Home ಬೆಂಗಳೂರು ನಗರ ಓಸಿ ಇಲ್ಲದೇ ಅಪಾರ್ಟ್‍ಮೆಂಟ್‍ಗಳಿಗೆ ವಿದ್ಯುತ್ ಪರವಾನಗಿ ನೀಡದಿರುವ ಅಧಿಸೂಚನೆಯನ್ನು ರದ್ದು ಪಡಿಸಲು ರಾಜ್ಯ ಬಿಜೆಪಿ ನಿಯೋಗ...

ಓಸಿ ಇಲ್ಲದೇ ಅಪಾರ್ಟ್‍ಮೆಂಟ್‍ಗಳಿಗೆ ವಿದ್ಯುತ್ ಪರವಾನಗಿ ನೀಡದಿರುವ ಅಧಿಸೂಚನೆಯನ್ನು ರದ್ದು ಪಡಿಸಲು ರಾಜ್ಯ ಬಿಜೆಪಿ ನಿಯೋಗ ಮನವಿ

64
0
Karnataka BJP delegation requests to cancel notification of non-supply of power for apartments which do not have occupancy certificate
bengaluru

ಬೆಂಗಳೂರು:

ಬೆಸ್ಕಾಂ ವ್ಯಾಪ್ತಿಯಲ್ಲಿ ಬರುವ ಬಹುಮಹಡಿ ಕಟ್ಟಡಗಳು ಮತ್ತು ಅಪಾರ್ಟ್‍ಮೆಂಟ್‍ಗಳಿಗೆ ವಿದ್ಯುತ್ ಪರವಾನಗಿ ನೀಡದಿರುವ ಅಧಿಸೂಚನೆಯನ್ನು ರದ್ದು ಪಡಿಸಬೇಕೆಂದು ರಾಜ್ಯ ಬಿಜೆಪಿ ನಿಯೋಗ ಒಂದು ಸರ್ಕಾರವನ್ನು ಮನವಿ ಮಾಡಿದೆ.

ನಗರದ “ಕೃಷ್ಣಾ”ದಲ್ಲಿ ಇಂದು ರಾಜ್ಯ ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ವಿ. ಸುನೀಲ್ ಕುಮಾರ್ ಅವರನ್ನು ಭೇಟಿ ಮಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಶ್ವತ್ಥನಾರಾಯಣ ಅವರ ನೇತೃತ್ವದ ನಿಯೋಗವು ಮನವಿ ಸಲ್ಲಿಸಿತು.

ರಾಜ್ಯದ ಹಿಂದಿನ ಸಮ್ಮಿಶ್ರ ಸರಕಾರದಲ್ಲಿ ಇಂಧನ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಅವರು 27.12.2017ರಂದು ಹೊರಡಿಸಿದ ನೋಟಿಫಿಕೇಶನ್ ದುರುದ್ದೇಶದಿಂದ ಕೂಡಿದೆ. ಇದರಿಂದ ಬೆಸ್ಕಾಂ ವ್ಯಾಪ್ತಿಯಲ್ಲಿ ಬರುವ ಬಿಡಬ್ಲ್ಲುಎಸ್‍ಎಸ್‍ಬಿಯಿಂದ ನೀರಿನ ಸಂಪರ್ಕ ಪಡೆದಿರುವ ಬಹುಮಹಡಿ ಕಟ್ಟಡಗಳು ಮತ್ತು ಅಪಾರ್ಟ್‍ಮೆಂಟ್‍ಗಳಿಗೆ ವಿದ್ಯುತ್ ಸಂಪರ್ಕ ನೀಡುತ್ತಿಲ್ಲ. ಅವರೆಲ್ಲರೂ ಜನರೇಟರ್ ಮೂಲಕ ವಿದ್ಯುತ್ ಸೌಕರ್ಯ ಪಡೆದುಕೊಂಡಿದ್ದಾರೆ ಎಂದು ಗಮನ ಸೆಳೆಯಲಾಯಿತು.

bengaluru

ಈ ಅಧಿಸೂಚನೆಯಿಂದ ಪ್ರತಿ ಮನೆಗೆ ಕನಿಷ್ಠ 500 ರೂಪಾಯಿ ಎಂದರೂ ಬೆಸ್ಕಾಂಗೆ ಪ್ರತಿ ತಿಂಗಳಿಗೆ ಕನಿಷ್ಠ 100 ಕೋಟಿ ರೂಪಾಯಿ ವಹಿವಾಟು ನಷ್ಟವಾಗುತ್ತಿದೆ. ಇನ್ನೊಂದೆಡೆ ಜನರೇಟರ್ ಮೂಲಕ ವಿದ್ಯುತ್ ಪಡೆಯುವ ಸಾರ್ವಜನಿಕರಿಗೆ ದುಪ್ಪಟ್ಟು ಖರ್ಚಾಗುತ್ತಿದೆ. ವಾಸಪ್ರಮಾಣ ನಕಲಿ ದೃಢಪತ್ರ (ಒಸಿ) ಮಾಡಿಸಿಕೊಡುವ ದೊಡ್ಡ ಜಾಲವೇ ಬೆಂಗಳೂರಿನಲ್ಲಿದ್ದು, ಸಾರ್ವಜನಿಕರಿಂದ ಒಂದು ಸರ್ಟಿಫಿಕೇಟಿಗೆ ಲಕ್ಷಾಂತರ ರೂಪಾಯಿ ಸುಲಿಗೆ ಮಾಡಲಾಗುತ್ತಿದೆ ಎಂದು ನಿಯೋಗ ವಿವರಿಸಿತು.

ಈ ವಿಷಯವನ್ನು ಗಮನಿಸಿ 27.12.2017ರಂದು ಹೊರಡಿಸಿದ ಅವೈಜ್ಞಾನಿಕ ನೋಟಿಫಿಕೇಶನ್ ಅನ್ನು ರದ್ದುಪಡಿಸಲು ಮನವಿ ಮಾಡಲಾಯಿತು. ಈ ಮೂಲಕ ಕೋವಿಡ್ ಸಂಕಷ್ಟದಿಂದಿರುವ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಹಾಗೂ ಬೆಸ್ಕಾಂ ಸಂಸ್ಥೆಗೆ ಆಗುವ ಲಾಭದ ಸದುಪಯೋಗ ಪಡಿಸಬೇಕು ಎಂದು ಮನವಿ ಕೋರಿದೆ.

ಸಚಿವರು ತಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿದ್ದಾರೆ ಎಂದು ಅಶ್ವತ್ಥನಾರಾಯಣ ಅವರು ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷರಾದ ಬಿ. ನಾರಾಯಣ, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷರಾದ ಜಿ. ಮಂಜುನಾಥ್, ಮಾಜಿ ಮೇಯರ್ ಕಟ್ಟಾ ಸತ್ಯನಾರಾಯಣ, ಮಾಜಿ ಉಪ ಮೇಯರ್ ಎಸ್. ಹರೀಶ್, ನಟರಾಜು ಹಾಗೂ ಮುಖಂಡರಾದ ಪ್ರಕಾಶ್ ಶೇಷರಾಘವಾಚಾರ್ ಅವರು ಈ ನಿಯೋಗದಲ್ಲಿದ್ದರು.

bengaluru

LEAVE A REPLY

Please enter your comment!
Please enter your name here