Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ನಗರ
  • ಬೆಂಗಳೂರು ನಗರ
  • ಡಾ: ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
  • ಬೆಂಗಳೂರು ನಗರ

ಡಾ: ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

The Bengaluru Live March 27, 2022 11:00 PM
Karnataka Government announces Karnataka Ratna award for Late Actor Puneeth Raj Kumar

ಡಾ: ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ದೊಡ್ಡ ಪ್ರಮಾಣದಲ್ಲಿ ಅರ್ಥಪೂರ್ಣ ಕಾರ್ಯಕ್ರಮ

ಬೆಂಗಳೂರು:

ಡಾ: ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನವನ್ನು ಸರ್ಕಾರ ಘೋಷಿಸಿದೆ. ಅವರ ಕುಟುಂಬದವರ ಬಳಿ ಮಾತನಾಡಿ ಪ್ರಶಸ್ತಿ ಪ್ರದಾನ ಮಾಡುವ ದಿನಾಂಕವನ್ನು ನಿಗದಿ ಮಾಡಲಾಗುವುದು. ಪುನೀತ್ ರಾಜ್‍ಕುಮಾರ್ ಅವರ ಪ್ರತಿಭೆ ಹಾಗೂ ಮಾನವೀಯ ಗುಣಗಳಿಗೆ ತಕ್ಕ ರೀತಿಯಲ್ಲಿ ಅರ್ಥಪೂರ್ಣವಾಗಿ ದೊಡ್ಡ ಪ್ರಮಾಣದಲ್ಲಿ ಕರ್ನಾಟಕ ರತ್ನ ನೀಡಲು ಚಿಂತನೆ ಮಾಡಿದ್ದು, ತಯಾರಿಯನ್ನೂ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಬಿಬಿಎಂಪಿ ನೌಕರರ ಕನ್ನಡ ಸಂಘ ಆಯೋಜಿಸಿದ್ದ ಡಾ: ರಾಜ್ ಕುಮಾರ್ ಗಾಜಿನ ಮನೆ, ಬಿಬಿಎಂಪಿ ಕಚೇರಿ ಆವರಣದಲ್ಲಿ ಡಾ: ಪುನೀತ್ ರಾಜ್‍ಕುಮಾರ್ ಅವರ ಕಂಚಿನ ಪುತ್ಥಳಿಯ ಅನಾವರಣ ಹಾಗೂ ಗಂಧದಗುಡಿ ಉದ್ಯಾನವನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

Karnataka Government announces Karnataka Ratna award for Late Actor Puneeth Raj Kumar

ಪುನೀತ್ ರಾಜ್‍ಕುಮಾರ್ ನಿಜವಾಗಿಯೂ ನಮ್ಮ ಕರ್ನಾಟಕದ ರತ್ನ. ಈ ರತ್ನದ ಪುತ್ಥಳಿಯನ್ನು ಬಿಬಿಎಂಪಿ ಕನ್ನಡ ನೌಕರರ ಸಂಘ ಅನಾವರಣ ಮಾಡಿರುವುದು ನಿಜವಾಗಿಯೂ ಪುನೀತ್ ರಾಜ್ ಕುಮಾರ್ ಅವರ ಬಗೆಗಿನ ಪ್ರೀತಿ ಬಹಳ ದೊಡ್ಡದು. ಅದರಲ್ಲಿ ಪ್ರೀತಿ, ವಿಶ್ವಾಸ, ಅಭಿಮಾನದ ಸಂಕೇತವಿದೆ ಎಂದರು.

