Home Uncategorized IRCTC: ನೀರಿನ ಬಾಟಲ್​ಗೆ 5 ರೂ. ಹೆಚ್ಚು ಪಡೆದದ್ದಕ್ಕೆ ಐಆರ್​ಸಿಟಿಸಿ ಗುತ್ತಿಗೆದಾರನಿಗೆ 1 ಲಕ್ಷ ರೂ....

IRCTC: ನೀರಿನ ಬಾಟಲ್​ಗೆ 5 ರೂ. ಹೆಚ್ಚು ಪಡೆದದ್ದಕ್ಕೆ ಐಆರ್​ಸಿಟಿಸಿ ಗುತ್ತಿಗೆದಾರನಿಗೆ 1 ಲಕ್ಷ ರೂ. ದಂಡ

12
0

ನವದೆಹಲಿ: ಪ್ರಯಾಣಿಕರಿಗೆ ಮಾರಾಟ ಮಾಡುವ ಕುಡಿಯುವ ನೀರಿನ ಬಾಟಲ್​ಗೆ (Packaged Drinking Water) ನಿಗದಿತ ಗರಿಷ್ಠ ದರಕ್ಕಿಂತ 5 ರೂ. ಹೆಚ್ಚು ಪಡೆದದಕ್ಕೆ ಐಆರ್​ಸಿಟಿಸಿ (IRCTC) ಗುತ್ತಿಗೆದಾರನಿಗೆ ಭಾರತೀಯ ರೈಲ್ವೆ (Indian Railways) 1 ಲಕ್ಷ ರೂ. ದಂಡ ವಿಧಿಸಿದೆ. ಹರಿಯಾಣದ ಅಂಬಾಲ ವಲಯದಲ್ಲಿ (Ambala division) ಪ್ರಕರಣ ನಡೆದಿದೆ. ಪ್ರಯಾಣಿಕರೊಬ್ಬರ ದೂರಿನ ಆಧಾರದಲ್ಲಿ ದಂಡ ವಿಧಿಸಲಾಗಿದೆ. ಉತ್ತರ ಪ್ರದೇಶದ ಗೋಂಡಾ ಪ್ರದೇಶದ ಗುತ್ತಿಗೆದಾರ ಚಂದ್ರಮೌಳಿ ಮಿಶ್ರಾಗೆ ದಂಡ ವಿಧಿಸಲಾಗಿದೆ. ಇವರು ರೈಲು ಸಂಖ್ಯೆ 12231/32 (ಲಖನೌ-ಚಂಡೀಗಢ-ಲಖನೌ) ಇದರಲ್ಲಿ ಆಹಾರ ಪೂರೈಕೆಗೆ ಪರವಾನಗಿ ಹೊಂದಿದ್ದರು ಎಂದು ಅಂಬಾಲ ವಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಕುಡಿಯುವ ನೀರಿನ ಬಾಟಲ್​ಗೆ 15 ರೂ. ಎಂಆರ್​ಪಿ ಇದ್ದು, ತಮ್ಮಿಂದ 20 ರೂ. ಪಡೆಯಲಾಗಿದೆ ಎಂದು ಪ್ರಯಾಣಿಕ ಶಿವಂ ಭಟ್ ಎಂಬವರು ಗುರುವಾರ ಟ್ವಿಟರ್​ನಲ್ಲಿ ವಿಡಿಯೊ ಪೋಸ್ಟ್ ಮಾಡಿದ್ದರು. ದಿನೇಶ್ ಎಂಬವರು ಹೆಚ್ಚುವರಿ ಹಣ ಪಡೆದಿರುವುದಾಗಿ ಅವರು ದೂರಿದ್ದರು. ರೈಲು ಸಂಖ್ಯೆ 12232ರಲ್ಲಿ ಅವರು ಪ್ರಯಾಣಿಸಿದ್ದರು. ಈ ದೂರಿನ ಮೇರೆಗೆ ದಿನೇಶ್ ಎಂಬವರ ಮ್ಯಾನೇಜರ್ ರವಿ ಕುಮಾರ್ ಎಂಬವರನ್ನು ಲಖನೌನಲ್ಲಿ ಬಂದಿಸಲಾಗಿತ್ತು. ಭಾರತೀಯ ರೈಲ್ವೆ ಕಾಯ್ದೆಯ ಸೆಕ್ಷನ್ 144(1)ರ ಅಡಿಯಲ್ಲಿ ಬಂಧನವಾಗಿತ್ತು. ಬಳಿಕ ಅವರ ಗುತ್ತಿಗೆದಾರನಿಗೆ ದಂಡ ವಿಧಿಸುವಂತೆ ವಿಭಾಗೀಯ ರೈಲ್ವೆ ಮ್ಯಾನೇಜರ್ ಮನ್​ದೀಪ್ ಸಿಂಗ್ ಭಾಟಿಯಾಗೆ ಶಿಫಾರಸು ಮಾಡಲಾಗಿತ್ತು ಎಂದು ‘ಹಿಂದೂಸ್ತಾನ್ ಟೈಮ್ಸ್’ ವರದಿ ಮಾಡಿದೆ.

