Bellary: 21 sheep die in Leopard attack | ಚಿರತೆ ದಾಳಿ ಪರಿಣಾಮ 21 ಕುರಿಗಳು ದಾರುಣ ಸಾವು
ಬಳ್ಳಾರಿ: ಕುರಿ ಹಿಂಡಿನ ಮೇಲೆ ಚಿರತೆ ದಾಳಿ ನಡೆದ ಪರಿಣಾಮ 21 ಕುರಿಗಳು ದಾರುಣ ಸಾವನ್ನಪ್ಪಿದ ಘಟನೆ ಬಳ್ಳಾರಿ ತಾಲೂಕಿನ ಸಂಜೀವರಾಯನಕೋಟೆ ಗ್ರಾಮದ ಬಳಿ ಜರುಗಿದೆ.
ತಡರಾತ್ರಿ ಚಿರತೆಯೊಂದು ಹೊಲಕ್ಕೆ ನುಗ್ಗಿದ್ದು,ಕುರಿಗಳ ಮೇಲೆ ದಾಳಿ ಮಾಡಿದೆ. ದಾಳಿ ವೇಳೆ ಕಟ್ಟಿಹಾಕಿ ನಿಲ್ಲಿಸಿದ್ದ 21 ಕುರಿಗಳನ್ನ ಸಾಯಿಸಿ 2 ಕುರಿಗಳನ್ನು ಹೊತ್ತೊಯ್ದಿದೆ. ರೈತ ಸಣ್ಣ ತಿಮ್ಮಪ್ಪ ಎಂಬುವವರ 21 ಕುರಿಗಳು ಮೃತಪಟ್ಟಿವೆ,ಸ್ಥಳಕ್ಕೆ ಅರಣ್ಯಾಧಿಕಾರಿಗಳು, ಪಶುವೈದ್ಯರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಬಳ್ಳಾರಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
