Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ನಗರ
  • ಮಂಗಳೂರು
  • Karnataka Caste Census Report | ಜಾತಿಗಣತಿ ವಿಚಾರದಲ್ಲಿ ಎಲ್ಲರಿಗೂ ನ್ಯಾಯ ಒದಗಿಸಲಾಗುವುದು, ಯಾವುದೇ ಆತುರದ ನಿರ್ಧಾರವಿಲ್ಲ: ಡಿಸಿಎಂ ಡಿ ಕೆ ಶಿವಕುಮಾರ್
  • ರಾಜಕೀಯ
  • ಮಂಗಳೂರು

Karnataka Caste Census Report | ಜಾತಿಗಣತಿ ವಿಚಾರದಲ್ಲಿ ಎಲ್ಲರಿಗೂ ನ್ಯಾಯ ಒದಗಿಸಲಾಗುವುದು, ಯಾವುದೇ ಆತುರದ ನಿರ್ಧಾರವಿಲ್ಲ: ಡಿಸಿಎಂ ಡಿ ಕೆ ಶಿವಕುಮಾರ್

The Bengaluru Live April 20, 2025 3:15 PM
📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಮಂಗಳೂರು, ಏ.20 “ತುಳಿತಕ್ಕೆ ಒಳಗಾದವರಿಗೆ ಶಕ್ತಿ ತುಂಬಿ, ಎಲ್ಲರಿಗೂ ನ್ಯಾಯ ಒದಗಿಸಿಕೊಡಲಾಗುವುದು, ಈ ವಿಚಾರದಲ್ಲಿ ಯಾವುದೇ ಆತುರದ ನಿರ್ಧಾರ ಇರುವುದಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಧರ್ಮಸ್ಥಳದಲ್ಲಿ ಮಂಜುನಾಥನ ದರ್ಶನ ಪಡೆದ ನಂತರ ಶಿವಕುಮಾರ್ ಅವರು ಭಾನುವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಜಾತಿಗಣತಿ ಗೆ ಕೆಲವು ಸಮುದಾಯಗಳ ವಿರೋಧ ವ್ಯಕ್ತವಾಗುತ್ತಿದ್ದು, ರಾಹುಲ್ ಗಾಂಧಿ ಅವರ ಪತ್ರದಲ್ಲಿ ಬೇಗ ವರದಿ ಜಾರಿ ಮಾಡಿ ಎಂದು ಹೇಳಲಾಗಿದೆ ಎಂದು ಕೇಳಿದಾಗ, “ನಾನು ಆ ಪತ್ರವನ್ನು ನೋಡಿಲ್ಲ. ಕಾಂಗ್ರೆಸ್ ಎಲ್ಲಾ ಸಮುದಾಯವನ್ನು ಸರಿಸಮನಾಗಿ ತೆಗೆದುಕೊಂಡು ಹೋಗಲು ಬದ್ಧವಾಗಿದೆ. ಎಲ್ಲರಿಗೂ ನ್ಯಾಯ ಒದಗಿಸುವ ಉದ್ದೇಶವಿದೆ. ಯಾರಿಗಾದರೂ ಅನ್ಯಾಯ ಮಾಡಬೇಕು ಎಂದು ಎಲ್ಲಿಯೂ ಹೇಳಿಲ್ಲ. ತುಳಿತಕ್ಕೆ ಒಳಗಾದವರಿಗೆ ಶಕ್ತಿ ತುಂಬುವುದು ಪ್ರಮುಖ ಉದ್ದೇಶ. ಜೈನರು, ಒಕ್ಕಲಿಗರು, ಲಿಂಗಾಯತರು ಸೇರಿದಂತೆ ಎಲ್ಲಾ ಸಮುದಾಯದಲ್ಲೂ ಬಡವರಿದ್ದಾರೆ. ಎಲ್ಲರಿಗೂ ನ್ಯಾಯ ಒದಗಿಸಿಕೊಡಲಾಗುವುದು” ಎಂದು ಹೇಳಿದರು.