ಡಾ: ರಾಜ್ ಕುಟುಂಬದ ಪ್ರಬುದ್ಧತೆ: ಪುನೀತ್ ರಾಜ್ ಕುಮಾರ್ ಕಾಲವಾದ ಸಂದರ್ಭದಲ್ಲಿ ಕುಟುಂಬ ಅತ್ಯಂತ ಮುತ್ಸದಿತನದಿಂದ ನಡೆದುಕೊಂಡಿದೆ. ಇದನ್ನು ಎಂದಿಗೂ ಮರೆಯಲಾಗದು. ಕಷ್ಟದಲ್ಲಿ ಸಂಯಮವನ್ನು ಉಳಿಸಿಕೊಳ್ಳುವುದು ಬಹಳ ಕಷ್ಟ. ಸಂತುಲನದ ಭಾವ, ಚಿಂತನೆ, ನಡವಳಿಕೆ ಬಹಳ ಮುಖ್ಯ. ಇದು ಅವರ ಕುಟುಂಬದವರು ಪ್ರಬುದ್ಧತೆಯನ್ನು ತೋರುತ್ತದೆ ಎಂದರು. ಪುನೀತ್ ರಾಜ್ ಕುಮಾರ್ ಅವರ ಜಾತ್ರೆ ನಿರಂತರವಾಗಿ ಸಾಗುತ್ತದೆ ಎಂದರು.

Karnataka Government announces Karnataka Ratna award for Late Actor Puneeth Raj Kumar

ಪುನೀತ್ ಕನ್ನಡದ ಉಸಿರು: ಪುನೀತ್ ರಾಜ್‍ಕುಮಾರ್ ಕೇವಲ ಹೆಸರಾಗಿ ಉಳಿದಿಲ್ಲ. ಪ್ರತಿಯೊಬ್ಬ ಕನ್ನಡಿಗನ ಉಸಿರಾಗಿ ಉಳಿದಿದ್ದಾರೆ. ಒಬ್ಬ ಮನುಷ್ಯ ಹೇಗೆ ಬದುಕಿದ ಎನ್ನುವುದನ್ನು ಅವರು ಇಲ್ಲದೇ ಇರುವಾಗ ತಿಳಿಯುತ್ತದೆ. ಅತ್ಯಂತ ಸಣ್ಣ ವಯಸ್ಸಿನಲ್ಲಿ ನಮ್ಮನ್ನು ನಗುನಗುತ್ತಲೇ ಬಿಟ್ಟುಹೋಗಿದ್ದಾರೆ. ಕನ್ನಡಿಗರ ಪ್ರತಿಯೊಂದು ಕುಟುಂಬದಲ್ಲಿ ತಮ್ಮ ಕುಟುಂಬದ ಸದಸ್ಯನೊಬ್ಬನನ್ನು ಕಳೆದುಕೊಂಡ ಭಾವನೆ ಇಡೀ ಕರ್ನಾಟದಲ್ಲಿ ಆವರಿಸಿದೆ. ಯಾದಗಿರಿ, ಹಾವೇರಿ, ಮೈಸೂರು ಹೀಗೆ ಕರ್ನಾಟಕದ ಮೂಲೆ ಮೂಲೆಗೆ ಹೋದಲ್ಲಿ ಅವರ ಭಾವಚಿತ್ರಗಳನ್ನು ಪೂಜಿಸುವುದನ್ನು ನಾವು ಕಾಣುತ್ತೇವೆ ಎಂದರು.

ಅವರ ಸಮಾಧಿಗೆ ಇಂದಿಗೂ ಅವರ ಅಭಿಮಾನಿಗಳ ದಂಡು ಬರುವುದನ್ನು ನೋಡಿದಾಗ ಆಶ್ಚರ್ಯವಾಗುತ್ತದೆ. ಎಷ್ಟು ಅದ್ಭುತವಾದ ಪ್ರೀತಿ ವಿಶ್ವಾಸವನ್ನು ಪುನೀತ್ ರಾಜ್‍ಕುಮಾರ್ ಗಳಿಸಿದ್ದರು ಎಂದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಪುನೀತ್ ರಾಜ್‍ಕುಮಾರ್ ನಮ್ಮ ನಡುವೆ ಇದ್ದಾರೆ ಎಂಬ ಭಾವನೆಯಿಂದ ನಮ್ಮ ಎಲ್ಲಾ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ಅವರನ್ನು ನಾವು ಕಳೆದುಕೊಂಡಿಲ್ಲ. ಆದರೆ ಅವರಿಂದ ಬಹಳಷ್ಟನ್ನು ಪಡೆದುಕೊಂಡಿದ್ದೇವೆ ಎಂದರು.

