Home Uncategorized IPL vs PSL: 500 ಆಟಗಾರರ ಪಟ್ಟಿ ಪ್ರಕಟ; ಐಪಿಎಲ್ ಹರಾಜಿಗೂ ಮುನ್ನ ಪಾಕಿಸ್ತಾನದ ಗಿಮಿಕ್..!

IPL vs PSL: 500 ಆಟಗಾರರ ಪಟ್ಟಿ ಪ್ರಕಟ; ಐಪಿಎಲ್ ಹರಾಜಿಗೂ ಮುನ್ನ ಪಾಕಿಸ್ತಾನದ ಗಿಮಿಕ್..!

2
0
bengaluru

ಐಪಿಎಲ್ ಹರಾಜಿಗೂ (IPL 2023 Mini Auction) ಮುನ್ನ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಮತ್ತೊಂದು ಸಂಚಲನ ಮೂಡಿಸಿದೆ. ಪಾಕಿಸ್ತಾನ ಸೂಪರ್ ಲೀಗ್ (Pakistan Super League) ಎಂಟನೇ ಸೀಸನ್‌ಗಾಗಿ ಆಟಗಾರರ ಡ್ರಾಫ್ಟ್ ಸಿದ್ಧಪಡಿಸಿದೆ. ಪಿಎಸ್‌ಎಲ್‌ಗಾಗಿ ಸಿದ್ಧಪಡಿಸಲಾದ ಈ ಡ್ರಾಫ್ಟ್​ನಲ್ಲಿ 500 ಆಟಗಾರರನ್ನು ಸೇರಿಸಲಾಗಿದೆ. ಈ ಆಟಗಾರರಲ್ಲಿ ಆರನ್ ಫಿಂಚ್, ಮ್ಯಾಥ್ಯೂ ವೇಡ್, ಮೊಯಿನ್ ಅಲಿ ( Moeen Ali), ವನಿಂದು ಹಸರಂಗ, ಕೀರಾನ್ ಪೊಲಾರ್ಡ್, ಮಾರ್ಟಿನ್ ಗಪ್ಟಿಲ್ ಕೂಡ ಸೇರಿದ್ದಾರೆ. ಡಿಸೆಂಬರ್ 15 ರಂದು ಪಾಕಿಸ್ತಾನ್ ಸೂಪರ್ ಲೀಗ್‌ಗೆ ಆಟಗಾರರನ್ನು ಡ್ರಾಫ್ಟ್ ಮಾಡಲಾಗಿದೆ. ಐಪಿಎಲ್‌ನಲ್ಲಿ ಭಾಗವಹಿಸುವ ಅನೇಕ ಆಟಗಾರರು ಈ ಪಿಎಸ್‌ಎಲ್ ಡ್ರಾಫ್ಟ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಐಪಿಎಲ್ ಆರಂಭವಾಗುವುದಕ್ಕೂ ಮುನ್ನ ಪಿಎಸ್​ಎಲ್ ಮುಕ್ತಾಯವಾಗುವುದರಿಂದ ಎಲ್ಲಾ ವಿದೇಶಿ ಆಟಗಾರರು ಐಪಿಎಲ್​ಗೆ ಲಭ್ಯರಾಗಲಿದ್ದಾರೆ.

2. ಇಂಗ್ಲೆಂಡ್ ಸ್ಟಾರ್ ಆಟಗಾರರು ಪಟ್ಟಿಯಲ್ಲಿ

ಜಿಯೋ ನ್ಯೂಸ್ ಪ್ರಕಾರ, 138 ಇಂಗ್ಲೆಂಡ್ ಆಟಗಾರರು ಪಾಕಿಸ್ತಾನ ಸೂಪರ್ ಲೀಗ್​ಗೆ ಹೆಸರು ನೋಂದಾಯಿಸಿದ್ದಾರೆ. ಅಲ್ಲದೆ ಈ ಎಲ್ಲಾ ಆಟಗಾರರು ಪಾಕಿಸ್ತಾನ ಸೂಪರ್ ಲೀಗ್ 8ನೇ ಆವೃತ್ತಿಗೆ ಲಭ್ಯರಿರಲಿದ್ದಾರೆ. ಇದಲ್ಲದೆ ಅಫ್ಘಾನಿಸ್ತಾನದಿಂದ 46, ಬಾಂಗ್ಲಾದೇಶದಿಂದ 30, ನ್ಯೂಜಿಲೆಂಡ್‌ನಿಂದ 6, ದಕ್ಷಿಣ ಆಫ್ರಿಕಾದಿಂದ 26, ಶ್ರೀಲಂಕಾದಿಂದ 62, ಜಿಂಬಾಬ್ವೆಯಿಂದ 11 ಮತ್ತು ವೆಸ್ಟ್ ಇಂಡೀಸ್‌ನಿಂದ 40 ಆಟಗಾರರು ಮುಂಬರುವ ಪಾಕಿಸ್ತಾನ ಸೂಪರ್ ಲೀಗ್‌ಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.