ವರದಿ ಅವೈಜ್ಞಾನಿಕ ಎಂಬ ಆರೋಪಗಳ ಬಗ್ಗೆ ಕೇಳಿದಾಗ, “ನಾವು ಈಗಿನ್ನು ಚರ್ಚೆ ಮಾಡುತ್ತಿದ್ದೇವೆ. ಕೆಲವರು ಸಲಹೆ ನೀಡುತ್ತಿದ್ದಾರೆ. ಈ ಸಮೀಕ್ಷೆಯಲ್ಲಿ 90% ಜನರಿಂದ ಮಾಹಿತಿ ಪಡೆದಿದ್ದಾರೆ. ನಾವಿನ್ನೂ ವರದಿ ತೆರೆದು ಅಧ್ಯಯನ ಆರಂಭಿಸಿದ್ದೇವೆ. ಇದಕ್ಕೆ ಸಮಯ ಬೇಕು. ಈ ವಿಚಾರದಲ್ಲಿ ಯಾವುದೇ ಆತುರದ ತೀರ್ಮಾನವಿಲ್ಲ” ಎಂದು ತಿಳಿಸಿದರು.

ಭಾವನೆಗಿಂತ ಬದುಕು ಮುಖ್ಯ

ಕರಾವಳಿ ಭಾಗದಲ್ಲಿ ಪಕ್ಷ ಬಲವರ್ಧನೆಗೆ ಆದ್ಯತೆ ನೀಡಲಾಗುತ್ತಿದೆಯೇ ಎಂದು ಕೇಳಿದಾಗ, “ಕರಾವಳಿ ಭಾಗದಲ್ಲಿ ಜನರ ಬದುಕು ಮುಖ್ಯ. ಭಾವನೆಗಿಂತ ಬದುಕು ಮುಖ್ಯ. ಹೀಗಾಗಿ ನಾವು ಭಾವನೆಗಿಂತ ಬದುಕು ಮುಖ್ಯ. ಈ ಭಾಗದಲ್ಲಿ ನಮ್ಮ ಪಕ್ಷದಿಂದ ಕೇವಲ ಇಬ್ಬರು ಶಾಸಕರು ಮಾತ್ರ ಗೆದ್ದಿದ್ದಾರೆ. ಈ ಭಾಗದಲ್ಲಿ ಎಲ್ಲರಿಗೂ ಒಳ್ಳೆಯದಾಗಬೇಕು. ರಾಜ್ಯದಲ್ಲಿ ಬಲಿಷ್ಠ ಸರ್ಕಾರ ಆಡಳಿತದಲ್ಲಿದೆ. ಇಲ್ಲಿ ನಮ್ಮ ಪ್ರತಿನಿಧಿಗಳು ಬೇಕು. ಈ ಭಾಗದಲ್ಲಿ ಜನ ಬಿಜೆಪಿ ಗೆಲ್ಲಿಸಿದರು. ಆದರೂ ಈ ಭಾಗದ ಕುಟುಂಬಗಳಿಗೆ ಕಾಂಗ್ರೆಸ್ ನಿಂದ ಸಹಾಯವಾಗುತ್ತಿದೆಯೇ ಹೊರತು ಬಿಜೆಪಿಯಿಂದಲ್ಲ. ಇದನ್ನು ಜನರಿಗೆ ಮನದಟ್ಟು ಮಾಡಬೇಕು” ಎಂದು ತಿಳಿಸಿದರು.

ಕರಾವಳಿಯನ್ನು ಹಿಂದುತ್ವದ ಭದ್ರಕೋಟೆ ಎಂದು ಪರಿಗಣಿಸಲಾಗಿದ್ದು, “ಕೇವಲ ಹಿಂದೂ ಧರ್ಮ ಮಾತ್ರವಲ್ಲ, ಎಲ್ಲ ಧರ್ಮಕ್ಕೂ ಇದು ಭದ್ರಕೋಟೆ.ಇಲ್ಲಿರುವ ನೀರು, ದೇವಾಲಯ, ದರ್ಗಾ, ವಾತಾವರಣ, ಪರಿಸರ ಜಾತಿ ಧರ್ಮದ ಮೇಲೆ ಇಲ್ಲ. ಈ ಭಾಗದ ಶಿಕ್ಷಣ ಸಂಸ್ಥೆ, ಬ್ಯಾಂಕುಗಳು ಎಲ್ಲಾ ವರ್ಗಕ್ಕೂ ಇವೆ. ಕೆಲವರು ಮಾತ್ರ ನಾವು ಹಿಂದೂ ನಾವು ಮಾತ್ರ ಮುಂದು ಎಂದು ಹೇಳುತ್ತಾರೆ. ಹಿಂದೂ, ಮುಸಲ್ಮಾನ, ಸಿಖ್, ಕ್ರೈಸ್ತ, ಜೈನ ಸೇರಿ ನಾವೆಲ್ಲರೂ ಒಂದು ಎಂದು ಹೇಳುತ್ತೇವೆ” ಎಂದರು.