Karnataka Government announces Karnataka Ratna award for Late Actor Puneeth Raj Kumar

ಆಕರ್ಷಕ ನಗು: ಅವರ ನಗು ಕನ್ನಡಿಗರನ್ನಷ್ಟೇ ಅಲ್ಲ ಎಲ್ಲಾ ಭಾಷಿಕರನ್ನು ಆಕರ್ಷಸಿದೆ. ಅವರ ಆತ್ಮೀಯತೆ ಎಲ್ಲಾ ಬಾಷೆಯ ಮೇರು ನಟರನ್ನು ಸೆಳೆದಿದೆ. ಅವರ ಬಗ್ಗೆ ಅಭಿಮಾನದಿಂದ ಮಾತನಾಡಿದಾಗ ಅವರು ಗಳಿಸಿದ್ದ ಸ್ನೇಹ, ವಿಶ್ವಾಸವನ್ನು ತೋರಿಸುತ್ತದೆ.
ಅತ್ಯಂತ ಸಣ್ಣ ವಯಸ್ಸಿನಲ್ಲಿಯೇ ನಿರರ್ಗಳವಾಗಿ ಅಭಿನಯಿಸಬಲ್ಲವರಾಗಿದ್ದರು. ನನ್ನ ನಟನೆಗೆ ನಮ್ಮ ತಂದೆಯೇ ಕಾರಣ. ಪಾತ್ರದೊಳಗೆ ಹೋಗಿ ನಟನೆ ಮಾಡು. ತಂದೆ ಎದುರು ಮಾಡುತ್ತಿದ್ದೇನೆ ಎನ್ನುವ ಭಾವ ಇರಬಾರದು ಎಂದು ಅವರ ತಂದೆ ಹೇಳಿಕೊಟ್ಟಿದ್ದರು ಎಂದು ಪುನೀತ್ ತಿಳಿಸಿದ್ದನ್ನು ಮುಖ್ಯಮಂತ್ರಿಗಳು ಸ್ಮರಿಸಿದರು.

ಮುಗ್ಧತೆ: ಮೊದಲ ಚಿತ್ರದಿಂದ ಕೊನೆ ಚಿತ್ರದವರೆಗೂ ಪುನೀತ್ ಅವರ ನಟನೆಯಲ್ಲಿ ಮುಗ್ದತೆ ಉಳಿದುಕೊಂಡಿತ್ತು. ಮುಗ್ಧತೆ ದೇವರು ಕೊಡುವ ಕಾಣಿಕೆ. ಎಲ್ಲರಿಗೂ ಅದು ಬರುವುದಿಲ್ಲ. ಕೆಲವೇ ಕೆಲವರಿಗೆ ಅದನ್ನು ಕಾಪಾಡಿಕೊಂಡು ಹೋಗುವುದು ಬರುತ್ತದೆ. ಕನ್ನಡ ಚಿತ್ರರಂಗದಲ್ಲಿ ಮುಗ್ಧತೆಯನ್ನು ಕಾಪಾಡಿಕೊಂಡವರು ಡಾ: ರಾಜ್‍ಕುಮಾರ್ ಹಾಗೂ ಡಾ: ಪುನೀತ್ ರಾಜ್ ಕುಮಾರ್ ಇಬ್ಬರೇ ಎಂದರು.

Karnataka Government announces Karnataka Ratna award for Late Actor Puneeth Raj Kumar

ಈ ಸಂದರ್ಭದಲ್ಲಿ ಸಚಿವರಾದ ಮುನಿರತ್ನ, ವಿ ಸುನಿಲ್ ಕುಮಾರ್, ಸಂಸದ ಪಿಸಿ ಮೋಹನ್, ರಾಘವೇಂದ್ರ ರಾಜಕುಮಾರ್, ತಾರಾ, ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಪ್ರಶಸ್ತಿ ಪುರಸ್ಕೃತರು ಉಪಸ್ಥಿತರಿದ್ದರು.

