ಬೆಂಗಳೂರು:
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ರನ್ನು ವರ್ಗಾವಣೆ ಮಾಡದಂತೆ ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಅಮೃತ್ ರಾಜ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.
ಒಂದು ವೇಳೆ ವರ್ಗಾವಣೆ ಮಾಡಿದರೆ ಉಗ್ರ ಹೋರಾಟ ಮಾಡೋದಾಗಿ ಎಚ್ಚರಿಕೆ ನೀಡಿದ್ದಾರೆ.
“ಮುಖ್ಯ ಆಯುಕ್ತರು ರವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುತ್ತಾರೆ. ಚಿಲುಮ ಸಂಸ್ಥೆ ರವರ ಮತದಾರರ ಪಟ್ಟಿ ಪರಿಷ್ಕರಣೆ ಲೋಪ ಎಸಗಿರುವ ಮೇರೆಗೆ ಮಾನ್ಯ ಮುಖ್ಯ ಆಯುಕ್ತರನ್ನು ವರ್ಗಾವಣೆ ಮಾಡಲು ಚಿಂತಿಸುತ್ತಿರುವುದು ನಮ್ಮ ಸಂಘವೂ ಖಂಡಿಸುತ್ತದೆ. ಒಂದು ವೇಳೆ ವರ್ಗಾವಣೆ ಮಾಡಿದ್ದೆ ಆದಲ್ಲಿ ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮಹಾನಗರ ಪಾಲಿಕೆ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೆಲಸ ಕಾರ್ಯಗಳನ್ನು ಸ್ಥಗಿತ ಮಾಡಿ ನ್ಯಾಯಾಯುತ ಬೇಡಿಕೆಗಾಗಿ ಹೋರಾಟ ಮಾಡಲಾಗುವುದೆಂದು ಈ ಮೂಲಕ ತಿಳಿಯಪಡಿಸಲಾಗಿದೆ ಎಂದು ಅಮೃತ್ ರಾಜ್ ಪತ್ರ ನಲ್ಲಿ ಬರೆದಿದ್ದಾರೆ.

“ಈಗಾಗಲೇ ಮಾನ್ಯ ವಿಶೇಷ ಆಯುಕ್ತರು (ಆಡಳಿತ) ಮತ್ತು ಮಾನ್ಯ ಜಿಲ್ಲಾಧಿಕಾರಿಗಳನ್ನು ಅಮಾನತ್ತು ಪಡಿಸಿರುವುದನ್ನು ರದ್ದು ಪಡಿಸಲು ಕೋರಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 4 ಕಂದಾಯ ಅಧಿಕಾರಿಗಳನ್ನು ಅಮಾನತ್ತು ಪಡಿಸಿ ಬಂಧಿಸಿರುವುದು ಕಾನೂನು ಬಾಹಿರವಾಗಿರುತ್ತದೆ. ಸದರಿ ಪ್ರಕರಣವೂ ಜನರ ಪ್ರಾತಿನಿತ್ಯ ಕಾಯ್ದೆ ಅಡಿಯಲ್ಲಿ (RP Act) ಮಾತ್ರ ತನಿಖೆ ಮಾಡಲು ಈ ಮೂಲಕ ಕೋರಲಾಗಿದೆ,” ಎಂದರು.

“… ಮ. ಚಿಲುಮೆ ಸಂಸ್ಥೆಯವರು ಎಸಗಿರುವ ಅಕ್ರಮವೂ ಐ.ಪಿ.ಸಿ ಸೆಕ್ಷನ್ ಕಾಯ್ದೆ ಅಡಿಯಲ್ಲಿ ಬರುವುದರಿಂದ, ತಾವು ದಯವಿಟ್ಟು ಉನ್ನತ ಅಧಿಕಾರಿಗಳು ಮತ್ತು ಪಾಲಿಕೆ ಅಧಿಕಾರಿಗಳನ್ನು ಜನರ ಪ್ರತಿನಿತ್ಯ ಕಾಯ್ದೆ ಅಡಿಯಲ್ಲಿ (RP Act) ತನಿಖೆ ಮಾಡಿಸಲು ಈ ಮೂಲಕ ಕೋರಲಾಗಿದೆ. ಈ ಎಲ್ಲಾ ಅಂಶವನ್ನು ತಮ್ಮ ಗಮನಕ್ಕೆ ತರುತ್ತಾ ಮಾನ್ಯ ತುಷಾರ್ ಗಿರಿನಾಥ್ ರವರನ್ನು ವರ್ಗಾವಣೆ ಮಾಡಿದ್ದೆ ಆದಲ್ಲಿ ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮಹಾನಗರ ಪಾಲಿಕೆ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಉಗ್ರ ಹೋರಾಟ ಮಾಡಲಾಗುವುದೆಂದು ಈ ಮೂಲಕ ಕೋರಲಾಗಿದೆ, ” ಎಂದರು.