ಬೆಂಗಳೂರು: ಪೋಲೆಂಡ್ನಲ್ಲಿರುವ ಭಾರತದ ರಾಯಭಾರಿ ನೀತಾ ಭೂಷಣ್ ಅವರು ಶನಿವಾರ ಕರ್ನಾಟಕ ಒಲಿಂಪಿಕ್ ಸಂಸ್ಥೆಯ (ಕೆಒಎ) ಕಚೇರಿಯಲ್ಲಿರುವ ಡಾ. ಕೆ. ಗೋವಿಂದರಾಜ್ ಹಾಲ್ ಆಫ್ ಫೇಮ್ ಮ್ಯೂಸಿಯಂಗೆ ಭೇಟಿ ನೀಡಿದರು. ಮ್ಯೂಸಿಯಂನಲ್ಲಿರುವ ಕರ್ನಾಟಕದ ಕ್ರೀಡಾ ಸಾಧಕರ ಚಿತ್ರಗಳನ್ನು ಅವರು ವೀಕ್ಷಿಸಿದರು.
ಬಳಿಕ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಫಿಬಾ ಏಷ್ಯಾ ಮಹಿಳಾ ಬಾಸ್ಕೆಟ್ಬಾಲ್ ಲೀಗ್ನಲ್ಲಿ ಭಾರತೀಯ ರೈಲ್ವೇಸ್ ಮತ್ತು ಅಕಾರಿ ಸ್ಪಾರ್ಕ್ಸ್ ನಡುವಿನ ಕ್ಲಾಸಿಫಿಕೇಷನ್ ಪಂದ್ಯವನ್ನು ಕೆಲಕಾಲ ವೀಕ್ಷಿಸಿದರು.
ನೀತಾ ಭೂಷಣ್ ಅವರಿಗೆ ಗೋವಿಂದರಾಜ್ ಸನ್ಮಾನ
ಫಿಬಾ ಏಷ್ಯಾ ಅಧ್ಯಕ್ಷ, ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಡಾ. ಕೆ. ಗೋವಿಂದರಾಜ್ ಅವರು ನೀತಾ ಭೂಷಣ್ ಅವರಿಗೆ ಮೈಸೂರು ಪೇಟ ತೊಡಿಸಿ ಸನ್ಮಾನಿಸಿದರು.