ಬಿಜೆಪಿಯವರು ಇಲ್ಲಿ ಹಿಂದುತ್ವದ ಮೇಲೆ ರಾಜಕೀಯ ಮಾಡುತ್ತಾರೆ ಎಂದು ಕೇಳಿದಾಗ, “ಅವರು ಏನಾದರೂ ಮಾಡಿಕೊಳ್ಳಲಿ. ನಾವು ಎಲ್ಲಾ ವರ್ಗದ ಜನರಿಗೆ ರಕ್ಷಣೆ ಮಾಡುತ್ತೇವೆ. ಬಿಜೆಪಿಯವರ ಬಗ್ಗೆ ನಾವ್ಯಾಕೆ ಟೀಕೆ ಮಾಡೋಣ?” ಎಂದು ಪ್ರಶ್ನಿಸಿದರು.

ನಾವು ಧರ್ಮ ಕಾಪಾಡಿಕೊಳ್ಳಬೇಕು

“ನಮಗೆ ಧರ್ಮ ಬೇಕು, ಧರ್ಮಕ್ಕೆ ನಾವಲ್ಲ. ಈ ಧರ್ಮಕ್ಷೇತ್ರ ಜನಸೇವೆ, ಸಾಮಾಜಿಕ, ಶೈಕ್ಷಣಿಕ ಸೇವೆ ಮಾಡಿಕೊಂಡು ಬಂದಿದೆ. ಇದಕ್ಕೆ ಸಹಕಾರ ನೀಡಬೇಕಾಗಿರುವುದು ನಮ್ಮ ಕರ್ತವ್ಯ. ನಾವು ಧರ್ಮವನ್ನು ಕಾಪಾಡಬೇಕು.

ಕರಾವಳಿ ನಮ್ಮ ರಾಜ್ಯದ ಮುಖ್ಯವಾದ ಅಂಗ. ಮನುಷ್ಯನಿಗೆ ದೇಹದ ಅಂಗಗಳು ಎಷ್ಟು ಮುಖ್ಯವೋ, ಕರಾವಳಿ ಭಾಗವೂ ಅಷ್ಟೇ ಮುಖ್ಯ” ಎಂದು ತಿಳಿಸಿದರು.

About the Author

The Bengaluru Live

Administrator

Visit Website View All Posts

Post navigation

Previous: Pothole-free roads in Karnataka | ಕರ್ನಾಟಕದಲ್ಲಿ ಗುಂಡಿ ಮುಕ್ತ ರಸ್ತೆಗಳ ನಿರ್ವಹಣೆ ಗುರಿ – ಎಕೋಫಿಕ್ಸ್ ರೆಡಿಮಿಕ್ಸ್ ಪದಾರ್ಥ ಬಳಕೆ: ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಟ್ರೈ ಪಾರ್ಟಿ ​ಒಡಂಬಡಿಕೆಗೆ ಸಹಿ
Next: Terror Attack | ಕಾರ್ಮಿಕ ಸಚಿವ ಸಂತೋಷ ಲಾಡ್ ಸಾರಥ್ಯ : ಶ್ರೀನಗರದಿಂದ ವಿಶೇಷ ವಿಮಾನದ ಮೂಲಕ 178ಕನ್ನಡಿಗರು ಸುರಕ್ಷಿತವಾಗಿ ಇಂದು ಮಧ್ಯಾಹ್ನ ತಾಯ್ನಾಡಿಗೆ

