಕೆ ತಂಡದಲ್ಲಿ ಬದಲಾವಣೆ ಮಾಡಿರುವ ಬಾಂಗ್ಲಾದೇಶ ತಂಡ ಎಡಗೈ ಸ್ಪಿನ್ ಬೌಲರ್ ನಸುಮ್ ಅಹ್ಮದ್ (Nasum Ahmed) ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.

ನಸುಮ್​ಗೆ ತಂಡದಲ್ಲಿ ಸ್ಥಾನ ನೀಡಲು ಶಕೀಬ್ ಅಲ್ ಹಸನ್ ಬಹುದೊಡ್ಡ ಕಾರಣವಾಗಿದ್ದಾರೆ. ಮೊದಲ ಟೆಸ್ಟ್‌ನಲ್ಲಿ ಬಾಂಗ್ಲಾ ಸೋತ ಬಳಿಕ ಮಾತನಾಡಿದ್ದ ಬಾಂಗ್ಲಾದೇಶದ ಕೋಚ್ ರಸೆಲ್ ಡೊಮಿಂಗೊ, ಎರಡನೇ ಟೆಸ್ಟ್‌ನಲ್ಲಿ ಶಕೀಬ್ ಅಲ್ ಹಸನ್ ಬೌಲಿಂಗ್ ಮಾಡುವುದು ಖಚಿತವಾಗಿಲ್ಲ ಎಂದು ಹೇಳಿದ್ದರು. ಭಾರತ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಶಕೀಬ್ ಗಾಯಗೊಂಡಿದ್ದರು. ಹೀಗಾಗಿ ಚಟ್ಟೋಗ್ರಾಮ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 11 ಓವರ್‌ಗಳನ್ನು ಬೌಲ್ ಮಾಡಿದ ಅವರು ಎರಡನೇ ಇನ್ನಿಂಗ್ಸ್‌ನಲ್ಲಿ ಒಂದೇ ಒಂದು ಓವರ್ ಬೌಲಿಂಗ್ ಮಾಡಲಿಲ್ಲ. ಹೀಗಾಗಿ ನಸುಮ್‌ಗೆ ಅವಕಾಶ ನೀಡುವ ಮೂಲಕ ಬಾಂಗ್ಲಾ ತಂಡದ ಸ್ಪಿನ್ ವಿಭಾಗಕ್ಕೆ ಬಲ ತುಂಬಲಾಗಿದೆ.

ENG vs PAK: ಕರಾಚಿ ಟೆಸ್ಟ್‌ನಲ್ಲಿ ಭಾರತದ 87 ಸಿಕ್ಸರ್‌ಗಳ ದಾಖಲೆ ಮುರಿದ ಇಂಗ್ಲೆಂಡ್..!

2. ಈ ಆಟಗಾರರು ಔಟ್

bengaluru

ಬಾಂಗ್ಲಾದೇಶಕ್ಕೆ ದೊಡ್ಡ ಹಿನ್ನಡೆ ಎಂದರೆ ತಂಡದ ಸ್ಟಾರ್ ಬೌಲರ್ ಇಬಾದತ್ ಹೊಸೈನ್ ಎರಡನೇ ಟೆಸ್ಟ್‌ನಿಂದ ಹೊರಗುಳಿದಿರುವುದು. ಇಂಜುರಿಯಿಂದ ಬಳಲುತ್ತಿರುವ ಇಬಾದತ್ ಎರಡನೇ ಟೆಸ್ಟ್​ಗೆ ಅಲಭ್ಯರಾಗಿದ್ದಾರೆ. ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಶ್ರೇಯಸ್ ಅಯ್ಯರ್ ಅವರ ಪ್ರಮುಖ ವಿಕೆಟ್ ಪಡೆದಿದ್ದ ಇಬಾದತ್, ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ಸಾಕಷ್ಟು ತೊಂದರೆ ನೀಡಿದ್ದರು. ಅದೇ ಸಮಯದಲ್ಲಿ, ಮಂಡಿರಜ್ಜು ಸಮಸ್ಯೆಯಿಂದ ಬಳಲುತ್ತಿರುವ ಶೋರಿಫುಲ್ ಇಸ್ಲಾಮ್ ಅವರನ್ನು ತಂಡದಿಂದ ಕೈಬಿಡಲಾಗಿದ್ದು ಅವರ ಸ್ಥಾನಕ್ಕೆ ಮೊಮಿನುಲ್ ಹಕ್ ಅವರನ್ನು ಕರೆತರಲಾಗಿದೆ.

The Bangladesh Cricket Board (BCB) announces the squad for the second Test (22-26 December 2022) against India at the Sher-e-Bangla National Cricket Stadium, Mirpur.#BCB | #Cricket | #BANvIND pic.twitter.com/yaN9sVRGq3

— Bangladesh Cricket (@BCBtigers) December 18, 2022

3. ಎರಡನೇ ಟೆಸ್ಟ್​ಗೆ ಬಾಂಗ್ಲಾದೇಶ ತಂಡ

ಜಾಕಿರ್ ಹಸನ್, ನಜ್ಮುಲ್ ಹೊಸೈನ್ ಶಾಂಟೊ, ಲಿಟ್ಟನ್ ದಾಸ್, ಶಾಕಿಬ್ ಅಲ್ ಹಸನ್ (ನಾಯಕ), ಮುಶ್ಫಿಕರ್ ರಹೀಮ್, ಯಾಸಿರ್ ಅಲಿ, ನೂರುಲ್ ಹಸನ್ (ವಿಕೆಟ್ ಕೀಪರ್), ಮೆಹಿದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ಖಲೀದ್ ಅಹ್ಮದ್, ನಸುಮ್ ಅಹ್ಮದ್, ಮಹ್ಮುದುಲ್ ಹಸನ್ ಪ್ಲೆಷರ್, ಮೊಮಿನುಲ್ ಹಕ್, ರೆಹಮಾನ್ ರಾಜಾ, ತಸ್ಕಿನ್ ಅಹ್ಮದ್

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

bengaluru

LEAVE A REPLY

Please enter your comment!
Please enter your name here