About the Author

The Bengaluru Live

Administrator

Visit Website View All Posts

Post navigation

Previous: ಏಪ್ರಿಲ್ 05 ಕ್ಕೆ ರಾಜ್ಯಕ್ಕೆ ಪ್ರಧಾನಿಗಳ ಭೇಟಿ: ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ
Next: ಎಸ್. ಎಸ್.ಎಲ್ ಸಿ ಮಕ್ಕಳಿಗೆ ಶುಭ ಹಾರೈಸಿದ ಸಿಎಂ

Related Stories

ಸಿಸಿಬಿ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳನ್ನು ತೋರಿಸುವ ಬೆಂಗಳೂರು ನಗರ ಪೊಲೀಸ್ ವಿಡಿಯೊದ ದೃಶ್ಯ
  • ಅಪರಾಧ
  • ಬೆಂಗಳೂರು ನಗರ

ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದಲ್ಲಿ 32 ವರ್ಷದ ವ್ಯಕ್ತಿಯನ್ನು ಬಂಧಿಸಿದ ಬೆಂಗಳೂರು ಸಿಸಿಬಿ

The Bengaluru Live November 11, 2026 8:20 AM
ಹೆಣ್ಣೂರು–ಬಾಗಲೂರು ರಸ್ತೆಯಲ್ಲಿ ಹೊಸದಾಗಿ ಹಾಕಿದ ಕಾಂಕ್ರೀಟ್ ಪಕ್ಕದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು.
  • ಬೆಂಗಳೂರು ನಗರ

ಹೆಣ್ಣೂರು–ಬಾಗಲೂರು ರಸ್ತೆಯ 170 ಮೀಟರ್ ಭಾಗದಲ್ಲಿ ಕಾಂಕ್ರೀಟ್ ಹಾಕುವ ಕಾಮಗಾರಿ ಪೂರ್ಣ

The Bengaluru Live November 11, 2026 1:28 AM
ಎತ್ತರಿಸಿದ ಹಳಿಗಳ ಮೇಲೆ ಸಾಗುತ್ತಿರುವ ನಮ್ಮ ಮೆಟ್ರೋ ರೈಲು
  • ಬೆಂಗಳೂರು ನಗರ
  • ಕರ್ನಾಟಕ

ಬೆಂಗಳೂರು ಮೆಟ್ರೋ ಹಣಕಾಸು ವಿವಾದ: ಕರ್ನಾಟಕದ ಪಾಲು ₹65,291 ಕೋಟಿ ಎಂದ ಕಾಂಗ್ರೆಸ್

The Bengaluru Live November 11, 2026 12:25 AM

Latest Post

ಓಕಳೀಪುರಂ ಅಷ್ಟಪಥ ಕಾರಿಡಾರ್ ಸುತ್ತ ರಸ್ತೆ ಡಾಂಬರೀಕರಣ ಓಕಳಿಪುರಂ ಎಂಟು ಪಥದ ಕಾರಿಡಾರ್ ಬಳಿ ರಾತ್ರಿ ಡಾಂಬರೀಕರಣ ಕಾಮಗಾರಿಯಲ್ಲಿ ರಸ್ತೆ ರೋಲರ್
  • ಬೆಂಗಳೂರು

ಓಕಳೀಪುರಂ ಅಷ್ಟಪಥ ಕಾರಿಡಾರ್ ಸುತ್ತ ರಸ್ತೆ ಡಾಂಬರೀಕರಣ

November 12, 2026 3:58 PM
ಪಿಂಕ್ ಲೈನ್ ಉದ್ಘಾಟನೆಯ ಅಂತಿಮ ಪಟ್ಟಿಯಿಂದ ನನ್ನ ಭಾಷಣ ಕೈಬಿಟ್ಟಿದ್ದಾರೆ: ಕೃಷ್ಣ ಬೈರೇಗೌಡ ಮೆಟ್ರೋ ಕಾಮಗಾರಿ ಸ್ಥಳದಲ್ಲಿ ಕೃಷ್ಣ ಬೈರೇಗೌಡ ಮತ್ತು ಅಧಿಕಾರಿಗಳು
  • ಬೆಂಗಳೂರು

