Home ಬೆಂಗಳೂರು ನಗರ ಯುವ ಜನೋತ್ಸವದ ಸ್ಪರ್ಧೆಗಳ ವಿಜೇತರ ಬಹುಮಾನ ಹೆಚ್ಚಿಸಿ ಸರ್ಕಾರದ ಆದೇಶ

ಯುವ ಜನೋತ್ಸವದ ಸ್ಪರ್ಧೆಗಳ ವಿಜೇತರ ಬಹುಮಾನ ಹೆಚ್ಚಿಸಿ ಸರ್ಕಾರದ ಆದೇಶ

52
0
Advertisement
bengaluru

ಬೆಂಗಳೂರು:

ರಾಜ್ಯ ಮಟ್ಟದ ಯುವ ಜನೋತ್ಸವದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸ್ಪರ್ಧಿಗಳ ಬಹುಮಾನ ಹೆಚ್ಚಿಸಿ ಸರ್ಕಾರದ ಆದೇಶ ಹೊರಡಿಸಲಾಗಿದೆ.

ಯುವಜನೋತ್ಸವದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸ್ಪರ್ಧಿಗಳ ಬಹುಮಾನ ಮೊತ್ತವನ್ನು ಹೆಚ್ಚಿಸುವುದಾಗಿ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ. ನಾರಾಯಣಗೌಡ ಅವರು ಘೋಷಿಸಿದ್ದರು. ವೈಯಕ್ತಿಕ ಸ್ಪರ್ಧೆಗಳಿಗೆ ಮೊದಲ ಬಹುಮಾನ 15 ಸಾವಿರ, ಎರಡನೇ ಬಹುಮಾನ 10 ಸಾವಿರ, ಮೂರನೇ ಬಹುಮಾನ 5 ಸಾವಿರ, ಗುಂಪುಗಳಿಗೆ ನೀಡುವ ಮೊದಲ ಬಹುಮಾನ 25 ಸಾವಿರ, ಎರಡನೇ ಬಹುಮಾನ 15 ಸಾವಿರಕ್ಕೆ ಹೆಚ್ಚಿಸಿ ಘೋಷಣೆ ಮಾಡಿದ್ದರು.

bengaluru bengaluru
Karnataka Government issues orders to increase prize amount to winners of youth festivals
Karnataka Government issues orders to increase prize amount to winners of youth festivals

ಸಚಿವ ಡಾ.ನಾರಾಯಣಗೌಡ ಅವರ ಆದೇಶದ ಮೇರೆಗೆ ರಾಜ್ಯ ಮಟ್ಟದ ಯುವ ಜನೋತ್ಸವ ಕಾರ್ಯಕ್ರಮದಲ್ಲಿ ವೈಯಕ್ತಿಕ ಮತ್ತು ಗುಂಪು ಸ್ಪರ್ಧೆಗಳ ವಿಜೇತರಿಗೆ ನೀಡಲಾಗುವ ಬಹುಮಾನದ ಮೊತ್ತವನ್ನು ಪರಿಷ್ಕರಿಸಿ ಸರ್ಕಾರದ ಆದೇಶ ಹೊರಡಿಸಲಾಗಿದೆ.

ರಾಜ್ಯ ಮಟ್ಟದ ಯುವ ಜನೋತ್ಸವದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಿಜೇತರಾಗುವವರ ಬಹುಮಾನ ಮೊತ್ತ ಕಡಿಮೆ ಇತ್ತು. ಹಾಗಾಗಿ ಆದಿಚುಂಚನಗಿರಿಯಲ್ಲಿ ನಡೆದ ರಾಜ್ಯ ಮಟ್ಟದ ಯುವ ಜನೋತ್ಸವ ಕಾರ್ಯಕ್ರಮದ ಸಂದರ್ಭದಲ್ಲಿ ಬಹುಮಾನ ಮೊತ್ತ ಹೆಚ್ಚಿಸಿ, ಘೋಷಣೆ ಮಾಡಿದ್ದೆ. ಅದರಂತೆ ಇದೀಗ ಅಧಿಕೃತ ಆದೇಶ ಹೊರಡಿಸಲಾಗಿದ್ದು, ಇದರಿಂದ ಹಲವು ಪ್ರತಿಭಾವಂತರಿಗೆ ಹೆಚ್ಚಿನ ಪ್ರೋತ್ಸಾಹ ಸಿಗಲಿದೆ. ಜೊತೆಗೆ ಯುವ ಜನೋತ್ಸವದ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ ಎಂದು ಸಚಿವ ಡಾ.ನಾರಾಯಣಗೌಡ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


bengaluru

LEAVE A REPLY

Please enter your comment!
Please enter your name here