Related Stories

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೆಲೆ ಏರಿಕೆ ವಿರುದ್ಧ ಫಲಕ ಹಿಡಿದ ಬಿ.ಎಸ್. ಯಡಿಯೂರಪ್ಪ ಮತ್ತು ಬಿಜೆಪಿ ನಾಯಕರು
  • ಬೆಂಗಳೂರು
  • ರಾಜಕೀಯ

ಬೆಲೆ ಏರಿಕೆ ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ಪ್ರತಿಭಟನೆ

The Bengaluru Live November 11, 2026 4:30 PM
ಮೈಕ್ರೋಫೋನ್‌ಗಳ ನಡುವೆ ಪತ್ರಿಕಾಗೋಷ್ಠಿಯಲ್ಲಿ ಕುಳಿತಿರುವ ಸಚಿವ ರಿಜ್ವಾನ್ ಅರ್ಷದ್
  • ಕರ್ನಾಟಕ
  • ರಾಜಕೀಯ

ಪ್ರಹ್ಲಾದ ಜೋಶಿಗೆ ರಿಜ್ವಾನ್ ಅರ್ಷದ್ ಪ್ರತಿಕ್ರಿಯೆ: ಇ20 ಪೆಟ್ರೋಲ್‌ನ ಸ್ವತಂತ್ರ ಪರೀಕ್ಷೆಗೆ ಆಗ್ರಹ

The Bengaluru Live November 11, 2026 10:33 AM
ಸಮಾವೇಶದ ವೇದಿಕೆಯಲ್ಲಿ ಮಾತನಾಡುತ್ತಿರುವ ಪ್ರಿಯಾಂಕ್ ಖರ್ಗೆ
  • ಕರ್ನಾಟಕ
  • ರಾಜಕೀಯ

ಆರ್‌ಎಸ್‌ಎಸ್ ಮತ್ತು ಕಾರ್ಟ್ರಿಡ್ಜ್ ವಶದ ಕುರಿತ ಹೇಳಿಕೆ: ಪ್ರಿಯಾಂಕ್ ಖರ್ಗೆ ವಿರುದ್ಧ ಎಫ್‌ಐಆರ್‌ಗೆ ಆಗ್ರಹ

The Bengaluru Live November 11, 2026 9:55 AM

Latest Post

ನ.14ಕ್ಕೆ ಕಾವೇರಿ ಐಟಿ ಸೆಲ್ ಉದ್ಘಾಟನೆ: ನೋಂದಣಿ ಇಲಾಖೆ ಕಾಮಗಾರಿಗಳಿಗೂ ಪರಮೇಶ್ವರ್ ಚಾಲನೆ parameshwara-file-photo
  • ಕರ್ನಾಟಕ

ನ.14ಕ್ಕೆ ಕಾವೇರಿ ಐಟಿ ಸೆಲ್ ಉದ್ಘಾಟನೆ: ನೋಂದಣಿ ಇಲಾಖೆ ಕಾಮಗಾರಿಗಳಿಗೂ ಪರಮೇಶ್ವರ್ ಚಾಲನೆ

November 12, 2026 7:13 PM
ಎಸ್‌ಸಿ, ಎಸ್‌ಟಿ ಸಮುದಾಯಗಳ ಅನುದಾನ ಗೋಚರವಾಗಿರಲಿ, ಸುಪ್ರೀಂ ಕೋರ್ಟ್ ಮಾರ್ಗಸೂಚಿಯಂತೆ ಕೆಲಸ ಮಾಡಿ: ಸಿಎಂ ಶಿವಕುಮಾರ್ cm-scst-council-meeting-20261112
  • ಕರ್ನಾಟಕ

ಎಸ್‌ಸಿ, ಎಸ್‌ಟಿ ಸಮುದಾಯಗಳ ಅನುದಾನ ಗೋಚರವಾಗಿರಲಿ, ಸುಪ್ರೀಂ ಕೋರ್ಟ್ ಮಾರ್ಗಸೂಚಿಯಂತೆ ಕೆಲಸ ಮಾಡಿ: ಸಿಎಂ ಶಿವಕುಮಾರ್

