Home ಬೆಂಗಳೂರು ನಗರ ಜಿಲ್ಲೆಗಳಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಸೂಚನೆ – ಸಚಿವ ಸಿ.ಸಿ.ಪಾಟೀಲ್

ಜಿಲ್ಲೆಗಳಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಸೂಚನೆ – ಸಚಿವ ಸಿ.ಸಿ.ಪಾಟೀಲ್

40
0
Industries should be developed in other districts too Karnataka Minister CC Patil
Advertisement
bengaluru

ಬೆಂಗಳೂರು:

ಬೆಂಗಳೂರಿನಲ್ಲಿ ಮಾತ್ರ ಕೈಗಾರಿಕೆಗಳು ಅಭಿವೃದ್ಧಿಯಾದರೆ ಸಾಲದು, ಜಿಲ್ಲೆಗಳಲ್ಲಿಯೂ ಸಹ ಕೈಗಾರಿಕೆಗಳು ಅಭಿವೃದ್ಧಿಯಾದಾಗ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ ಎಂದು ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿವ ಸಿ.ಸಿ. ಪಾಟೀಲ್ ಅವರು ತಿಳಿಸಿದರು.

ಇಂದು ವಿಕಾಸಸೌಧದಲ್ಲಿ ಹಮ್ಮಿಕೊಂಡಿದ್ದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿಗಾಗಿ 2020-21ನೇ ಸಾಲಿನಲ್ಲಿ ಅನುಷ್ಠಾನಗೊಳಿಸಲಾದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವರು ಕೈೈಗಾರಿಕೆಗಳ ಅಭಿವೃದ್ಧಿಗಾಗಿ ಸರ್ಕಾರ ನೀಡುವ ಹಣ ಸದುಪಯೋಗವಾಗಬೇಕು. ವಿವಿಧ ಯೋಜನೆಯಡಿ ನೀಡಲಾದ ಪ್ರೋತ್ಸಾಹ ಧನ ಮತ್ತು ರಿಯಾಯಿತಿಗಳು ಸಮರ್ಪಕವಾಗಿ ಬಳಕೆಯಾಗಿದೆಯೇ ಅಥವಾ ಇಲ್ಲವೇ ಎಂಬುವುದರ ಬಗ್ಗೆ ಅಧಿಕಾರಿಗಳು ಕೈಗಾರಿಕೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಸಹಾಯ ಧನ ಪಡೆದ ನಂತರ ಕೈಗಾರಿಕೆಗಳು ಸಮರ್ಪಕವಾಗಿ ನಡೆಯುತ್ತಿವೆಯೇ ಎಂಬುದರ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಕೇವಲ ಸಹಾಯಧನ ಪಡೆಯುವ ಸಲುವಾಗಿ ಅಥವಾ ಬೇನಾಮಿಯಾಗಿ ಅರ್ಜಿ ಸಲ್ಲಿಸುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಎಂ.ಎಸ್.ಎಂ.ಇ ಕೈಗಾರಿಕಾ ಘಟಕಗಳಿಗೆ ಕಳೆದ ಸಾಲಿನಲ್ಲಿ ಕೈಗಾರಿಕಾ ನೀತಿಯಡಿ ರೂ 114 ಕೋಟಿ ಸಹಾಯಧನ ಮತ್ತು ಕೃಷಿ ನೀತಿಯಡಿ ರೂ 165 ಕೋಟಿ ಸಹಾಯಧನ ಈಗಾಗಲೇ ಬಿಡುಗಡೆ ಮಾಡಲಾಗಿದೆ.