7 ಆಟಗಾರರು ಖಾತೆಯನ್ನೇ ತೆರೆಯಲಿಲ್ಲ; 25 ರನ್‌ಗಳಿಗೆ ಆಲೌಟ್..! ರಣಜಿಯಲ್ಲಿ ನಡೆಯಿತು ವಿಚಿತ್ರ ಪಂದ್ಯ

bengaluru

3. ಪ್ಲಾಟಿನಂ ಗುಂಪಿನಲ್ಲಿ ಯಾರ್ಯಾರಿದ್ದಾರೆ?

ಆರನ್ ಫಿಂಚ್, ಮ್ಯಾಥ್ಯೂ ವೇಡ್, ಶಕೀಬ್ ಅಲ್ ಹಸನ್, ಅಲೆಕ್ಸ್ ಹೇಲ್ಸ್, ಡೇವಿಡ್ ವಿಲ್ಲಿ, ಡೇವಿಡ್ ಮಲನ್, ಮೊಯಿನ್ ಅಲಿ, ಜಿಮ್ಮಿ ನೀಶಮ್, ಡೇವಿಡ್ ಮಿಲ್ಲರ್, ಆದಿಲ್ ರಶೀದ್, ಭಾನುಕಾ ರಾಜಪಕ್ಸೆ, ದಸುನ್ ಶಾನಕ, ವನಿಂದು ಹಸರಂಗ, ಕೀರನ್ ಪೊಲಾರ್ಡ್, ಮುಜೀಬ್ ಉರ್ ರೆಹಮಾನ್, ಮೊಹದ್. ನಬಿ, ಮಾರ್ಟಿನ್ ಗುಪ್ಟಿಲ್, ಲುಂಗಿ ಎನ್ಗಿಡಿ ಪ್ಲಾಟಿನಂ ಗುಂಪಿನಲ್ಲಿ ಸ್ಥಾನ ಪಡೆದಿದ್ದಾರೆ.

4. ಡೈಮಂಡ್ ಗ್ರೂಪ್​ನಲ್ಲಿರುವ ಆಟಗಾರರಿವರು

ಪಾಕಿಸ್ತಾನ್ ಸೂಪರ್ ಲೀಗ್ ಡೈಮಂಡ್ ವಿಭಾಗದಲ್ಲಿ ಕಾರ್ಲೋಸ್ ಬ್ರಾಥ್‌ವೈಟ್, ಇಮ್ರಾನ್ ತಾಹಿರ್, ಸಾಕಿಬ್ ಮಹಮೂದ್, ಜೇಮ್ಸ್ ವಿನ್ಸ್, ತಮೀಮ್ ಇಕ್ಬಾಲ್, ಮುಶ್ಫಿಕ್ ಉರ್ ರಹೀಮ್, ಹಜರತುಲ್ಲಾ ಝಜೈ, ವಿಲ್ ಜ್ಯಾಕ್, ರೆಜಾ ಹೆಂಡ್ರಿಕ್ಸ್, ಶಾಯ್ ಹೋಪ್ ಮತ್ತು ಸಿಕಂದರ್ ರಜಾ ಅವರಂತಹ ಆಟಗಾರರಿದ್ದಾರೆ.

5. ಪಿಎಸ್ಎಲ್ ವೇಳಾಪಟ್ಟಿ

ಪಾಕಿಸ್ತಾನ್ ಸೂಪರ್ ಲೀಗ್ 9 ಫೆಬ್ರವರಿ 2023 ರಿಂದ ಪ್ರಾರಂಭವಾಗಲಿದ್ದು, ಮಾರ್ಚ್ 19ರಂದು ಫೈನಲ್ ಪಂದ್ಯ ನಡೆಯಲಿದೆ. ಈ ಪಂದ್ಯಾವಳಿಯು 40 ದಿನಗಳವರೆಗೆ ನಡೆಯಲಿದೆ. ಏತನ್ಮಧ್ಯೆ, ಐಪಿಎಲ್ 2023 ಮಾರ್ಚ್ ಕೊನೆಯ ವಾರದಲ್ಲಿ ಪ್ರಾರಂಭವಾಗಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

bengaluru

LEAVE A REPLY

Please enter your comment!
Please enter your name here