ಪೆಟ್ರೋಲ್ ,ಡೀಸಲ್ ಬೆಲೆ ಏರಿಕೆ ಬಿ.ಜೆ.ಪಿ.ನಾಯಕರು ಮೌನವಹಿಸಿರುವ ಕಾರಣ ಹೇಳಿ-ರಾಮಲಿಂಗರೆಡ್ಡಿ
ಬೆಂಗಳೂರು:
ಬಿ.ಜೆ.ಪಿ ಸರ್ಕಾರದ ಪೆಟ್ರೋಲ್ 66ಬಾರಿ ಹೆಚ್ಚಳ, ಡೀಸೆಲ್ ಬೆಲೆ ಏರಿಕೆ ,ದಿನಬಳಕೆ ಆಹಾರ ಪದಾರ್ಥಗಳ ಬೆಲೆ ಏರಿಕೆ ನೀತಿಯನ್ನು ವಿರೋಧಿಸಿ ಕುರುಬರಹಳ್ಳಿ ವೃತ್ತದಿಂದ ಶಂಕರಮಠ ಸರ್ಕಲ್ ವರಗೆ ಸೈಕಲ್ ಜಾಥಾವನ್ನು ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷರಾದ
ರಾಮಲಿಂಗಾರೆಡ್ಡಿರವರು ನೇತೃತ್ವದಲ್ಲಿ ಸೈಕಲ್ ಜಾಥ ಹಮ್ಮಿಕೊಳ್ಳಲಾಗಿತ್ತು.
ರಾಮಲಿಂಗಾರೆಡ್ಡಿರವರು ಮಾತನಾಡಿ ಬಿ.ಜೆ.ಪಿ.ಪಕ್ಷದವರು ಅಧಿಕಾರದ ಅಮಲಿನಲ್ಲಿ ತೇಲುತ್ತಿದ್ದಾರೆ .ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಆಡಳಿತದಲ್ಲಿ ಅಂತರಾಷ್ಟೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಿಂದ ಪೆಟ್ರೋಲ್ ,ಡೀಸಲ್ ಬೆಲೆ ಏರಿಕೆ ಮಾಡಲಾಗಿತ್ತು.ಬಿ.ಎಸ್.ಯಡಿಯೂರಪ್ಪ ,ಈಶರಪ್ಪ ,ಶೋಭಾ ಕಾರಂದ್ಲಜೆ ,ಸೃತಿ ಇರಾನಿ ರವರುಗಳು ಪ್ರತಿಭಟನೆ ಮಾಡಿದ್ದರು ಇಂದು ಪೆಟ್ರೋಲ್ 105ರೂಪಾಯಿ ಡೀಸಲ್ 96ರೂಪಾಯಿ ಅಡುಗೆ ಆನಿಲ 840ರೂಪಾಯಿ ಆಗಿದೆ ಬಿ.ಜೆ.ಪಿ.ಪಕ್ಷದ ಹೋರಾಟಗಾರರು ಮೌನವಹಿಸಿದ್ದಾರೆ ಯಾಕೆ ಎಂದು ಕೇಳಿದರು.
ಬಿ.ಕೆ.ಹರಿಪ್ರಸಾದ್ ರವರು ಮಾತನಾಡಿ ಬಡವರ ಬಗ್ಗೆ ಕಾಳಜಿ ಇಲ್ಲ ಮತ್ತು ಸೌಜನ್ಯವಿಲ್ಲದ,ಬಡವರ ಜೀವನವನ್ನು ತತ್ತರಗೊಳಿಸಿದ ಕೇಂದ್ರ ಮತ್ತು ರಾಜ್ಯ ಬಿ.ಜೆ.ಪಿ.ಯಂತಹ ನೀಚ ಸರ್ಕಾರ ಇತಿಹಾಸದಲ್ಲಿ ಕಂಡಿಲ್ಲ.
