Home ಬೆಂಗಳೂರು ನಗರ ಅಮೆಜಾನ್ ಮತ್ತು ಕೆ.ಎಸ್.ಆರ್.ಎಲ್.ಪಿ. ಎಸ್ ನಡುವೆ ಒಪ್ಪಂದ

ಅಮೆಜಾನ್ ಮತ್ತು ಕೆ.ಎಸ್.ಆರ್.ಎಲ್.ಪಿ. ಎಸ್ ನಡುವೆ ಒಪ್ಪಂದ

37
0
Karnataka, Amazon tie up to boost rural products
Advertisement
bengaluru

ಡಿಜಿಟಲ್ ಮಾರ್ಕೆಟಿಂಗ್ ಮೂಲಕ ಸ್ವಸಹಾಯ ಗುಂಪುಗಳ ಉದ್ಯಮಿಗಳ ವ್ಯವಹಾರ ವೃದ್ಧಿ

ಬೆಂಗಳೂರು:

ಡಿಜಿಟಲ್ ಮಾರ್ಕೆಟಿಂಗ್ ಮೂಲಕ ಸ್ವಹಾಯ ಗುಂಪುಗಳ ಉದ್ಯಮಿಗಳಿಗೆ ವ್ಯವಹಾಗಳನ್ನು ವೃದ್ಧಿಸಲು ಅಮೆಜಾನ್ ಮತ್ತು ಕೆ.ಎಸ್.ಆರ್.ಎಲ್.ಪಿ.ಎಸ್ (Karnataka state rural livelihood promotion society) ನಡುವಿನ ಒಪ್ಪಂದ ಸಹಕಾರಿಯಾಗಲಿದೆ.

ಸ್ವಸಹಾಯ ಗುಂಪುಗಳು ಹಾಗೂ ಮಹಿಳಾ ಉದ್ಯಮಿಗಳಿಗೆ ದೊಡ್ಡ ಮಟ್ಟದಲ್ಲಿ ಆನ್‍ಲೈನ್ ಗ್ರಾಹಕರನ್ನು ಈ ಒಪ್ಪಂದ ದೊರಕಿಸಿಕೊಡಲಿದೆ. ಈ ನೂತನ ವ್ಯವಹಾರದಲ್ಲಿ ಮಹಿಳಾ ಉದ್ಯಮಿಗಳು ಸ್ಪರ್ಧಿಸಲು ಸಂಜೀವಿನಿ- ಕೆ.ಎಸ್.ಆರ್.ಎಲ್.ಪಿ. ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಸಹಯೋಗದಲ್ಲಿ ಮಹಿಳಾ ಉದ್ಯಮಿಗಳಿಗೆ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲು ಹಾಗೂ ಮಾರಾಟ ಮಾಡಲು ಡಿಜಿಟಲ್ ಮಾರ್ಕೆಟಿಂಗ್ ನೆರವನ್ನು ಒದಗಿಸಲಿದೆ.

ಇ-ಕಾಮರ್ಸ್ ಪೋರ್ಟಲ್‍ಗಳೊಂದಿಗಿನ ಸಹಯೋಗವು ಸಂಜೀವಿನಿ ಸ್ವಸಹಾಯ ಗುಂಪುಗಳ ಉತ್ಪನ್ನಗಳನ್ನು ಗ್ರಾಹಕರಿಗೆ ಲಭ್ಯವಾಗುವಂತೆ ಮಾಡಲಿದೆ.