November 12, 2026 7:10 PM
ನಮ್ಮ ಮೆಟ್ರೊ ಹಣಕಾಸು ಲೆಕ್ಕದಲ್ಲಿ ರಾಜ್ಯದ ಕುಚೇಷ್ಟೆ: 29 ಸಾವಿರ ಕೋಟಿ ಸಾಲ ರಾಜ್ಯದ ಕಾಲಂಗೆ ಎಂದ ತೇಜಸ್ವಿ ಸೂರ್ಯ tejasvi-surya-metro-presser-20261112
  • ಕರ್ನಾಟಕ

ನಮ್ಮ ಮೆಟ್ರೊ ಹಣಕಾಸು ಲೆಕ್ಕದಲ್ಲಿ ರಾಜ್ಯದ ಕುಚೇಷ್ಟೆ: 29 ಸಾವಿರ ಕೋಟಿ ಸಾಲ ರಾಜ್ಯದ ಕಾಲಂಗೆ ಎಂದ ತೇಜಸ್ವಿ ಸೂರ್ಯ

November 12, 2026 7:07 PM
ಬಿರ್ಸಾ ಮುಂಡಾ 151ನೇ ಜನ್ಮ ಜಯಂತಿ: ನ.15ಕ್ಕೆ ದೇಶಾದ್ಯಂತ ಬಿಜೆಪಿ ವಿಶೇಷ ಕಾರ್ಯಕ್ರಮ, ಛಲವಾದಿ ನಾರಾಯಣಸ್ವಾಮಿ ಮಾಹಿತಿ bjp-chalavadi-complaint-commissioner-20261107-1738
  • ಕರ್ನಾಟಕ

ಬಿರ್ಸಾ ಮುಂಡಾ 151ನೇ ಜನ್ಮ ಜಯಂತಿ: ನ.15ಕ್ಕೆ ದೇಶಾದ್ಯಂತ ಬಿಜೆಪಿ ವಿಶೇಷ ಕಾರ್ಯಕ್ರಮ, ಛಲವಾದಿ ನಾರಾಯಣಸ್ವಾಮಿ ಮಾಹಿತಿ

November 12, 2026 7:04 PM
ಓಕಳೀಪುರಂ ಅಷ್ಟಪಥ ಕಾರಿಡಾರ್ ಸುತ್ತ ರಸ್ತೆ ಡಾಂಬರೀಕರಣ ಓಕಳಿಪುರಂ ಎಂಟು ಪಥದ ಕಾರಿಡಾರ್ ಬಳಿ ರಾತ್ರಿ ಡಾಂಬರೀಕರಣ ಕಾಮಗಾರಿಯಲ್ಲಿ ರಸ್ತೆ ರೋಲರ್
  • ಬೆಂಗಳೂರು

ಓಕಳೀಪುರಂ ಅಷ್ಟಪಥ ಕಾರಿಡಾರ್ ಸುತ್ತ ರಸ್ತೆ ಡಾಂಬರೀಕರಣ

November 12, 2026 3:58 PM
ಪಿಂಕ್ ಲೈನ್ ಉದ್ಘಾಟನೆಯ ಅಂತಿಮ ಪಟ್ಟಿಯಿಂದ ನನ್ನ ಭಾಷಣ ಕೈಬಿಟ್ಟಿದ್ದಾರೆ: ಕೃಷ್ಣ ಬೈರೇಗೌಡ ಮೆಟ್ರೋ ಕಾಮಗಾರಿ ಸ್ಥಳದಲ್ಲಿ ಕೃಷ್ಣ ಬೈರೇಗೌಡ ಮತ್ತು ಅಧಿಕಾರಿಗಳು
  • ಬೆಂಗಳೂರು

ಪಿಂಕ್ ಲೈನ್ ಉದ್ಘಾಟನೆಯ ಅಂತಿಮ ಪಟ್ಟಿಯಿಂದ ನನ್ನ ಭಾಷಣ ಕೈಬಿಟ್ಟಿದ್ದಾರೆ: ಕೃಷ್ಣ ಬೈರೇಗೌಡ

November 12, 2026 3:50 PM

ನೀವು ತಪ್ಪಿಸಿಕೊಂಡಿರಬಹುದು

parameshwara-file-photo
  • ಕರ್ನಾಟಕ

ನ.14ಕ್ಕೆ ಕಾವೇರಿ ಐಟಿ ಸೆಲ್ ಉದ್ಘಾಟನೆ: ನೋಂದಣಿ ಇಲಾಖೆ ಕಾಮಗಾರಿಗಳಿಗೂ ಪರಮೇಶ್ವರ್ ಚಾಲನೆ

The Bengaluru Live November 12, 2026 7:13 PM
cm-scst-council-meeting-20261112
  • ಕರ್ನಾಟಕ