ಪಿಂಕ್ ಲೈನ್ ಉದ್ಘಾಟನೆಯ ಅಂತಿಮ ಪಟ್ಟಿಯಿಂದ ನನ್ನ ಭಾಷಣ ಕೈಬಿಟ್ಟಿದ್ದಾರೆ: ಕೃಷ್ಣ ಬೈರೇಗೌಡ

November 12, 2026 3:50 PM
ಕಾರ್ಯದರ್ಶಿ ಹುದ್ದೆಗೆ ಕೆಪಿಸಿಸಿಗೆ 920 ಅರ್ಜಿ; ಸಂದರ್ಶನದ ಮೂಲಕ 112 ಮಂದಿ ಆಯ್ಕೆ, ತಲಾ ಎರಡು ಕ್ಷೇತ್ರಗಳ ಜವಾಬ್ದಾರಿ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡುತ್ತಿರುವ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್
  • ಕರ್ನಾಟಕ

ಕಾರ್ಯದರ್ಶಿ ಹುದ್ದೆಗೆ ಕೆಪಿಸಿಸಿಗೆ 920 ಅರ್ಜಿ; ಸಂದರ್ಶನದ ಮೂಲಕ 112 ಮಂದಿ ಆಯ್ಕೆ, ತಲಾ ಎರಡು ಕ್ಷೇತ್ರಗಳ ಜವಾಬ್ದಾರಿ

November 12, 2026 2:35 PM
ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ರದ್ದು: ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಕರ್ನಾಟಕ ಭಾರತದ ಸುಪ್ರೀಂ ಕೋರ್ಟ್ — ಕಡತ ಚಿತ್ರ
  • ಕರ್ನಾಟಕ

ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ರದ್ದು: ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಕರ್ನಾಟಕ

November 12, 2026 1:47 PM
ಯಾದಗಿರಿಯಲ್ಲಿ 50,000 ರೂ. ಲಂಚ ಪಡೆಯುತ್ತಿದ್ದ ಗುರುಮಠಕಲ್ ಪೊಲೀಸ್ ಕಾನ್‌ಸ್ಟೆಬಲ್ ಲೋಕಾಯುಕ್ತ ಬಲೆಗೆ ಕರ್ನಾಟಕ ಲೋಕಾಯುಕ್ತ ಕಚೇರಿ — ಕಡತ ಚಿತ್ರ
  • ಕರ್ನಾಟಕ

ಯಾದಗಿರಿಯಲ್ಲಿ 50,000 ರೂ. ಲಂಚ ಪಡೆಯುತ್ತಿದ್ದ ಗುರುಮಠಕಲ್ ಪೊಲೀಸ್ ಕಾನ್‌ಸ್ಟೆಬಲ್ ಲೋಕಾಯುಕ್ತ ಬಲೆಗೆ

November 12, 2026 1:41 PM
ಕೆಪಿಎಸ್‌ಸಿ ಪರೀಕ್ಷಾ ಭದ್ರತೆ ಕುರಿತು ಜಿಲ್ಲಾಧಿಕಾರಿಗಳು, ಎಸ್‌ಪಿಗಳೊಂದಿಗೆ ಶಿವಕುಮಾರ್ ಸಭೆ ಕೆಪಿಎಸ್‌ಸಿ ಪರೀಕ್ಷಾ ಭದ್ರತೆ ಪರಿಶೀಲನೆಯ ವಿಡಿಯೊ ಸಭೆಯಲ್ಲಿ ಕರ್ನಾಟಕದ ಅಧಿಕಾರಿಗಳು
  • ಕರ್ನಾಟಕ
  • ಶಿಕ್ಷಣ