bengaluru bengaluru

ಈ ಒಡಂಬಡಿಕೆಯಿಂದ ರಾಷ್ಟ್ರಮಟ್ಟದಲ್ಲಿ ಮಹಿಳಾ ಉದ್ಯಮಿಗಳಿಗೆ ಮಾರುಕಟ್ಟೆ ದೊರೆಯುತ್ತದೆ. ಅದರ ಸೌಲಭ್ಯಗಳು ಮಹಿಳಾ ಉದ್ಯಮಿಗಳ ತರಬೇತಿ ಹಾಗೂ ಸಬಲೀಕರಣ ಕಾರ್ಯಕ್ರಮವಾದ ಸಹೇಲಿಗೂ ವಿಸ್ತರಣೆ ಆಗಲಿವೆ. ಕರ್ನಾಟಕದ ಸ್ವಸಹಾಯ ಗುಂಪುಗಳ ಮಹಿಳಾ ಉದ್ಯಮಿಗಳು ತಯಾರಿಸಿರುವ ಗೃಹ ಬಳಕೆ, ಗೃಹಾಲಂಕಾರ, ಕಚೇರಿಗಳಲ್ಲಿ ಬಳಸುವ ವಸ್ತುಗಳು, ಸಂಸ್ಕರಿಸಿದ ಮತ್ತು ಮೌಲ್ಯವರ್ಧಿತ ಆಹಾರ ಉತ್ಪನ್ನಗಳು ಸೇರಿದಂತೆ ಇನ್ನಿತರೆ ವಿಶಿಷ್ಟ ಉತ್ಪನ್ನಗಳನ್ನು ಆನ್ ಲೈನ್ ಮಾರುಕಟ್ಟೆಗೆ ತಂದು ದೇಶವ್ಯಾಪಿ ಗ್ರಾಹಕರಿಗೆ ಲಭ್ಯವಾಗಿಸಲಿದೆ.

ಪ್ರಾರಂಭಿಕ ಹಂತದಲ್ಲಿ 53 ಉತ್ಪನ್ನಗಳನ್ನು ಅಮೆಜಾನ್ ಮೂಲಕ ಮಾರಾಟ ಮಾಡಲಾಗುತ್ತಿದೆ. ಈ ಆರ್ಥಿಕ ವರ್ಷದ ಅಂತ್ಯಕ್ಕೆ 200 ಉತ್ಪನ್ನಗಳನ್ನು ಸೇರ್ಪಡೆ ಮಾಡಲಾಗುವುದು. ಸಂಜೀವಿನಿ ಕೆ.ಎಸ್.ಆರ್.ಎಲ್.ಪಿ.ಎಸ್ ಮೈಶುಗರ್ ಕಟ್ಟಡದಲ್ಲಿ ಸಂಗ್ರಹಾಗಾರವನ್ನು( ಸಹೇಲಿ ಕೇಂದ್ರ) ತೆರೆಯಲಾಗುವುದು. ಅಮೆಜಾನ್‍ನೊಂದಿಗೆ ಸಹಯೋಗವಿರುವ ಮಹಿಳಾ ಉದ್ಯಮಿಗಳಿಗೆ ಕೌಶಲ್ಯಾಭಿವೃದ್ಧಿ ಮತ್ತು ತರಬೇತಿಯನ್ನು ಸಂಜೀವಿನಿ ಕೆ.ಎಸ್.ಆರ್.ಎಲ್.ಪಿ.ಎಸ್ ನೀಡಲಿದೆ.

Also Read: Karnataka, Amazon tie up to boost rural products

ಉತ್ಪನ್ನಗಳ ಪಟ್ಟಿ ಮಾಡುವುದು, ವರ್ಚಸ್ಸು ವೃದ್ದಿ, ಪ್ಯಾಕೇಜಿಂಗ್, ಶಿಪ್ಪಿಂಗ್, ಲೆಕ್ಕಪತ್ರ ನಿರ್ವಹಣೆ ಹಾಗೂ ಗ್ರಾಹಕ ಸೇವೆಗಳ ಕುರಿತಂತೆ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಒಟ್ಟಾರೆ ರಾಜ್ಯದ ಮಹಿಳಾ ಸ್ವ ಸಹಾಯ ಗುಂಪುಗಳ ಉತ್ಪನ್ನಗಳನ್ನು ಆನಲೈನ್ ಮೂಲಕ ಗ್ರಾಹಕರ ಕೈಗೆ ಸುಲಭವಾಗಿ ದೊರೆಯುವಂತೆ ಮಾಡುವ ಮೂಲಕ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಯನ್ನಾಗಿ ಮಾಡುವುದು ಈ ಮಹತ್ವದ ಯೋಜನೆಯ ಉದ್ದೇಶ. ಆ ಮೂಲಕ ಉಕ್ತೃಷ್ಟ ಉತ್ಪನ್ನಗಳು ಗ್ರಾಹಕರಿಗಿ ಸುಲಭವಾಗಿ ಸಿಗುವಂತೆ ಮಾಡಲಿದೆ ಈ ಯೋಜನೆ.


bengaluru

LEAVE A REPLY

Please enter your comment!
Please enter your name here