ಎಸ್‌ಸಿ, ಎಸ್‌ಟಿ ಸಮುದಾಯಗಳ ಅನುದಾನ ಗೋಚರವಾಗಿರಲಿ, ಸುಪ್ರೀಂ ಕೋರ್ಟ್ ಮಾರ್ಗಸೂಚಿಯಂತೆ ಕೆಲಸ ಮಾಡಿ: ಸಿಎಂ ಶಿವಕುಮಾರ್

The Bengaluru Live November 12, 2026 7:10 PM
tejasvi-surya-metro-presser-20261112
  • ಕರ್ನಾಟಕ

ನಮ್ಮ ಮೆಟ್ರೊ ಹಣಕಾಸು ಲೆಕ್ಕದಲ್ಲಿ ರಾಜ್ಯದ ಕುಚೇಷ್ಟೆ: 29 ಸಾವಿರ ಕೋಟಿ ಸಾಲ ರಾಜ್ಯದ ಕಾಲಂಗೆ ಎಂದ ತೇಜಸ್ವಿ ಸೂರ್ಯ

The Bengaluru Live November 12, 2026 7:07 PM
bjp-chalavadi-complaint-commissioner-20261107-1738
  • ಕರ್ನಾಟಕ

ಬಿರ್ಸಾ ಮುಂಡಾ 151ನೇ ಜನ್ಮ ಜಯಂತಿ: ನ.15ಕ್ಕೆ ದೇಶಾದ್ಯಂತ ಬಿಜೆಪಿ ವಿಶೇಷ ಕಾರ್ಯಕ್ರಮ, ಛಲವಾದಿ ನಾರಾಯಣಸ್ವಾಮಿ ಮಾಹಿತಿ

The Bengaluru Live November 12, 2026 7:04 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ನ.14ಕ್ಕೆ ಕಾವೇರಿ ಐಟಿ ಸೆಲ್ ಉದ್ಘಾಟನೆ: ನೋಂದಣಿ ಇಲಾಖೆ ಕಾಮಗಾರಿಗಳಿಗೂ ಪರಮೇಶ್ವರ್ ಚಾಲನೆ
  • ಎಸ್‌ಸಿ, ಎಸ್‌ಟಿ ಸಮುದಾಯಗಳ ಅನುದಾನ ಗೋಚರವಾಗಿರಲಿ, ಸುಪ್ರೀಂ ಕೋರ್ಟ್ ಮಾರ್ಗಸೂಚಿಯಂತೆ ಕೆಲಸ ಮಾಡಿ: ಸಿಎಂ ಶಿವಕುಮಾರ್
  • ನಮ್ಮ ಮೆಟ್ರೊ ಹಣಕಾಸು ಲೆಕ್ಕದಲ್ಲಿ ರಾಜ್ಯದ ಕುಚೇಷ್ಟೆ: 29 ಸಾವಿರ ಕೋಟಿ ಸಾಲ ರಾಜ್ಯದ ಕಾಲಂಗೆ ಎಂದ ತೇಜಸ್ವಿ ಸೂರ್ಯ
  • ಬಿರ್ಸಾ ಮುಂಡಾ 151ನೇ ಜನ್ಮ ಜಯಂತಿ: ನ.15ಕ್ಕೆ ದೇಶಾದ್ಯಂತ ಬಿಜೆಪಿ ವಿಶೇಷ ಕಾರ್ಯಕ್ರಮ, ಛಲವಾದಿ ನಾರಾಯಣಸ್ವಾಮಿ ಮಾಹಿತಿ
©Copyright 2025 The Bengaluru Live All rights reserved. | MoreNews by AF themes.