ಕೊವಿಡ್ ಲಸಿಕೆ 140ಕೋಟಿ ಜನಸಂಖ್ಯೆ 280ಕೋಟಿ ಲಸಿಕೆ ಬೇಕು ಅದರೆ ಈವರಗೆ 36ಕೋಟಿ ಲಸಿಕೆ ಮಾತ್ರ ನೀಡಿದ್ದಾರೆ .ಬಡವರಿಗೆ ಚಿಕಿತ್ಯೆ ಸಿಗುತ್ತಿಲ್ಲ ,ಕೊವಿಡ್ ನಿಂದ ಮೃತಪಟ್ಟವರ ಅಂತ್ಯಸಂಸ್ಕಾರವಾಗುತ್ತಿಲ್ಲ .ಗಂಗಾ ನದಿಯಲ್ಲಿ 20ಸಾವಿರ ಮೃತ ಪಟ್ಟ ದೇಹದಲ್ಲಿ ಬೀಸಾಡಿದ್ದಾರೆ ಇಂತಹ ದುರಂತಕ್ಕೆ ಕಾರಣಕರ್ತರು ಬಿ.ಜೆ.ಪಿ.ಸರ್ಕಾರ. ಆತ್ಮನಿರ್ಭಾರ್ ಅಲ್ಲ ಆತ್ಮಬರ್ಭರ್ ಭಾರತವಾಗಿದೆ ಎಂದು ಹೇಳಿದರು.
ಸಲೀಮ್ ಅಹಮ್ಮದ್ ರವರು ಮಾತನಾಡಿ ಕೊರೋನ ಸಾಂಕ್ರಮಿಕ ರೋಗ ನಿಯಂತ್ರಣ ಮಾಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ.
ಕೊರೋನ ಸಂಕಷ್ಟದ ಸಮಯದಲ್ಲಿ ಬಡವರು ಮತ್ತು ಮಧ್ಯಮ ವರ್ಗದವರು ಜೀವನ ನಡೆಸುವುದು ಕಷ್ಟ .ಇಂತಹ ಸಂದರ್ಭದಲ್ಲಿ ತೈಲ ಬೆರಿಕೆಯನ್ನ ಇಳಿಸಬೇಕು ಎಂದು ಒತ್ತಾಯಿಸಿದರು.
ಎಮ್.ಶಿವರಾಜು ರವರು ಮಾತನಾಡಿ ಪೆಟ್ರೋಲ್ ,ಡೀಸಲ್ ಮತ್ತು ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದ ಬಡವರು ,ಕೂಲಿಕಾರ್ಮಿಕರು ಜೀವನ ನಡೆಸುವುದು ಕಷ್ಟವಾಗಿದೆ .ಮಾನವೀಯತೆ ಇಲ್ಲದ ಕ್ರೂರ ಸರ್ಕಾರವಾಗಿದೆ ಎಂದು ಹೇಳಿದರು.
ಎಸ್.ಕೇಶವಮೂರ್ತಿ ರವರು ತೈಲ ಬೆಲೆ ಏರಿಕೆಯಿಂದ ಬಡವರ ಜೀವನದ ಮೇಲೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಬರೆ ಎಳೆದಿದ್ದಾರೆ.
ಪೆಟ್ರೋಲ್ ಮತ್ತು ಡೀಸಲ್ ಬೆಲೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಬೆಲೆ ಇಳಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ಬಿ.ಎಂ.ಟಿ.ಸಿ.ಮಾಜಿ ಉಪಾಧ್ಯಕ್ಷರಾದ ವಿ.ಎಸ್.ಆರಾಧ್ಯ ,ಮಾಜಿ ನಾಮ ನಿರ್ದೇಶನ ಪಾಲಿಕೆ ಸದಸ್ಯರಾದ ಕೃಷ್ಣಪ್ಪ ರವರು ಭಾಗವಹಿಸಿದ್ದರು.
ಮಹಿಳಾ ಕಾಂಗ್ರೆಸ್ ,ಯುವ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರುಗಳು ಭಾಗವಹಿಸಿದ್ದರು .