bengaluru bengaluru

ಎಂಎಸ್‍ಇ ಸಿಡಿಪಿ ಕ್ಲಸ್ಟರ್ ಯೋಜನೆಗೆ ರೂ. 3.08 ಕೋಟಿ, ಕೆ.ಎಸ್.ಸಿ.ಸಿ.ಎಫ್.ಎಲ್, ಕೆ.ಎಸ್.ಸಿ.ಡಿಸಿ ಕಿಲ್ಟ್ ಕೃಪುಡ್ಸ್ ತರಬೇತಿ ವಿಚಾರ ಸಂಕಿರಣ ವೆಚ್ಚಕ್ಕೆ ರೂ 7.00 ಕೋಟಿ, ಮುಖ್ಯಮಂತ್ರಿಯವರ ಸ್ವಯಂ ಉದ್ಯೋಗ ಯೋಜನೆ ಸಹಾಯಧನ, ಕೆ.ಎಸ್.ಎಫ್.ಸಿ ಶೇಕಡ 6ರ ಬಡ್ಡಿ ಸಹಾಯಧನ, ಕೈಗಾರಿಕಾ ನೀತಿಯಡಿ ಪ್ರೋತ್ಸಹ ಮತ್ತು ರಿಯಾಯಿತಿಗಾಗಿ ರೂ 114.04 ಕೋಟಿ, ಖಾದಿ ಮತ್ತು ಗ್ರಾಮೋದ್ಯೋಗ ಸಣ್ಣ ಕೈಗಾರಿಕೆಗಳ ಉತ್ಪನ್ನಗಳ ಮೇಲಿನ ರಿಯಾಯಿತಿ ಎಂ.ಡಿ.ಎ ಮತ್ತು ಪ್ರೋತ್ಸಾಹ ಮಜೂರಿ ಸಹಾಯಧನಕ್ಕಾಗಿ ರೂ. 105.84 ಕೋಟಿ, ತೆಂಗಿನ ನಾರಿನ ವಲಯಕ್ಕೆ ನೆರವು ಕಲ್ಪಿಸಲು ತೆಂಗು ಭಾಗ್ಯ ಯೋಜನೆಯಡಿ ರೂ 10.00 ಕೋಟಿ, ಕರಕುಶಲ ಕಲೆಗೆ ಬೆಂಬಲ ನೀಡಲು ರಿಯಾಯಿತಿ ಸಹಾಯಧನಕ್ಕಾಗಿ ರೂ 1.00 ಕೋಟಿ ಕ್ಲಿಸ್ಟಕರ ಮೂಲಸೌಕರ್ಯ ಅಭಿವೃದ್ಧಿಗಾಗಿ ರೂ. 53.49 ಕೋಟಿ, ಅವೇಕ್ ಮುಂದುವರೆದ ಕಾಮಗಾರಿಗಳಿಗಾಗಿ ರೂ 2.00 ಕೋಟಿ, ರಾಯಚೂರು ಮತ್ತು ಗುಲ್ಬರ್ಗ ಜಿಲ್ಲೆಗಳಲ್ಲಿನ ಕಟ್ಟಡ ಕಾಮಗಾರಿಗಳ ವೆಚ್ಚಕ್ಕಾಗಿ ರೂ. 1.50 ಕೋಟಿಗಳನ್ನು ಬಿಡುಗಡೆ ಮಾಡಲಾಗಿದೆ.

ಇಲಾಖೆಯ ಪ್ರಗತಿ ಪರಿಶೀಲಿಸಿದ ಸಚಿವರು ಕೆಲವು ಜಿಲ್ಲೆಗಳಲ್ಲಿ ಯೋಜನಾ ಪ್ರಗತಿ ಕುಟಿಂತವಾಗಿದ್ದು, ಮುಂದಿನ ದಿನಗಳಲ್ಲಿ ನಿಗಧಿತ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕೆಂದು ತಿಳಿಸಿದರು.

ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ (ಎಂ.ಎಸ್.ಎಂಇ) ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಆಯುಕ್ತರಾದ ಶ್ರೀಮತಿ ಗುಂಜನ್ ಕೃಷ್ಣ, ನಿರ್ದೇಶಕರು (ಎಂಎಸ್‍ಎಂಇ) ಶ್ರೀಮತಿ ವಿನೋದ್ ಪ್ರಿಯ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಎಲ್ಲಾ ಜಿಲ್ಲೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.


bengaluru

LEAVE A REPLY

Please enter your comment!
Please enter your name here