ಬೆಂಗಳೂರು:
ಸೌತ್ ಎಂಡ್ ಸರ್ಕಲ್ ನಲ್ಲಿರುವ ಕೆಂಪೇಗೌಡ ನಗರದ ಸಹಕಂದಾಯ ಅಧಿಕಾರಿ ಕಛೇರಿಗೆ ಶುಕ್ರವಾರ ಸಂಜೆ ಭೇಟಿ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಆಸ್ತಿ ದಾಖಲೆಗಳ ಡಿಜಿಟೈಸೇಷನ್ ವ್ಯವಸ್ಥೆ ಪರಿಶೀಲನೆ ನಡೆಸಿದರು.
ಸಹ ಕಂದಾಯ ಅಧಿಕಾರಿ ಕಛೇರಿಯಲ್ಲಿ ನಡೆಯುತ್ತಿರುವ ಆಸ್ತಿ ಪುಸ್ತಕಗಳ ಸ್ಕಾನಿಂಗ್ ಅನ್ನು ವೀಕ್ಷಿಸಿದರು. ಮಾಹಿತಿ ಪಡೆದರು.
ಜಯನಗರದಲ್ಲಿರುವ ಬಿಬಿಎಂಪಿ ಕಂದಾಯ ಕಚೇರಿಗೆ ಇಂದು ಭೇಟಿನೀಡಿ ಆಸ್ತಿ ದಾಖಲೆಗಳ ಡಿಜಿಟಲೀಕರಣ ಪ್ರಕ್ರಿಯೆಯನ್ನು ಪರಿಶೀಲಿಸಿದೆ. pic.twitter.com/ED4leHrGBn
— DK Shivakumar (@DKShivakumar) December 1, 2023
ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಪ್ರತಿಕ್ರಿಯಿಸಿ, ರಿಜಸ್ಟರ್ ಪುಸ್ತಕದಲ್ಲಿ ಬರೆದಿರುವುದನ್ನು ಸ್ಕ್ಯಾನಿಂಗ್ ಮಾಡಿ, ಸ್ಕ್ಯಾನಿಂಗ್ ಆಗಿರುವ ಗುಣಮಟ್ಟವನ್ನು ಪರಿಶೀಲಿಸಲಾಗುತ್ತದೆ. ತದನಂತರ ಮಾಹಿತಿಯನ್ನು ಟೈಪ್ ಮಾಡಿ ವೆರಿಫಿಕೇಷನ್ ಮಾಡಿದ ನಂತರ ಸಾಪ್ಟ್ ವೇರ್ ನಲ್ಲಿ ಪ್ರತಿಯೊಂದು ಆಸ್ತಿಯನ್ನು ಗಣಕಯಂತ್ರದ ಮೂಲಕ ಡಿಜಿಟೈಸೇಷನ್ ಮಾಡಲಾಗುತ್ತದೆ. ಇದನ್ನು ಯಾರೂ ನಕಲು ಮಾಡಲು ಸಾಧ್ಯವಿಲ್ಲ. ಒಮ್ಮೆ ಡಿಜಿಟೈಸೇಷನ್ ಮಾಡಿದ ನಂತರ ಆಸ್ತಿ ಖಾತಾವನ್ನು ಆನ್ ಲೈನ್ ಮೂಲಕ ಎಲ್ಲಿ ಬೇಕಾದರೂ ನೋಡಬಹುದು ಎಂದು ಮಾಹಿತಿ ನೀಡಿದರು. ಡಿಸಿಎಂ ಪಾಲಿಕೆ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿ ನಗರದಾದ್ಯಂತ ತ್ವರಿತಗತಿಯಲ್ಲಿ ಎಲ್ಲಾ ಆಸ್ತಿಗಳನ್ನು ಡಿಜಿಟೈಸೇಷನ್ ಮಾಡಲು ಸೂಚನೆ ನೀಡಿದರು.