ಇದನ್ನೂ ಓದಿ: IRCTC Stake Sell: ಐಆರ್​ಸಿಟಿಸಿ ಬಂಡವಾಳ ಮಾರಾಟ ಘೋಷಿಸಿದ ಸರ್ಕಾರ; ಷೇರು ಮೌಲ್ಯ ಕುಸಿತ

ದೂರಿನ ಮೇರೆಗೆ ಐಆರ್​ಸಿಟಿಸಿಯ ಪ್ರಾದೇಶಿಕ ಆಯುಕ್ತರಿಗೆ ಅಂಬಾಲಕ್ಕೆ ವಿಚಾರಣೆಗೆ ಬರುವಂತೆ ಸಮನ್ಸ್ ನೀಡಲಾಯಿತು. ರೈಲುಗಳಲ್ಲಿ ನೀಡುವ ಸೇವೆಗಳಿಗೆ ಪ್ರಯಾಣಿಕರಿಂದ ಹೆಚ್ಚಿನ ಹಣ ಪಡೆಯುವುದನ್ನು ತಡೆಯುವ ಬಗ್ಗೆ ಸಮಾಲೋಚನೆ ನಡೆಸಲಾಯಿತು ಎಂದು ವಿಭಾಗೀಯ ವಾಣಿಜ್ಯ ಮ್ಯಾನೇಜರ್ ಹರಿಮೋಹನ್ ತಿಳಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ. ಪರವಾನಗಿ ಮತ್ತು ಇತರ ವಿವರಗಳನ್ನು ಪರಿಶೀಲಿಸಿದ ಬಳಿಕ ಗುತ್ತಿಗೆದಾರನಿಗೆ 1 ಲಕ್ಷ ರೂ. ದಂಡ ವಿಧಿಸಲಾಯಿತು ಎಂದು ಮನ್​ದೀಪ್ ಸಿಂಗ್ ಭಾಟಿಯಾ ತಿಳಿಸಿದ್ದಾರೆ.

ಭಾರತೀಯ ರೈಲ್ವೆಯ ಆಹಾರ ವಿತರಣೆ ಮತ್ತು ಪ್ರವಾಸ ನಿಗಮ ‘ಐಆರ್​ಸಿಟಿಸಿ’ ರೈಲುಗಳಲ್ಲಿ ಆಹಾರ ಪೂರೈಕೆ ಮಾಡುತ್ತದೆ. ಇದಕ್ಕಾಗಿ ಐಆರ್​ಸಿಟಿಸಿ ಹೊರಗುತ್ತಿಗೆ ನೀಡುತ್ತದೆ. ಪರವಾನಗಿ ಪಡೆದ ಗುತ್ತಿಗೆದಾರರು ರೈಲುಗಳಲ್ಲಿ ನೀರು, ಆಹಾರ ಪೂರೈಕೆ ವ್ಯವಸ್ಥೆ ಮಾಡುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here