ಹಾವೇರಿ:
ಕೃಷಿ ಸಚಿವರೂ ಹಾವೇರಿ ಉಸ್ತುವಾರಿಗಳಾಗಿರುವ ಬಿ.ಸಿ.ಪಾಟೀಲರಿಂದು ಬೂಸ್ಟರ್ ಡೋಸ್ ಲಸಿಕೆ ಪಡೆದರು. ಮತಕ್ಷೇತ್ರ ಹಿರೇಕೆರೂರಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 60 ವರ್ಷ ಮೇಲ್ಪಟ್ಟ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆ ಕಾರ್ಯಕರ್ತೆಯರು ಬೂಸ್ಟರ್ ಡೋಸ್ ಲಸಿಕೆ ಹಾಕಿದರು.
ದೇಶದಲ್ಲಿ ಆರೋಗ್ಯ, ಮುಂಚೂಣಿ ಕಾರ್ಯಕರ್ತರು ಮತ್ತು 60 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ಕೊಮೊರ್ಬಿಡ್ ಜನರಿಗೆ ಕೊರೋನಾ ವೈರಸ್ ವಿರುದ್ಧ ಮುನ್ನೆಚ್ಚರಿಕಾ ಡೋಸ್ನ್ನು ಇಂದಿನಿಂದ ನೀಡಲಾಗುತ್ತಿದ್ದು,ಬೂಸ್ಟರ್ ಡೋಸ್ ಲಸಿಕೆ ವೇಳೆ ಮಿಕ್ಸ್ ಡೋಸ್ ನೀಡಲು ಅವಕಾಶವಿಲ್ಲ.ಈ ಹಿಂದೆ ಮೊದಲ ಹಾಗೂ ಎರಡನೇ ಡೋಸ್ ಯಾವ ಲಸಿಕೆ ಪಡೆಯಲಾಗಿದೆಯೋ ಅದೇ ಲಸಿಕೆ ಪಡೆಯಬೇಕು.ಎಲ್ಲರೂ ತಪ್ಪದೇ ಲಸಿಕಾಕರಣ ಹಾಕಿಸಿಕೊಳ್ಳುವಂತೆ ಈ ವೇಳೆ ಬಿ.ಸಿ.ಪಾಟೀಲ್ ಕರೆ ನೀಡಿದರು.
ಈ ಹಿಂದೆ ಮೊದಲ, ಎರಡನೇ ಡೋಸ್ ಯಾವ ಲಸಿಕೆ ಪಡೆಯಲಾಗಿದೆಯೋ ಅದೇ ಲಸಿಕೆ ಪಡೆಯಬೇಕು. ಕೋವಿಶೀಲ್ಡ್, ಕೋವ್ಯಾಕ್ಸಿನ್ 2 ಡೋಸ್ ಲಸಿಕೆ ಪಡೆದವರು, ಬೂಸ್ಟರ್ ಡೋಸ್ನ್ನೂ ಕೂಡ ಅವುಗಳನ್ನೇ ಪಡೆಯಬೇಕು. ಮಿಕ್ಸ್ ಬೂಸ್ಟರ್ ಡೋಸ್ ನೀಡಲು ಅನುಮತಿಸುವುದಿಲ್ಲ. ಮುಂಚೂಣಿ ಆರೋಗ್ಯ ಕಾರ್ಯಕರ್ತರು, ಆರೋಗ್ಯ ಸೇವಕರು, 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ನೀಡಲಾಗುತ್ತದೆ.ಮೂರನೇ ಡೋಸ್ ಲಸಿಕೆಯು ಓಮೈಕ್ರಾನ್ ರೂಪಾಂತರ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುವ ವಿರುದ್ಧ ಶೇಕಡಾ 88 ರಷ್ಟು ರಕ್ಷಣೆ ನೀಡುತ್ತದೆ ಎಂದು ಯುಕೆ ಅಧ್ಯಯನವು ಕಂಡುಹಿಡಿದಿದೆ ಎಂದು ಸಚಿವರು ಹೇಳಿದರು.