Home ರಾಮನಗರ ನಾಡಪ್ರಭು ಕೆಂಪೇಗೌಡರ ವೀರ ಸಮಾಧಿಗೆ ಮುಖ್ಯಮಂತ್ರಿಗಳಿಂದ ಗೌರವ ಸಮರ್ಪಣೆ

ನಾಡಪ್ರಭು ಕೆಂಪೇಗೌಡರ ವೀರ ಸಮಾಧಿಗೆ ಮುಖ್ಯಮಂತ್ರಿಗಳಿಂದ ಗೌರವ ಸಮರ್ಪಣೆ

189
0
Karnataka Chief Minister pays tribute to Nadaprabhu Kempegowda

ಕೆಂಪೇಗೌಡರ ಸಮಾಧಿಯನ್ನು ಪ್ರೇಕ್ಷಣೀಯ ಹಾಗೂ ಪ್ರೇರಣಾ ಸ್ಥಳವನ್ನಾಗಿ ಅಭಿವೃದ್ಧಿ: ಸಿಎಂ

ರಾಮನಗರ:

ನಾಡಪ್ರಭು ಕೆಂಪೇಗೌಡರ ವೀರ ಸಮಾಧಿಯನ್ನು ಪ್ರೇಕ್ಷಣೀಯ ಹಾಗೂ ಪ್ರೇರಣಾ ಸ್ಥಳವನ್ನಾಗಿ ಅಭಿವೃದ್ಧಿ ಮಾಡುವುದು ಸರ್ಕಾರದ ಉದ್ದೇಶ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಮಾಗಡಿ ತಾಲ್ಲೂಕಿನ ಕೆಂಪಾಪುರದಲ್ಲಿ ನಾಡಪ್ರಭು ಕೆಂಪೇಗೌಡರ ವೀರ ಸಮಾಧಿಗೆ ಗೌರವ ನಮನಗಳನ್ನು ಸಮರ್ಪಿಸಿ ಮಾತನಾಡುತ್ತಿದ್ದರು.

ಕೆಂಪಾಪುರದಲ್ಲಿ ವೀರಸಮಾಧಿಯನ್ನು 40 ಎಕರೆ ಪ್ರದೇಶದಲ್ಲಿ ನಿಮಾಣ ಮಾಡಲಾಗುತ್ತಿದೆ. 20 ಎಕರೆ ಕೆರೆ ಇದ್ದು, ಮಿಕ್ಕಿದ್ದು ಅಭಿವೃದ್ಧಿಗೆ ಬಳಸಲಾಗುತ್ತದೆ. ಸುಮಾರು 100 ಕೋಟಿ ರೂ.ಗಳ ವೆಚ್ಚದಲ್ಲಿ ಈ ಸ್ಥಳ ಅಭಿವೃದ್ಧಿಯಾಗಲಿದೆ. ಇದಕ್ಕೆ ಈಗಾಗಲೇ 50 ಕೋಟಿ ರೂ.ಗಳನ್ನು ಹಾಗೂ ಮೂರ್ತಿಗಾಗಿಯೇ ಪ್ರತ್ಯೇಕ ಅನುದಾನವನ್ನು ಒದಗಿಸಲಾಗಿದೆ. ಇನ್ನೂ ಹೆಚ್ಚಿನ ಅನುದಾನದ ಅಗತ್ಯವಿದೆ ಎನ್ನುವ ಮಾಹಿತಿಯಿದ್ದು, ಅಗತ್ಯ ಹಣಕಾಸಿನ ನೆರವನ್ನು ಆಯವ್ಯಯದಲ್ಲಿ ಒದಗಿಸಿ, ಕಾರ್ಯ ನಿಲ್ಲದಂತೆ ನೋಡಿಕೊಳ್ಳಲಾಗುವುದು. ಇಲ್ಲಿ ಆಂಫಿಥಿಯೇಟರ್, ಮುಂತಾದವುಗಳನ್ನು ನಿರ್ಮಿಸಲಾಗುವುದು. ಆದಷ್ಟು ಬೇಗನೆ ಕೆಲಸ ಪೂರ್ಣಗೊಳ್ಳಲಿ ಎಂದರು.

ಕೃತಜ್ಞತೆ: ಕೆಂಪಾಪುರ ಜನರು ಈ ಕಾರ್ಯಕ್ಕೆ ತಮ್ಮ ಜಮೀನುಗಳನ್ನು ನೀಡಿದ್ದಾರೆ. ಅವರ ಉದಾರತೆ, ದೊಡ್ಡಗುಣದಿಂದ ಮಾತ್ರ ಈ ಕೆಲಸ ಸಾಧ್ಯವಾಗಿದೆ ಎಂದು ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.

ಆದರ್ಶ ನಾಡಪ್ರಭು: ನಾಡಪ್ರಭು ಕೆಂಪೇಗೌಡರು ಇಂದಿಗೂ ಒಬ್ಬ ಆದರ್ಶ ನಾಡಪ್ರಭು. ಊರು ಕಟ್ಟಿರುವ ಅವರ ವಿಧಿವಿಧಾನ ಅದ್ಭುತ. ಅವರ ಕಲ್ಪನೆ, ದೂರದೃಷ್ಟಿ ಅನನ್ಯ. ಇಡೀ ಬೆಂಗಳೂರಿನ ಚಿತ್ರ ಪರಿಗಣಿಸಿದರೆ. ಜನವಸತಿ , ಮಾರುಕಟ್ಟೆಗಳು, ಕೆರೆಗಳು, ನೀರು ಹವಾಮಾನ ಗಳನ್ನು ಗಮನದಲ್ಲಿಟ್ಟುಕೊಂಡು ಆ ಸಂದರ್ಭದಲ್ಲಿ ದೂರದೃಷ್ಟಿಯಿಂದ ನಾಡು ಕಟ್ಟಿದ್ದಾರೆ ಎಂದು ತಿಳಿಸಿದರು. ಕೆಂಪೇಗೌಡರ ಜೀವನಚರಿತ್ರೆ ಎಲ್ಲರಿಗೂ ಮಾರ್ಗದರ್ಶಕವಾಗಲಿ ಎಂದರು.

LEAVE A REPLY

Please enter your comment!
Please enter your name here