ಕೆಪಿಎಸ್‌ಸಿ ಪರೀಕ್ಷಾ ಭದ್ರತೆ ಕುರಿತು ಜಿಲ್ಲಾಧಿಕಾರಿಗಳು, ಎಸ್‌ಪಿಗಳೊಂದಿಗೆ ಶಿವಕುಮಾರ್ ಸಭೆ

November 12, 2026 1:19 PM

ನೀವು ತಪ್ಪಿಸಿಕೊಂಡಿರಬಹುದು

ಓಕಳಿಪುರಂ ಎಂಟು ಪಥದ ಕಾರಿಡಾರ್ ಬಳಿ ರಾತ್ರಿ ಡಾಂಬರೀಕರಣ ಕಾಮಗಾರಿಯಲ್ಲಿ ರಸ್ತೆ ರೋಲರ್
  • ಬೆಂಗಳೂರು

ಓಕಳೀಪುರಂ ಅಷ್ಟಪಥ ಕಾರಿಡಾರ್ ಸುತ್ತ ರಸ್ತೆ ಡಾಂಬರೀಕರಣ

The Bengaluru Live November 12, 2026 3:58 PM
ಮೆಟ್ರೋ ಕಾಮಗಾರಿ ಸ್ಥಳದಲ್ಲಿ ಕೃಷ್ಣ ಬೈರೇಗೌಡ ಮತ್ತು ಅಧಿಕಾರಿಗಳು
  • ಬೆಂಗಳೂರು

ಪಿಂಕ್ ಲೈನ್ ಉದ್ಘಾಟನೆಯ ಅಂತಿಮ ಪಟ್ಟಿಯಿಂದ ನನ್ನ ಭಾಷಣ ಕೈಬಿಟ್ಟಿದ್ದಾರೆ: ಕೃಷ್ಣ ಬೈರೇಗೌಡ

The Bengaluru Live November 12, 2026 3:50 PM
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡುತ್ತಿರುವ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್
  • ಕರ್ನಾಟಕ

ಕಾರ್ಯದರ್ಶಿ ಹುದ್ದೆಗೆ ಕೆಪಿಸಿಸಿಗೆ 920 ಅರ್ಜಿ; ಸಂದರ್ಶನದ ಮೂಲಕ 112 ಮಂದಿ ಆಯ್ಕೆ, ತಲಾ ಎರಡು ಕ್ಷೇತ್ರಗಳ ಜವಾಬ್ದಾರಿ

The Bengaluru Live November 12, 2026 2:35 PM
ಭಾರತದ ಸುಪ್ರೀಂ ಕೋರ್ಟ್ — ಕಡತ ಚಿತ್ರ
  • ಕರ್ನಾಟಕ

ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ರದ್ದು: ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಕರ್ನಾಟಕ

The Bengaluru Live November 12, 2026 1:47 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಓಕಳೀಪುರಂ ಅಷ್ಟಪಥ ಕಾರಿಡಾರ್ ಸುತ್ತ ರಸ್ತೆ ಡಾಂಬರೀಕರಣ
  • ಪಿಂಕ್ ಲೈನ್ ಉದ್ಘಾಟನೆಯ ಅಂತಿಮ ಪಟ್ಟಿಯಿಂದ ನನ್ನ ಭಾಷಣ ಕೈಬಿಟ್ಟಿದ್ದಾರೆ: ಕೃಷ್ಣ ಬೈರೇಗೌಡ
  • ಕಾರ್ಯದರ್ಶಿ ಹುದ್ದೆಗೆ ಕೆಪಿಸಿಸಿಗೆ 920 ಅರ್ಜಿ; ಸಂದರ್ಶನದ ಮೂಲಕ 112 ಮಂದಿ ಆಯ್ಕೆ, ತಲಾ ಎರಡು ಕ್ಷೇತ್ರಗಳ ಜವಾಬ್ದಾರಿ
  • ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ರದ್ದು: ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಕರ್ನಾಟಕ
©Copyright 2025 The Bengaluru Live All rights reserved. | MoreNews by AF themes.