ಇಂದಿರಾನಗರ ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿದ ಪದಕಗಳ ಚಿತ್ರಗಳನ್ನು ತೋರಿಸುವ ಪೊಲೀಸ್ ಪ್ರದರ್ಶನ ಫಲಕ.
ಬೆಂಗಳೂರು: ಮನೆ ಕಳವು ಪ್ರಕರಣದಲ್ಲಿ ಇಂದಿರಾನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಚಿನ್ನ ಮತ್ತು ಬೆಳ್ಳಿ ಪದಕಗಳು ಸೇರಿದಂತೆ ಎಂಟು ಅಂತರರಾಷ್ಟ್ರೀಯ ಕ್ರೀಡಾ ಪದಕಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಬೆಂಗಳೂರು ನಗರ ಪೊಲೀಸರು ಬುಧವಾರ ತಿಳಿಸಿದರು.
ತನಿಖೆಯ ವೇಳೆ ಕ್ಯಾಮೆರಾ, ಕೊಡಗಿನ ಕತ್ತಿ ಮತ್ತು ಒಲಿಂಪಿಕ್ ಬ್ಯಾಗ್ ಕೂಡ ವಶಪಡಿಸಿಕೊಳ್ಳಲಾಗಿದೆ. ಕೃತ್ಯಕ್ಕೆ ಬಳಸಲಾಗಿತ್ತು ಎನ್ನಲಾದ ದ್ವಿಚಕ್ರ ವಾಹನವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ಶೋಧ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
