ಬೆಂಗಳೂರು:
ರಾಜ್ಯಪಾಲರು ಖಾತೆ ಹಂಚಿಕೆ ಪಟ್ಟಿಗೆ ಅನುಮೋದನೆ ನೀಡಿದ್ದು,ಇನ್ಮುಂದೆ ಎಲ್ಲಾ ಸಚಿವರು ತಮ್ಮತಮ್ಮ ಖಾತೆಯನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುತ್ತಾರೆಂಬ ವಿಶ್ವಾಸವಿರುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಖಾತೆ ಹಂಚಿಕೆ ಬಳಿಕ ಮೊದಲಬಾರಿ ಸುದ್ದಿಗಾರರಿಗೆ ನಗರದಲ್ಲಿಂದು ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ,ಹೊಸಹೊಸ ಬದಲಾವಣೆ ತರುವ ನಿಟ್ಟಿನಲ್ಲಿ ಖಾತೆ ಹಂಚಿಕೆ ಮಾಡಲಾಗಿದೆ ಎಂದರು.
ಇಲ್ಲಿ ಓದಿ: ಹೊಸ ಸಚಿವರ ಖಾತೆಗಳ ಹಂಚಿಕೆ: ಸಿಎಂಗೆ ಬೆಂಗಳೂರ್ ಅಭಿವೃದ್ಧಿ ಸೇರಿ ಹಣಕಾಸು, ಆರಗ ಜ್ಞಾನೇಂದ್ರಗೆ ಗೃಹ ಖಾತೆ
ಕೇಳಿದ್ದೇ ಒಂದೂ ಕೊಟ್ಟಿದ್ದೇ ಮತ್ತೊಂದು ಎಂಬ ಸಚಿವ ಆನಂದ್ ಸಿಂಗ್ ಅಸಮಾಧಾನ ಹಾಗೂ ದೇವೇಗೌಡರ ಭೇಟಿ ಕುರಿತ ಪ್ರೀತಂಗೌಡ ಅವರ ಆಕ್ಷೇಪದ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ಎಲ್ಲರೂ ಆತ್ಮಿಯರೇ.ಯಾರಿಗೂ ಅಸಮಾಧಾನವಿಲ್ಲ ಎಲ್ಲರನ್ನೂ ಕರೆದು ಮಾತನಾಡುತ್ತೇನೆ ಎಂದರು.