Home ಅಪರಾಧ Kalaburagi: Incense factory fire due to short circuit | ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಅಗರಬತ್ತಿ...

Kalaburagi: Incense factory fire due to short circuit | ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಅಗರಬತ್ತಿ ಫ್ಯಾಕ್ಟರಿ ಧಗಧಗ

59
0

ಕಲಬುರಗಿ: ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಅಗರಬತ್ತಿ ಫ್ಯಾಕ್ಟರಿ ಧಗಧಗನೇ ಹೊತ್ತಿ ಉರಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.ಕೈಲಾಸ ನಗರದಲ್ಲಿನ ಅಗರಬತ್ತಿ ಫ್ಯಾಕ್ಟರಿಯಲ್ಲಿ ಅಗ್ನಿ ಅನಾಹುತ ನಡೆದಿದ್ದು ಅಮಾವಾಸ್ಯೆ ನಿಮ್ಮಿತ್ತ ಇಂದು ಫ್ಯಾಕ್ಟರಿ ಬಂದ್ ಮಾಡಲಾಗಿತ್ತು.

ಈ ಹಿನ್ನಲೆ ಅದೃಷ್ಟವಷಾತ್ ಯಾರಿಗೂ ಏನೂ ಆಗಿಲ್ಲ. ಮಧ್ಯಾನ 1.30 ಕ್ಕೆ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ಇಡೀ ಫ್ಯಾಕ್ಟರಿಗೆ ವ್ಯಾಪಿಸಿತು. ಚಂದ್ರಶೇಖರ್ ಎಂಬುವರಿಗೆ ಸೇರಿರೋ ಈ ಫ್ಯಾಕ್ಟರಿ ಅಗ್ನಿ ಅವಘಢದಲ್ಲಿ
ಲಕ್ಷಾಂತರ ರೂಪಾಯಿ ಮೌಲ್ಯದ ಅಗರಬತ್ತಿ ಸುಟ್ಟು ಭಸ್ಮವಾಗಿವೆ.

ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿಗಳು ಆಗಮಿಸೋ ಹೊತ್ತಿಗೆ ಎಲ್ಲವೂ ಭಸ್ಮವಾಗಿತ್ತು. ಆರ್‌ಜೆ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

LEAVE A REPLY

Please enter your comment!
Please enter your name here