ಬೆಂಗಳೂರು: ಸರ್ಕಾರಿ ನೌಕರರ ರಜೆ, ವೇತನ, ಸೇವಾವಧಿ ವಿಸ್ತರಣೆ, ಪಿಂಚಣಿ, ನಿವೃತ್ತಿ, ವರ್ಗಾವಣೆ ಹಾಗೂ ಸೇವಾ ದಾಖಲೆಗಳಿಗೆ ಸಂಬಂಧಿಸಿದ 35 ಸೇವೆಗಳನ್ನು ಕರ್ನಾಟಕ ಸರ್ಕಾರ ಸಕಾಲ ಕಾಯ್ದೆಯ ವ್ಯಾಪ್ತಿಗೆ ತಂದಿದೆ.
ಇದರಿಂದ ಸರ್ಕಾರಿ ಇಲಾಖೆಗಳು ಹಾಗೂ ಸಂಸ್ಥೆಗಳು ತಮ್ಮ ಸಿಬ್ಬಂದಿಗೆ ನಿಗದಿತ ಕಾಲಮಿತಿಯಲ್ಲಿ ಸೇವೆಗಳನ್ನು ಒದಗಿಸಲು ನೆರವಾಗಲಿದೆ ಎಂದು ಸರ್ಕಾರ ತಿಳಿಸಿದೆ. ವೈದ್ಯಕೀಯ ರಜೆಗೆ ಸಂಬಂಧಿಸಿದ ಸೇವೆಗಳೂ ಇದರ ವ್ಯಾಪ್ತಿಯಲ್ಲಿವೆ.

ಮೇಲ್ಮನವಿ ಇತ್ಯರ್ಥಕ್ಕೂ ಕಾಲಮಿತಿ
ಸಕಾಲದಡಿ ಈಗಿರುವ ಸಕ್ಷಮ ಪ್ರಾಧಿಕಾರ ಹಾಗೂ ಮೇಲ್ಮನವಿ ಪ್ರಾಧಿಕಾರದ ವ್ಯವಸ್ಥೆ ಮುಂದುವರಿಯಲಿದೆ. ಮೇಲ್ಮನವಿಗಳ ಇತ್ಯರ್ಥಕ್ಕೂ ಕಾಲಮಿತಿ ನಿಗದಿಪಡಿಸಲಾಗಿದೆ ಎಂದು ಸರ್ಕಾರ ಹೇಳಿದೆ.
ಸಂಬಂಧಿತ ಸುದ್ದಿ: ಭೌತಿಕ ಆರ್ಟಿಐ ಅರ್ಜಿಗಳೂ ಸಕಾಲ ವ್ಯಾಪ್ತಿಗೆ; ಆನ್ಲೈನ್ ನೋಂದಣಿ ಕಡ್ಡಾಯ.
