Home ಬೆಂಗಳೂರು ನಗರ ತೀವ್ರ ಜ್ವರ: ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆಸ್ಪತ್ರೆಗೆ ದಾಖಲು

ತೀವ್ರ ಜ್ವರ: ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆಸ್ಪತ್ರೆಗೆ ದಾಖಲು

13
0
Demand for 10 to 15 percent to release ₹710 crore contractor payment: HD Kumaraswamy direct accusation against Karnataka government
Demand for 10 to 15 percent to release ₹710 crore contractor payment: HD Kumaraswamy direct accusation against Karnataka government
Advertisement
bengaluru

ಬೆಂಗಳೂರು:

ತೀವ್ರ ಜ್ವರ ಹಿನ್ನೆಲೆ ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಇಂದು ಬುಧವಾರ ಬೆಳಗಿನ ಜಾವ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಏಕಾಏಕಿ ಆರೋಗ್ಯದಲ್ಲಿ ಕೊಂಚ ಏರುಪೇರಾಗಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರು ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆ ಇಂದು ಅವರ ಕೋಲಾರ ಭೇಟಿ ರದ್ದು ಮಾಡಲಾಗಿದೆ. ಕೋಲಾರದ ಶ್ರೀನಿವಾಸಪುರದಲ್ಲಿ ಕುಮಾರಸ್ವಾಮಿ ಅವರು ರೈತರ ಜಮೀನುಗಳಿಗೆ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿತ್ತು, ಅರಣ್ಯ ಇಲಾಖೆ ಒತ್ತುವರಿ ತೆರವು ವೇಳೆ ರೈತರ ಬೆಳೆಗಳು ನಷ್ಟವಾಗಿತ್ತು. ಈ ಪರಿಣಾಮ ರೈತರೊಂದಿಗೆ ಮಾತನಾಡಲು ಹೆಚ್​ಡಿಕೆ ಆಗಮಿಸಲಿದ್ದರು. ಆದರೆ ಈಗ ಆಸ್ಪತ್ರೆಗೆ ದಾಖಲಾದ ಹಿನ್ನೆಲೆ ಕೋಲಾರ ಪ್ರವಾಸ ರದ್ದಾಗಿದೆ.

ಮೂರು ತಿಂಗಳ ಹಿಂದೆ ಸಹ ಆಸ್ಪತ್ರೆಗೆ ದಾಖಲು: ಕರ್ನಾಟಕ ವಿಧಾನಸಭೆ ಚುನಾವಣೆ ಸಮಯದಲ್ಲಿ ಪಕ್ಷದ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ವೇಳೆಯೂ ಆಯಾಸದಿಂದಾಗಿ ಜ್ವರ ಕಾಣಿಸಿಕೊಂಡು ಕುಮಾರಸ್ವಾಮಿಯವರು ಆಸ್ಪತ್ರೆಗೆ ದಾಖಲಾಗಿದ್ದರು.

bengaluru bengaluru


bengaluru

LEAVE A REPLY

Please enter your comment!
Please enter your name here